Asianet Suvarna News Asianet Suvarna News

ಮದ್ಯದಂಗಡಿ ಶುರುವಾದ್ರೂ ದೇವ​ಸ್ಥಾ​ನ​ಗಳ ತೆರೆ​ಯುವ ಸುಳಿವೇ ಇಲ್ಲ..!

ಪ್ರತಿ​ಭ​ಟ​ನೆಗೂ ಮುಂದಾ​ಗುವ ಸೂಚ​ನೆ| ಸರ್ಕಾರದ ಆದ್ಯತೆ ಪ್ರಶ್ನಿ​ಸು​ತ್ತಿ​ರುವ ಭಕ್ತ​ರು| ಕೊಟ್ಟೂರೇಶ್ವರ ದೇವಸ್ಥಾನ, ಇತರ ದೇವಸ್ಥಾನಗಳನ್ನು ತೆರೆದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಕೈಗೊಳ್ಳಬೇಕು ಎಂಬ ಒತ್ತಾಯ|ಸುಪ್ರಭಾತ ಗೀತೆಗಳ ಬೆಳಗಿನ ಪ್ರಚಾರಕ್ಕೆ ಸರ್ಕಾರದಿಂದ ನಿಷೇಧ| ಮೈಕ್‌ ಮೂಲಕ ಪ್ರಾರ್ಥನೆ ಸಲ್ಲಿಸುವುದಕ್ಕೆ ಸರ್ಕಾರ ಅನುಮತಿ ನೀಡುವ ಮೂಲಕ ತಾರತಮ್ಯ ಮಾಡುವ ಮೂಲಕ ಭಕ್ತರನ್ನು ಅವಮಾನಿಸಿದೆ|

Devotees Demand to Government Temples Should Open Soon in Ballari District
Author
Bengaluru, First Published May 17, 2020, 10:30 AM IST

ಜಿ. ಸೋಮಶೇಖರ

ಕೊಟ್ಟೂರು(ಮೇ.17): ಲಾಕ್‌​ಡೌನ್‌ ಸಡಿಲ​ಗೊಂಡ​ರೂ ಕೊಟ್ಟೂರೇಶ್ವರ ದೇವಸ್ಥಾನ ಸೇರಿದಂತೆ ಇತರ ಧಾರ್ಮಿಕ ಕೇಂದ್ರ​ಗ​ಳ​ನ್ನು ಭಕ್ತರ ಪ್ರವೇಶಕ್ಕೆ ನಿಷೇಧಗೊಳಿಸಿ ಇನ್ನೂ ಕೆಲ ದಿನಗಳವರೆಗೆ ಮುಚ್ಚುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿರುವುದು ಸರ್ಕಾರದ ಆದ್ಯತೆಯನ್ನು ಪ್ರಶ್ನಿಸುವಂತಾಗಿದೆ.

ಸಾಮಾಜಿಕ ಅಂತರ ಕಾಪಾಡಲು ಆಗದು ಎನ್ನುವ ಕಾರಣಕ್ಕಾಗಿ ದೇವಸ್ಥಾನಗಳ ಪ್ರವೇಶಕ್ಕೆ ಭಕ್ತರಿಗೆ ನಿಷೇಧ ಮುಂದುವರಿದಿದ್ದರೂ ಮದ್ಯದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಪಾಡಬಹುದು ಎಂಬ ನಿರೀಕ್ಷೆಯನ್ನು ಸರ್ಕಾರ ಅದು ಹೇಗೆ ವ್ಯಕ್ತಮಾಡಿದೆ ಎಂದು ದೇವಸ್ಥಾನಗಳ ಭಕ್ತರು ಪ್ರಶ್ನಿಸುತ್ತಾರೆ. ಇದರಂತೆ ಕೊಟ್ಟೂರೇಶ್ವರ ದೇವಸ್ಥಾನ, ಇತರ ದೇವಸ್ಥಾನಗಳನ್ನು ತೆರೆದು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ​ಬಂದಿ​ವೆ. ಈ ಸಂಬಂಧ ಪ್ರತಿಭಟನೆಗೂ ಮುಂದಾಗುವ ಸೂಚನೆಯನ್ನು ಭಕ್ತರು ವ್ಯಕ್ತಪಡಿಸುತ್ತಿದ್ದಾರೆ.

ಹಗರಿಬೊಮ್ಮನಹಳ್ಳಿ: ಗುಡುಗು ಸಹಿತ ಭಾರೀ ಮಳೆ, ಸಿಡಿಲು ಬಡಿದು 19 ಕುರಿಗಳ ದುರ್ಮರಣ

ಇತಿಹಾಸದಲ್ಲೇ ಎಂದೆಂದೂ ಭಕ್ತರ ಪ್ರವೇಶಕ್ಕೆ ಬಂದ್‌ ಆಗದ ಕೊಟ್ಟೂರು ಕೊಟ್ಟೂರೇಶ್ವರ ದೇವಸ್ಥಾನ ಸೇರಿ ಇತರ ಹಲವು ಇದೇ ಮೊದಲ ಬಾರಿಗೆ ಲಾಕ್‌ಡೌನ್‌ ಕಾರಣಕ್ಕಾಗಿ ಬಂದ್‌ ಆದವು. ಆದರೆ ಕೇವಲ ದೇವಸ್ಥಾನಗಳನ್ನು ಬಂದ್‌ ಮಾಡಿ ಇತರರಿಗೆ ಪರ್ಯಾಯ ಮೂಲಕ ಬಾಗಿಲು ತೆರೆಯಲು ಅವಕಾಶ ಕೊಟ್ಟಂತೆ ಧಾರ್ಮಿಕ ಕೈಂಕರ್ಯಗಳನ್ನು ಕೈಗೊಳ್ಳಲು ಅವಕಾಶ ಮಾಡಿಕೊಡಬೇಕು. ದೇವಸ್ಥಾನಗಳನ್ನು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು, ಮಾಸ್ಕ್‌ ಧರಿಸಿಯೇ ಒಳಪ್ರವೇಶಿಸುವ ಕಡ್ಡಾಯ ಅಂಶಗಳನ್ನು ಹೇರಬಹುದಲ್ಲ ಎಂಬುದು ಭಕ್ತರ ಪ್ರಶ್ನೆಯಾಗಿದೆ.

ಈ ಮೊದಲು ಎಲ್ಲ ದೇವಸ್ಥಾನಗಳನ್ನು, ಮಂದಿರಗಳನ್ನು ಬಂದ್‌ ಮಾಡಿದ್ದ ಸರ್ಕಾರ, ಒಂದು ಕೋಮನಿ ಕೋರಿಕೆ ಮೇರೆಗೆ ಮೈಕ್‌ ಮೂಲಕ ಪ್ರಾರ್ಥನೆ ಸಲ್ಲಿಸುವ ಪದ್ಧತಿಗೆ ಇದೀಗ ಅವಕಾಶ ಮಾಡಿಕೊಟ್ಟಿದೆ. ಆದರೆ ದೇವಸ್ಥಾನಗಳು ಬೆಳಗ್ಗೆ ಪ್ರಚುರಪಡಿಸುತ್ತಿದ್ದ ಸುಪ್ರಭಾತ ಗೀತೆಗಳನ್ನು ಬಂದ್‌ ಮಾಡಿದ್ದಾರೆ. ಪ್ರಾರ್ಥನೆಗೆ ಅನುಕೂಲ ಮಾಡಿಕೊಟ್ಟಿರುವಂತೆ ಸುಪ್ರಭಾತ ಪ್ರಚಾರಕ್ಕೂ ಬೆಳಗಿನ ಜಾವ ದೇವಸ್ಥಾನಗಳಿಗೆ ಅನುಮತಿ ನೀಡಬೇಕೆಂಬುದು ಅವರೆಲ್ಲರ ವಾದ.

ಸುಪ್ರಭಾತ ಗೀತೆಗಳ ಬೆಳಗಿನ ಪ್ರಚಾರಕ್ಕೆ ಸರ್ಕಾರ ನಿಷೇಧ ಹೇರಲಾ​ಗಿ​ದೆ. ಮೈಕ್‌ ಮೂಲಕ ಪ್ರಾರ್ಥನೆ ಸಲ್ಲಿಸುವುದಕ್ಕೆ ಸರ್ಕಾರ ಅನುಮತಿ ನೀಡುವ ಮೂಲಕ ತಾರತಮ್ಯ ಮಾಡುವ ಮೂಲಕ ಭಕ್ತರನ್ನು ಅವಮಾನಿಸಿದೆ. ಈಗಲಾದರೂ ಸುಪ್ರಭಾತ ಗೀತೆಗಳ ಬೆಳಗಿನ ಪ್ರಚಾರಕ್ಕೆ ಅವಕಾಶ ಮತ್ತು ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಮುಕ್ತ ಅವಕಾಶ ನೀಡಬೇಕಿದೆ ಎಂದು ಚನ್ನಬಸವರಾಜ್‌ ಕೊಟ್ಟೂರು ಅವರು ಹೇಳಿದ್ದಾರೆ. 

"

Follow Us:
Download App:
  • android
  • ios