ಬಸವಣ್ಣನ ಹುಟ್ಟೂರು ಬಸವನ ಬಾಗೇವಾಡಿಯಲ್ಲೇ ಬಸವ ಜಯಂತಿ ಆಚರಿಸಿ..!

*   ಕಳೆದ 10 ವರ್ಷಗಳಿಂದ ನಡೆಯುತ್ತಿರುವ ಹೋರಾಟ ಮತ್ತೆ ತೀವ್ರ
*   ಈ ವರ್ಷವಾದ್ರು ಹುಟೂರಲ್ಲೇ ಆಗುತ್ತಾ ವಿಶ್ವಗುರುವಿನ ಜಯಂತಿ
*   ಮನವಿಗೆ ಸ್ಪಂದಿಸದಿದ್ದರೇ ಹೋರಾಟದ ಎಚ್ಚರಿಕೆ ನೀಡಿದ ಬಸವಾಭಿಮಾನಿಗಳು
 

Devotees Demand For Should Be Celebrate Basava Jayanti in Basavana Bagewadi grg

ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ

ವಿಜಯಪುರ(ಮಾ.29): ವಿಶ್ವಗುರು ಬಸವಣ್ಣವರ(Basavanna) ಜಯಂತಿ ವಿಚಾರದಲ್ಲಿ ಮತ್ತೆ ಹೋರಾಟ ಆರಂಭವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಸವ ಜಯಂತಿಯನ್ನು ಬಸವನ ಬಾಗೇವಾಡಿಯಲ್ಲಿ(Basavana Bagewadi) ಆಚರಿಸಬೇಕೆಂದು ಹಲವು ವರ್ಷಗಳಿಂದ ಹೋರಾಟ ಮಾಡಲಾಗ್ತಿದೆ. ಈ ವರ್ಷ ಸರ್ಕಾರ ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನ ಹುಟ್ಟೂರಲ್ಲೇ ಆಚರಿಸಬೇಕು ಎನ್ನುವ ಒತ್ತಾಯಗಳು ಕೇಳಿ ಬರಲಾರಂಭಿಸಿವೆ.
ವಿಧಾನಸೌಧದಲ್ಲೂ ಪ್ರತಿಧ್ವನಿಸಿದ ಬಸವ ಜಯಂತಿ..!

ವಿಧಾನಸೌಧದಲ್ಲೂ ಬಸವ ಜಯಂತಿ(Basava Jayanti) ಆಚರಣೆ ವಿಚಾರ ಪ್ರತಿಧ್ವನಿಸಿದೆ. ಹುಟ್ಟೂರಲ್ಲೇ ಬಸವ ಜಯಂತಿ ನಡೆಸಬೇಕು ಎನ್ನುವ ವಿಚಾರವನ್ನ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ(Prakash Rathod) ಪ್ರಸ್ತಾಪಿಸಿದ್ದಾರೆ. ಸರ್ಕಾರ(Government of Karnataka) ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಹೋರಾಟಗಾರರು ಸಹ ಇದೀಗ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದು, ಆದಷ್ಟು ಬೇಗ ನಿರ್ಧಾರ ಪ್ರಕಟ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

Vijayapura: 4 ತಿಂಗಳ ಹಸುಗೂಸಿನ ಜೊತೆಗೆ ಬಂದು ಪರೀಕ್ಷೆ ಬರೆದ ತಾಯಿ!

ಹುಟ್ಟೂರಲ್ಲೇ ವಿಶ್ವಗುರುವಿನ ಜಯಂತಿ ಆಚರಣೆ ಆಗಲಿ..!

ರಾಜ್ಯದಲ್ಲಿ(Karnataka) ವಿವಿಧ ಮಹನೀಯರು ಜಯಂತಿಯನ್ನು ಅವರ ಹುಟ್ಟೂರಿನಲ್ಲೇ ಆಚರಣೆ ಮಾಡಲಾಗುತ್ತದೆ. ಸರ್ಕಾರದಿಂದ ನಡೆಯುವ ಐತಿಹಾಸಿಕ ಪರಂಪರೆಯನ್ನ ನೆನಪಿಸುವಂತ ಉತ್ಸವಗಳು ಆಯಾ ಸ್ಥಳಗಳಲ್ಲೆ ನಡೆಯುತ್ತವೆ. ಉದಾಹರಣೆಗೆ ಬಾದಾಮಿ ಚಾಲುಕ್ಯರ ವೈಭವ ನೆನಪಿಸುವ ಚಾಲುಕ್ಯ ಉತ್ಸವ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲೆ ನಡೆಯುತ್ತೆ. ರನ್ನರನ್ನ ನೆನಪಿಸುವ ಉತ್ಸವ, ರನ್ನ ವೈಭವ ಮುಧೋಳದಲ್ಲೆ ನಡೆಯುತ್ತೆ. ವಿಜಯನಗರದ ಸಾಮ್ರಾಜ್ಯದ ಗತವೈಭವ ಸಾರುವ ಉತ್ಸವ ಹಂಪಿಯಲ್ಲೇ ನಡೆಯೋದು ಎಲ್ಲರಿಗು ಗೊತ್ತಿರುವ ವಿಚಾರವೆ. ಇದೆ ಮಾದರಿಯಲ್ಲಿ ವಿಶ್ವಕ್ಕೆ ಗುರುವಾಗಿರುವ, ಮಹಾ ಮಾನವತಾವಾದಿ ಬಸವೇಶ್ವರರ ಜಯಂತಿ ಅವರ ಹುಟ್ಟೂರಿನಲ್ಲೆ ನಡೆಯಬೇಕು ಎನ್ನುವ ಒತ್ತಾಯ ಸಹಜವಾಗಿಯೇ ಬರ್ತಿದೆ. ಆದ್ರೆ ಸರ್ಕಾರ ಮಾತ್ರ ಇದನ್ನ ಪರಿಗಣನೆಗೆ ತೆಗೆದುಕೊಳ್ಳದೆ ಇರೋದು ವಿಪರ್ಯಾಸ..

ಮಠಾಧೀಶರು, ಶ್ರೀಗಳಿಂದಲು ಹಲವು ಬಾರಿ ಮನವಿ..!

ಬಸವ ಜಯಂತಿ ಆಚರಣೆಯ ವಿಚಾರವಾಗಿ ಹೋರಾಟ ಶುರುವಾಗಿದ್ದು ಇಂದೊ ನಿನ್ನೆಯೋ ಅಲ್ಲ. ಕಳೆದ ದಶಕದಿಂದ ಇಂಥಹ ಒತ್ತಾಯ ಕೇಳಿ ಬರುತ್ತಿದೆ. ಪ್ರತಿ ವರ್ಷವು ಈ ಭಾಗದ ಶ್ರೀಗಳು, ಮಠಾಧೀಶರು, ಬಸವ ಪ್ರೇಮಿಗಳು, ಹೋರಾಟಗಾರರು ಸರ್ಕಾರಕ್ಕೆ ಮನವಿ ಮಾಡುತ್ತಲೆ ಬಂದಿದಾರೆ. ತಹಶೀಲ್ದಾರ್‌, ಜಿಲ್ಲಾಧಿಕಾರಿ, ಶಾಸಕರು, ಸಚಿವರು, ಕನ್ನಡ ಸಂಸ್ಕೃತಿ ಇಲಾಖೆ ಸೇರಿ ಸರ್ಕಾರಕ್ಕೆ ಮನವಿಗಳನ್ನ ಸಲ್ಲಿಸುತ್ತಲೇ ಬಂದಿದ್ದಾರೆ. ಈಗಾಗಲೇ ಈ ಸಂಬಂಧ ಸಚಿವರನ್ನ, ಶಾಸಕರನ್ನ ಭೇಟಿ ಮಾಡಿರುವ ಬಸವನ ಬಾಗೇವಾಡಿಯ ಮಠಾಧಿಶರು, ಹೋರಾಟಗಾರರು ಜಯಂತಿ ಆಚರಣೆ ಬಗ್ಗೆ ಮನವಿ ಮಾಡಿದ್ದರು. ಇದೀಗ ಪ್ರಕಾಶ ರಾಠೋಡ ಅವರು ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಕಾರಣ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದ್ದು,  ಈ ವರ್ಷ ಬಸವ ಜಯಂತಿ ಇಲ್ಲೇ ಆಗಬೇಕು ಎಂದಿದ್ದಾರೆ..

Vijayapura: ತಾಯಿಗಾಗಿ ದೇಗುಲವನ್ನೇ ಕಟ್ಟಿದ ಮಗ..!

ಬಸವ ಜಯಂತಿಯ ರೂವಾರಿ ಹರ್ಡೇಕರ್‌ ಮಂಜಪ್ಪನವರು..!

ಬಸವ ಜಯಂತಿ ಸಾರ್ವಜನಿಕವಾಗಿ ಆಚರಣೆಯ ರೂವಾರಿಗಳೇ ಕರ್ನಾಟಕದ ಗಾಂಧಿ ಹರ್ಡೇಕರ್‌ ಮಂಜಪ್ಪನವರು.  ಬಸವೇಶ್ವರರ ಜಯಂತಿ ಯಾವಾಗ ಆಚರಣೆಯಾಗಬೇಕು, ದಿನಾಂಕವನ್ನ ಹುಡುಕಿ ತೆಗೆದವರೇ ಹರ್ಡೇಕರ್‌ ಮಂಜಪ್ಪನವರು ಅನ್ನೋದು ವಿಶೇಷ. ಬಸವ ತತ್ವಗಳಿಗೆ, ಬಸವೇಶ್ವರರ ಆದರ್ಶಗಳಿಗೆ ಮನಸ್ಸೋತ ಹರ್ಡೇಕರ್‌ ಮಂಜಪ್ಪನವರು ಬಂಥನಾಳ ಶಿವಯೋಗಿಗಳಿಂದ ಲಿಂಗದೀಕ್ಷೆ ಪಡೆದರು. ವಿಶ್ವ ಗುರು ಎನಿಸಿಕೊಂಡ ಅಣ್ಣ ಬಸವಣ್ಣವರ ಜಯಂತಿ ಸಾರ್ವಜನಿಕವಾಗಿ ನಡೆಯಬೇಕು ಎಂದು ಒತ್ತಾಯಿಸಿ ಜಾರಿಗೆ ತಂದವರು ಹರ್ಡೇಕರ್‌ ಮಂಜಪ್ಪನವರು.

ಬಸವಾಭಿಮಾನಿಗಳ ಹೋರಾಟದ ಎಚ್ಚರಿಕೆ..!

ಬಸವನ ಬಾಗೇವಾಡಿಯಲ್ಲಿ ಜಯಂತಿ ಆಚರಣೆ ಮಾಡುವುದರಿಂದ ಬಸವ ತತ್ವಗಳ ಪ್ರಸಾರವಾಗಲು ಸಹಕಾರಿಯಾಗುತ್ತೆ. ಅಲ್ಲದೆ ಬಸವಣ್ಣನವರ ಹುಟ್ಟು, ಬಾಲ್ಯದ ಜೀವನ, ಈ ಭಾಗದ ಅಗ್ರಹಾರಗಳು ಜನರಿಗೆ ಪರಿಚಯವಾಗುತೆ. ಜೊತೆಗೆ ಈ ಭಾಗದ ಪ್ರವಾಸೋದ್ಯಮ(Tourism) ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇದರಿಂದಾಗಿ ಈ ಭಾಗದಲ್ಲಿ ಜನರಿಗೆ ಉದ್ಯೋಗ ದೊರೆಯುತ್ತದೆ ಎಂದು ಈ ಭಾಗದ ಜನರ ಆಶಯವಾಗಿದೆ.  ಇದರ ಜೊತೆಗೆ ಬಸವ ಪ್ರಶಸ್ತಿ ನೀಡುವ ಕಾರ್ಯಕ್ರಮ ಸಹ ಬಾಗೇವಾಡಿಯಿಂದ ಮಾಡಿದರೆ ಬಹಳ ಅರ್ಥಪೂರ್ಣವಾಗಿರುತ್ತೆ ಎಂಬುದು ಈ ಭಾಗದ ಮಠಾಧೀಶರ ವಾದವಾಗಿದೆ. ಒಂದು ವೇಳೆ ಸರ್ಕಾರ ಆದಷ್ಟು ಬೇಗ ನಿರ್ಧಾರ ಪ್ರಕಟಿಸದಿದ್ದರೆ ಮತ್ತೆ ಹೋರಾಟದ ಎಚ್ಚರಿಕೆಯನ್ನು ಈ ಭಾಗದ ಜನ ನೀಡಿದ್ದಾರೆ.
 

Latest Videos
Follow Us:
Download App:
  • android
  • ios