ಮಹಿಳೆಯರ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ
ಮಹಿಳೆಯರು ಹೆಚ್ಚು ಸ್ವಾಭಿಮಾನಿಗಳು. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಮಹಿಳೆಯರ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಸಲಹೆ ನೀಡಿದರು.
ಮೈಸೂರು : ಮಹಿಳೆಯರು ಹೆಚ್ಚು ಸ್ವಾಭಿಮಾನಿಗಳು. ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು. ಮಹಿಳೆಯರ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಸಲಹೆ ನೀಡಿದರು.
ನಗರದ ಕಲಾಮಂದಿರದಲ್ಲಿ ಮೈಸೂರು ಮಹಾನಗರ ಪಾಲಿಕೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ದೀನ ದಯಾಳ್ ಅಂತ್ಯೋದಯ- ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ವತಿಯಿಂದ ಸಾಮಾಜಿಕ ಕ್ರೋಡೀಕರಣ ಮತ್ತು ಸಾಂಸ್ಥಿಕ ಅಭಿವೃದ್ಧಿ ಉಪ ಘಟಕದಲ್ಲಿ ಸ್ವ- ಸಹಾಯ ಸಂಘಗಳಿಗೆ ದಶಸೂತ್ರಗಳ ಕುರಿತು ಆಯೋಜಿಸಿದ್ದ ಒಂದು ದಿನದ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಹಾಗೂ ವಿಶೇಷವಾಗಿ ಮಹಿಳಾ ಪೌರಕಾರ್ಮಿಕರ 50 ಸ್ವ-ಸಹಾಯ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಲ್ಲಿ ಸೇರಿರುವ 300 ಹೆಚ್ಚಿನ ಮಹಿಳಾ ಸ್ವಸಹಾಯ ಸಂಘದ ಮಹಿಳೆಯರು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಿ. ಮಹಿಳೆಯರನ್ನು ಬಡತನದ ರೇಖೆಯಿಂದ ಮೇಲೆ ತರಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಅಂದು ಮಹಿಳಾ ಸ್ವ-ಸಹಾಯ ಸಂಘ ಕಟ್ಟಲು ಅಟಲ್ ಬಿಹಾರಿ ವಾಜಪೇಯಿ ರವರು ಶ್ರಮಿಸಿದ್ದರು. ಇಂದು ಅಂತೆಯೇ ಮೋದಿಯವರು ಮಹಿಳಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದು ಅವರು ಹೇಳಿದರು.
ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಲ್ಲ ಮಹಿಳೆ, ಎಲ್ಲಾ ಹಂತದಲ್ಲಿಯೂ ಮೇಲುಗೈ ಸಾಧಿಸುತ್ತಿದ್ದಾರೆ. ಹೆಣ್ಣಿನ ಹೆಸರನ್ನು ನದಿಗಳಿಗೆ ಇರಿಸಿದ್ದಾರೆ ಮತ್ತು ಎಲ್ಲಾ ನದಿಗಳನ್ನು ತಾಯಿಗೆ ಹೋಲಿಸುತ್ತಾರೆ. ಮಹಿಳೆಯರು ಪ್ರಾಮಾಣಿಕತೆ ಹಾಗೂ ನಿಷ್ಠೆಯ ಪ್ರತೀಕ ಎಂದು ಅವರು ತಿಳಿಸಿದರು.
ಮೇಯರ್ ಶಿವಕುಮಾರ್ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಕೇವಲ ಒಂದು ದಿನ ಮಾತ್ರವಲ್ಲ ಎಲ್ಲಾ ದಿನಗಳಲ್ಲಿಯೂ ತಾಯಿಗೆ ಪೂಜ್ಯ ಸ್ಥಾನಮಾನ ನೀಡಿ ಮಹಿಳೆಯನ್ನು ಗೌರವಿಸುತ್ತೇವೆ. ಬಡ ಹೆಣ್ಣು ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಹಾಗೂ ಅವರ ಆರ್ಥಿಕ ಸದೃಢತೆಗೆ ಒತ್ತು ನೀಡಿ ವಿಶೇಷವಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಕ್ರೆಡಿಟ್-ಐ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷ ಡಾ.ಎಂ.ಪಿ. ವಷÜರ್ ಅವರು, ನಗರ ಪಾಲಿಕೆ ವ್ಯಾಪ್ತಿಯಲ್ಲಿನ 2022 -23ನೇ ಸಾಲಿನಲ್ಲಿ ರಚಿಸಲ್ಪಟ್ಟ ಸ್ವ-ಸಹಾಯ ಸಂಘಗಳಿಗೆ ಸಂಘದ ನಿರ್ವಹಣೆ ಬಗ್ಗೆ ಮಾಹಿತಿ ಹಾಗೂ ದಶಸೂತ್ರಗಳ ಕುರಿತು ತರಬೇತಿ ನೀಡಿದರು. ಇದೇ ವೇಳೆ ಆಯ್ದ ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಬ್ಯಾಂಕ್ ಸಾಲದ ಚೆಕ್ ಅನ್ನು ವಿತರಿಸಲಾಯಿತು.
ಉಪ ಮೇಯರ್ ಡಾ.ಜಿ. ರೂಪಾ, ಪಾಲಿಕೆಯ ಆಯುಕ್ತ ಜಿ. ಲಕ್ಷೀ್ಮಕಾಂತ ರೆಡ್ಡಿ, ಹೆಚ್ಚುವರಿ ಆಯುಕ್ತೆ ರೂಪ ಹಾಗೂ ವಿವಿಧ ಸ್ವ ಸಹಾಯ ಸಂಘದ ಮಹಿಳೆಯರು ಇದ್ದರು.