ಬೆಳಗಾವಿ: ಫೇಸ್‌ಬುಕ್‌-ವಾಟ್ಸಾಪ್‌ನಲ್ಲಿ ಪ್ರಚೋದನಕಾರಿ ಪೋಸ್ಟ್‌, 4 ಮಂದಿ ವಿರುದ್ಧ FIR

ಬೆಳಗಾವಿ ನಗರದ ಮಾರ್ಕೆಟ್ ಠಾಣೆ, ಟಿಳಕವಾಡಿ ಠಾಣೆ, ಗ್ರಾಮೀಣ ಠಾಣೆ ಮತ್ತು ಶಹಪುರ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲು| ಸಮಾಜದ ಸ್ವಾಸ್ಥ್ಯ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕ್ರಮ| 
 

FIR Against Four People for Provocative post on Facebook-WhatsApp in Belagavi grg

ಬೆಳಗಾವಿ(ಮಾ.15): ಫೇಸ್‌ಬುಕ್‌ ಹಾಗೂ ವಾಟ್ಸಾಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಉದ್ರೇಕ ಹಾಗೂ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ ಆರೋಪದಡಿ ನಾಲ್ಕು ಜನರ ವಿರುದ್ಧ ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರ ರಾಜ್ಯ ಬೆಳಗಾವಿ ಗಡಿಯಲ್ಲಿ ಸಂಘರ್ಷ ಎದ್ದಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಉದ್ರೇಕಕಾರಿ ಮತ್ತು ಪ್ರಚೋದನೆ ನೀಡುವ ಪೋಸ್ಟ್ ಮಾಡಿದ ಫೇಸ್‌ಬುಕ್ ಮತ್ತು ವಾಟ್ಸಾಪ್ ಅಡ್ಮಿನ್‌ಗಳ ವಿರುದ್ಧ ನಾಲ್ಕು ಪ್ರತ್ಯೇಕ ಪ್ರಕರಣಗಳನ್ನ ದಾಖಲಿಸಿದೆ.

2ನೇ ದಿನವೂ ಬಸ್‌ ಸಂಚಾರ ಸ್ಥಗಿತ: ಪ್ರಯಾಣಿಕರ ಪರದಾಟ

ಬೆಳಗಾವಿ ನಗರದ ಮಾರ್ಕೆಟ್ ಠಾಣೆ, ಟಿಳಕವಾಡಿ ಠಾಣೆ, ಗ್ರಾಮೀಣ ಠಾಣೆ ಮತ್ತು ಶಹಪುರ ಠಾಣೆಯಲ್ಲಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿವೆ. ಸಮಾಜದ ಸ್ವಾಸ್ಥ್ಯ, ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣದ ಗ್ರೂಪ್‌ಗಳಲ್ಲಿ ಈ ರೀತಿಯ ಪೋಸ್ಟ್ ಮತ್ತು ವರ್ತನೆಗಳು ಕಂಡು ಬಂದಲ್ಲಿ ಅದರ ಅಡ್ಮಿನ್ ಮತ್ತು ಗ್ರೂಪ್ ಸದಸ್ಯರನ್ನೇ ಹೊಣೆಗಾರರನ್ನಾಗಿ ಮಾಡಲು ಪೊಲೀಸ್ ನಿರ್ಧರಿಸಿದೆ.
 

Latest Videos
Follow Us:
Download App:
  • android
  • ios