ರೈತರ ಮದುವೆಯಾಗುವ ಯುವತಿಗೆ ಪ್ರೋತ್ಸಾಹಧನ ಯೋಜನೆ?
ರೈತರನ್ನು ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲ ಎನ್ನುವುದು ರೈತ ಯುವಕರಿಂದ ಬರುತ್ತಿರುವ ಅಳಲಾಗಿದ್ದು ಇದಕ್ಕೆ ಇದೀಗ ಪ್ರೋತ್ಸಾಹ ಧನ ನೀಡುವ ವಿಚಾರ ಒಂದು ಚರ್ಚೆಗೆ ಬರುತ್ತಿದೆ.
ತಿಪಟೂರು (ಫೆ.22): ಅಂತರ್ಜಾತಿ ವಿವಾಹವಾದರೆ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದ್ದು ದೇಶಕ್ಕೆ ಅನ್ನ ನೀಡುವ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಯುವ ರೈತರನ್ನು ಮದುವೆಯಾಗುವ ಯುವತಿಯರಿಗೆ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಜಾರಿಗೆ ತರಬೇಕೆಂದು ರಾಜ್ಯ ಕೃಷಿ ಸಚಿವರಾದ ಬಿ.ಸಿ.ಪಾಟೀಲರಿಗೆ ಹಾಗೂ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ತಾಲೂಕು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಕೆ.ಎಸ್.ಸದಾಶಿವಯ್ಯ ಆಗ್ರಹಿಸಿದ್ದಾರೆ.
ರೈತರು ದೇಶದ ಬೆನ್ನೆಲುಬು, ಅನ್ನ ನೀಡುವ ಅನ್ನದಾತರು. ಆದರೆ ಹೊಲದಲ್ಲಿ ಹಾಗೂ ತೋಟದಲ್ಲಿ ದುಡಿಯುವವರು ಎಂಬ ಕಾರಣಕ್ಕೆ ಹುಡುಗಿಯರು ಯುವ ರೈತರನ್ನು ಮದುವೆಯಾಗಲು ಮುಂದೆ ಬರುತ್ತಿಲ್ಲ.
ಹಾಗಾಗಿ ಸಾಕಷ್ಟುಗ್ರಾಮಗಳಲ್ಲಿ ಮದುವೆ ವಯಸ್ಸು ಮೀರಿದ ಯುವಕರು ಪಶ್ಚಾತಾಪಕ್ಕೀಡಾಗಿದ್ದು, ಇದು ಬಹಳಷ್ಟುಯುವ ರೈತರ ವ್ಯಥೆಯ ಕಥೆಯಾಗಿದೆ.
ಕೃಷಿ ಯೋಜನೆಯಡಿ ಈ ರೈತರಿಗೆ ಸಿಗಲಿದೆ ಸಹಾಯಧನ : ಅರ್ಜಿ ಸಲ್ಲಿಸಿ .
ಕೃಷಿ ಕಾಯಕದಲ್ಲಿ ದುಡಿಯುವ ಯುವ ರೈತರಾದರೆ ಹೆಣ್ಣು ಕೊಡಲು ಹಿಂಜರಿಯುತ್ತಾರೆ. ಆದ್ದರಿಂದ ಯುವ ಗ್ರಾಮೀಣ ಯುವ ರೈತರುಗಳು ವಿವಾಹವಾಗಿ ನೆಮ್ಮದಿ ಜೀವನ ಸಾಗಿಸಲು ಕಷ್ಟಕರವಾಗುತ್ತಿದೆ. ಆದ್ದರಿಂದ ಸರ್ಕಾರ ಕೂಡಲೆ ಗ್ರಾಮೀಣ ಯುವರೈತರನ್ನು ಮದುವೆಯಾಗುವ ಯುವತಿಯರಿಗೆ ಪೋ›ತ್ಸಾಹಿಸಲು ಸರ್ಕಾರ ಪ್ರೋತ್ಸಾಹಧನ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಕೆ.ಎಸ್. ಸದಾಶಿವಯ್ಯ ಕೋರಿದ್ದಾರೆ.