ಮೈಸೂರು : ಒಬಿಸಿ ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತ ಹೆಚ್ಚಿಸಿ

ಮೈಸೂರು ವಿವಿ ಒಬಿಸಿ ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಹೆಚ್ಚಿಸಬೇಕು ಹಾಗೂ ಹೊಸದಾಗಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಿಸುವಂತೆ ಆಗ್ರಹಿಸಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆಯವರು ಮೈಸೂರು ವಿವಿ ಕ್ರಾಫರ್ಡ್‌ ಹಾಲ್‌ ಮುಂಭಾಗ ಸೋಮವಾರ ಪ್ರತಿಭಟಿಸಿದರು.

 demands For Increase stipend for OBC research students snr

 ಮೈಸೂರು (ನ.01):ಮೈಸೂರು ವಿವಿ ಒಬಿಸಿ ಸಂಶೋಧನಾ ವಿದ್ಯಾರ್ಥಿಗಳ ಶಿಷ್ಯವೇತನವನ್ನು ಹೆಚ್ಚಿಸಬೇಕು ಹಾಗೂ ಹೊಸದಾಗಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನಿಸುವಂತೆ ಆಗ್ರಹಿಸಿ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳ ವೇದಿಕೆಯವರು ಮೈಸೂರು ವಿವಿ ಕ್ರಾಫರ್ಡ್‌ ಹಾಲ್‌ ಮುಂಭಾಗ ಸೋಮವಾರ ಪ್ರತಿಭಟಿಸಿದರು.

ಮೈಸೂರು (Mysuru)  ವಿವಿ ಸಂಶೋಧನಾ ವಿದ್ಯಾರ್ಥಿಗಳಿಗೆ (Students)  ಪ್ರತಿ ತಿಂಗಳಿಗೆ . 12000 ಗಳಂತೆ ಸಂಶೋಧನಾ ಶಿಷ್ಯವೇತನವನ್ನು ನೀಡುತ್ತಿದೆ. ಪ್ರಸ್ತುತ ಈ ಶಿಷ್ಯವೇತನದಲ್ಲಿ ಉತ್ತಮವಾದ ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ತುಂಬಾ ಕಷ್ಟಸಾಧ್ಯವಾಗುತ್ತದೆ. ಹೀಗಾಗಿ, ಶಿಷ್ಯವೇತನವನ್ನು 3 ವರ್ಷಗಳಿಗೆ ಮಾತ್ರ ನೀಡಲಾಗುತ್ತಿದ್ದು, ಅದನ್ನು 5 ವರ್ಷಗಳಿಗೆ ಹೆಚ್ಚು ಮಾಡಿ, ಸಂಶೋಧನೆಗೆ ಪ್ರವೇಶಾತಿ ಪಡೆಯುವ ಪ್ರತಿಯೊಬ್ಬರಿಗೂ . 30 ಸಾವಿರ ಶಿಷ್ಯವೇತನವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

ಎಲ್ಲಾ ವರ್ಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಮಾನ ಶಿಷ್ಯವೇತನವನ್ನು ಯಾವುದೇ ತಾತರತಮ್ಯವಿಲ್ಲದೇ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಅಭಿವೃದ್ಧಿಗೆ ನೆರವಾಗಬೇಕು. ಆಗ ಮಾತ್ರ ಎಲ್ಲಾ ಸಂಶೋಧಕರಿಗೂ ಸಂಶೋಧನೆ ಮಾಡಲು ಅನುಕೂಲವಾಗುತ್ತದೆ ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಕುಲಪತಿ ಪ್ರೊ.ಜಿ. ಹೇಮಂತಕುಮಾರ್‌ ಅವರು, ಪ್ರತಿಯೊಬ್ಬರಿಗೂ ಸಮಾನವಾದ ಶಿಷ್ಯವೇತನವನ್ನು ನೀಡಲಾಗುವುದು ಎಂದರು.

ವೇದಿಕೆಯ ಎನ್‌.ಎಸ್‌. ದೇಸಾಯಿ, ಶಿವಶಂಕರ್‌ ಮೊದಲಾದವರು ಇದ್ದರು.

-- ಉಗ್ರ ಹೋರಾಟ--

ಸಿಂಡಿಕೇಟ್‌ ಸಭೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಸಮಾನ ಶಿಷ್ಯವೇತನ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು. ಅಲ್ಲದೆ, ಹೊಸದಾಗಿ ಈ ಕೂಡಲೇ ಶಿಷ್ಯವೇತನಕ್ಕೆ ಅರ್ಜಿಯನ್ನು ಆಹ್ವಾನಿಸಬೇಕು ಮತ್ತು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ಹಿಂದುಳಿದ ವರ್ಗಗಳ ಸಂಶೋಧನಾ ವಿದ್ಯಾರ್ಥಿಗಳಿಗೂ ಶಿಷ್ಯವೇತನವನ್ನು ನೀಡಿ, ಸಂಶೋಧನಾ ವಿದ್ಯಾರ್ಥಿಗಳಿಗೆ ಆಸರೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಜುಟೆಕ್ ಕಂಪನಿಗಳ ಪಿಎಚ್‌ಡಿಗೆ ಮಾನ್ಯತೆ ಇಲ್ಲ

ನವದೆಹಲಿ: ಎಜುಟೆಕ್‌ ಕಂಪನಿಗಳು ವಿದೇಶಿ ವಿವಿಗಳ ಜತೆ ಒಪ್ಪಂದ ಮಾಡಿಕೊಂಡು ನಡೆಸುವ ಆನ್‌ಲೈನ್‌ ಪಿಹೆಚ್‌ಡಿ ಕೋರ್ಸುಗಳಿಗೆ ಯಾವುದೇ ಮಾನ್ಯತೆಯಿಲ್ಲ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಹಾಗೂ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಶುಕ್ರವಾರ ಘೋಷಿಸಿವೆ.

ಈ ವರ್ಷ ಯುಜಿಸಿ ನೀಡಿರುವ 2ನೇ ಎಚ್ಚರಿಕೆ ಇದಾಗಿದೆ. ಈ ಮೊದಲು ಯುಜಿಸಿ (UGC) ಹಾಗೂ ಎಐಸಿಟಿಇ(AICTE), ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳು ಎಜುಟೆಕ್‌ ಕಂಪನಿಗಳ (edutech companies) ಜತೆ ಒಪ್ಪಂದ (agreements) ಮಾಡಿಕೊಂಡು ದೂರಶಿಕ್ಷಣ ಆನ್‌ಲೈನ್‌ ಕೋರ್ಸುಗಳನ್ನು ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದವು. ಇದರ ಬೆನ್ನಲ್ಲೇ ಈಗ ಮತ್ತೊಂದು ಅಂಥದ್ದೇ ಆದೇಶ ಹೊರಡಿಸಿದೆ.

ರೆಸ್ಯೂಮ್‌ ಹಿಡ್ಕೊಂಡು ಐದು ದಿನ ರಸ್ತೆಯಲ್ಲಿ ನಿಂತ ವ್ಯಕ್ತಿಗೆ ಸಿಕ್ತು ಬಂಪರ್‌ ಆಫರ್‌!

ಎಲ್ಲ ಶೈಕ್ಷಣಿಕ ಸಂಸ್ಥೆಗಳು (educational institutes) ಯುಜಿಸಿ ರೂಪಿಸಿದ ನಿಯಮದ ಅನುಸಾರ ಪಿಹೆಚ್‌ಡಿ (PhD) ಎಂಫಿಲ್‌( MPhil)ಪದವಿಗಳನ್ನು ನೀಡಬೇಕು. ಆದರೆ ಕೆಲವು ಎಜುಟೆಕ್‌ ಕಂಪನಿಗಳು (edutech companies) ವಿದೇಶಿ ಶಿಕ್ಷಣ ಸಂಸ್ಥೆಯೊಂದಿಗೆ (foreign educational institutions) ಒಪ್ಪಂದ ಮಾಡಿಕೊಂಡು ಯುಜಿಸಿ ಪದವಿ ನೀಡುವುದಾಗಿ ಹೇಳುತ್ತವೆ. ವಿದ್ಯಾರ್ಥಿಗಳು ಇಂಥ ದಾರಿತಪ್ಪಿಸುವ ಜಾಹೀರಾತುಗಳ ಬಗ್ಗೆ ಎಚ್ಚರದಿಂದ ಇರಬೇಕು. ವಿದೇಶಿ ಸಂಸ್ಥೆಗಳ ಜತೆ ಎಜುಟೆಕ್‌ ಕಂಪನಿಗಳು ಒಪ್ಪಂದ ಮಾಡಿಕೊಂಡು ನೀಡುವ ಪಿಹೆಚ್‌ಡಿಗಳಿಗೆ ಮಾನ್ಯತೆ ನೀಡುವುದಿಲ್ಲ ಎಂದು ಯುಜಿಸಿ ಮತ್ತು ಎಐಸಿಟಿಇ ಹೇಳಿದೆ.

ಇತ್ತೀಚೆಗೆ, ಕೊರೋನಾ ಉಪಟಳ ಶುರುವಾದ ಬಳಿಕ ಮನೆಯಿಂದಲೇ ಶಿಕ್ಷಣ ಪಡೆಯುವ ವ್ಯವಸ್ಥೆ ಜಾರಿಗೆ ಬಂತು. ಆಗ ದೂರ ಶಿಕ್ಷಣ ನೀಡುವ ಎಜುಟೆಕ್‌ ಕಂಪನಿಗಳ ಹಾವಳಿ ಆರಂಭವಾಗಿ ತಾರಕಕ್ಕೇರಿತ್ತು. ಇವುಗಳ ನಿಯಂತ್ರಣಕ್ಕೆ ಸರ್ಕಾರ ನಾನಾ ಕ್ರಮ ಜರುಗಿಸುತ್ತಿದೆ.

Latest Videos
Follow Us:
Download App:
  • android
  • ios