ರೆಸ್ಯೂಮ್ ಹಿಡ್ಕೊಂಡು ಐದು ದಿನ ರಸ್ತೆಯಲ್ಲಿ ನಿಂತ ವ್ಯಕ್ತಿಗೆ ಸಿಕ್ತು ಬಂಪರ್ ಆಫರ್!
ಬರೋಬ್ಬರಿ 95 ಬಾರಿ ಕಂಪನಿಗಳಿಂದ ರಿಜೆಕ್ಟ್ ಆಗಿದ್ದ ಪದವೀಧರನೊಬ್ಬ, ರೆಸ್ಯೂಮ್ ಹಿಡಿದುಕೊಂಡು ಐದು ದಿನಗಳ ಕಾಲ ಲಂಡನ್‌ನ ರಸ್ತೆಯಲ್ಲಿ ನಿಂತಿದ್ದ. ಆತನ ಈ ಟ್ರಿಕ್ ಲಾಭ ತಂದುಕೊಂಡಿದೆ. ಕೆಲಸ ಪಡೆದುಕೊಳ್ಳುವ ಸಲುವಾಗಿ ಅವರು ಮಾಡಿದ್ದ ಈ ಸಣ್ಣ ಟ್ರಿಕ್‌ನಿಂದ ದೊಡ್ಡ ಕಂಪನಿಯೊಂದು ಅವರಿಗೆ ಜಾಬ್ ಆಫರ್ ನೀಡಿದೆ.
ನವದೆಹಲಿ (ಅ.22): ಕೆಲಸಕ್ಕಾಗಿ ಅಲೆದು, ಅಲೆದು ಸುಸ್ತಾಗಿದ್ದ ಎಂಬಿಎ ಪದವೀಧರನೊಬ್ಬ ತನ್ನ ರೆಸ್ಯೂಮ್, ಲಿಂಕ್ಡಿನ್ ಖಾತೆಯ ಕ್ಯೂರ್ ಕೋಡ್ ಹಾಗೂ ಸೂಟ್‌ಕೇಸ್ ಇಟ್ಟುಕೊಂಡು ಸತತ ಐದು ದಿನಗಳ ಕಾಲ ರಸ್ತೆಯಲ್ಲಿ ಸೂಟ್ ಬೂಟ್ ಹಾಕಿಕೊಂಡು ನಿಂತಿದ್ದ. ಅದಕ್ಕೂ ಮುನ್ನ 95 ಬಾರಿ ಆತ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿ ರಿಜೆಕ್ಟ್ ಆಗಿದ್ದ. ಈ ಹುಡುಗನ ಕಥೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ, ಐದು ದಿನಗಳ ಕಾಲ ತನ್ನ ರೆಸ್ಯೂಮ್ ಇಟ್ಟುಕೊಂಡಿದ್ದು ಅವರಿಗೆ ಲಾಭ ತಂದಿದೆ. ನವೆಂಬರ್‌ನಿಂದ ಅವರು ಕೆಲಸಕ್ಕೆ ಹೋಗಲು ಆರಂಭಿಸಲಿದ್ದಾರೆ. ಮೊಹಮದ್ ಅರ್ಹಮ್ ಶಹಜಾದ್ ಲಂಡನ್‌ನ ಬೀದಿಯಲ್ಲಿ ತಮ್ಮ ರೆಸ್ಯೂಮ್ ಹಿಡಿದುಕೊಂಡು ನಿಂತಿದ್ದರು. ಈತ ಪಾಕಿಸ್ತಾನ ಮೂಲದ ವ್ಯಕ್ತಿ. ಕಳೆದ ಒಂದು ವರ್ಷದಿಂದ ಲಂಡನ್‌ನಲ್ಲಿ ಕೆಲಸಕ್ಕಾಗಿ ಪ್ರಯತ್ನ ಮಾಡುತ್ತಿದ್ದ. ಆದರೆ, ಯಶಸ್ಸಯ ಸಿಕ್ಕಿರಲಿಲ್ಲ. ಬ್ಯುಸಿನೆಸ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದ ಅರ್ಹಮ್ ಮೊಹಮದ್ ಅವರನ್ನು ಇದಕ್ಕೂ ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ್ದ ಎಲ್ಲಾ ಕಂಪನಿಗಳು ರಿಜೆಕ್ಟ್ ಮಾಡಿದ್ದವು.
ಆ ಬಳಿಕ ಕಂಫರ್ಟ್ ಝೋನ್‌ನಿಂದ ಹೊರಬಂದ ಆರ್ಹಮ್, ತನ್ನನ್ನು ತಾನೇ ಜಾಹೀರಾತು ಮಾಡಿಕೊಳ್ಳಲು ಯೋಚನೆ ಮಾಡಿದ್ದ. ಇದಾದ ನಂತರ ಅವರು ಲಂಡನ್ ರಸ್ತೆಗೆ ಇಳಿದಿದ್ದರು. ರೆಸ್ಯೂಮ್, ಸೂಟ್‌ಕೇಸ್ ಮತ್ತು ಲಿಂಕ್ಡ್‌ಇನ್ ಕ್ಯೂಆರ್ ಕೋಡ್ ಅನ್ನು ಬೋರ್ಡ್ ಮೇಲೆ ಬರೆದು ರಸ್ತೆಯಲ್ಲಿ ನಿಂತಿದ್ದರು. ಬ್ಯುಸಿನೆಸ್ ಇನ್‌ಸೈಡರ್‌ಗೆ ಈ ಕುರಿತಾಗಿ ಮಾತನಾಡಿರುವ ಅವರು, 'ನಾನು ಪ್ರತಿದಿನ ರಿಜೆಕ್ಟ್‌ಗಳನ್ನು ಎದುರಿಸಿ ಬಳಲಿ ಹೋಗಿದ್ದೆ. ಪ್ರತಿದಿನ ನನಗೆ ಒತ್ತಡವಾಗಿ ಪರಿಣಮಿಸಿತ್ತು. ಅದರ ನಂತರ ನಾನು ವಿಭಿನ್ನವಾಗಿ ಪ್ರಯತ್ನಿಸಲು ಯೋಚಿಸಿದೆ' ಎಂದಿದ್ದಾರೆ.
ಜುಲೈ 11 ರಂದು, ಅವರು ಬೆಳಿಗ್ಗೆ ಬೇಗನೆ ಎದ್ದು ಒಂದು ಬೋರ್ಡ್ ಅನ್ನು ಸಿದ್ಧ ಮಾಡಿದೆ. ಅದರ ಮೇಲೆ ನನ್ನ ಲಿಂಕ್ಡ್‌ಇನ್ ಕ್ಯೂಆರ್ ಕೋಡ್ ಅನ್ನು ಅಂಟಿಸಿದೆ. ಬಳಿಕ ನನ್ನಲ್ಲಿದ್ದ ಸೂಟ್‌ಕೇಸ್ ಹಾಗೂ ಬೋರ್ಡ್‌ನೊಂದಿಗೆ ಲಂಡನ್‌ನ ಆರ್ಥಿಕ ಜಿಲ್ಲೆ ಎನಿಸಿಕೊಂಡಿರುವ ಕ್ಯಾನರಿ ವಾರ್ಫ್ ಕಡೆ ಮುಖ ಮಾಡಿದ್ದೆ ಎಂದು ಹೇಳಿದ್ದಾರೆ. ಕ್ಯಾನರಿ ವಾರ್ಫ್‌ನ ರಸ್ತೆಯಲ್ಲಿ ನಗುತ್ತಲೇ ನಿಂತಿದ್ದೆ. ಅಲ್ಲಿಗೆ ಬರುವ ಹಾಗೂ ಹೋಗುವ ಯಾವುದೇ ವ್ಯಕ್ತಿಗಳಿಗೆ ಸಮಸ್ಯೆ ಮಾಡಲಿಲ್ಲ. ಸಂಜೆಯ ವೇಳೆಗೆ ಬೋರ್ಡ್ ಹಾಗೂ ಸೂಟ್‌ಕೇಸ್ ತೆಗೆದುಕೊಂಡು ಮನೆಗೆ ಹೋಗುತ್ತಿದ್ದ ಅರ್ಹಮ್ ಶಹಜಾದ್, ತಮ್ಮ ರೆಸ್ಯೂಮ್‌ಅನ್ನು 200 ವ್ಯಕ್ತಿಗಳು ನೋಡಿದ್ದಾರೆ ಎನ್ನುವುದನ್ನು ಗಮನಿಸಿದ್ದರು. ಈ ಪ್ರತಿಕ್ರಿಯೆ ಅವರಿಗೆ ಬಹಳ ಅಚ್ಚರಿ ಮೂಡಿಸಿತ್ತು. ಕೆಲವು ವ್ಯಕ್ತಿಗಳು ನನ್ನ ಬಳಿ ಬಂದು ನಿಂತು ನೋಡಿದ್ದರು. ಅಲ್ಲದೆ, ನಾನು ಅಂಟಿಸಿದ್ದ ಲಿಂಕ್ಡಿನ್ ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಮಾಡಿದ್ದರು. ಬಳಿಕ ನನ್ನ ಫೋಟೋ ತೆಗೆದು ಮುಂದೆ ಸಾಗುತ್ತಿದ್ದರು ಎಂದಿದ್ದಾರೆ.
ಈ ಸಮಯದಲ್ಲಿ, ಜೆಪಿ ಮೋರ್ಗಾನ್ (JP Morgan) ಕಂಪನಿಯ ನಿರ್ದೇಶಕರೊಬ್ಬರು ನನ್ನ ಬಳಿ ಬಂದು ಅವರ ಬ್ಯುಸಿನೆಸ್ ಕಾರ್ಡ್ ನೀಡಿದ್ದರು. ಅದಾದ ಬಳಿಕ ಅವರಿಂದ ಸಂದೇಶ ಕೂಡ ಬಂದಿತ್ತು. ನನ್ನ ರೆಸ್ಯೂಮ್‌ಅನ್ನು ಅವರು ಕಚೇರಿಯಲ್ಲಿ ಹಂಚಿದ್ದರು. ಆ ಬಳಿಕ ಒಬ್ಬ ಶಿಕ್ಷಕ ತನ್ನ ವಿದ್ಯಾರ್ಥಿಗಳೊಂದಿಗೆ ನನ್ನ ಬಳಿ ಬಂದು ಸೆಲ್ಫಿ ಕೂಡ ತೆಗೆದುಕೊಂಡಿದ್ದರು. ಶಹಜಾದ್ ರಸ್ತೆಯಲ್ಲಿ ನಿಂತಿದ್ದಾಗ ವ್ಯಕ್ತಿಯೊಬ್ಬ ಬಂದು ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾನೆ. ಶಹಜಾದ್ ಪ್ರಕಾರ, ಐದು ದಿನದಲ್ಲಿ ನಾನು ಎದುರಿಸಿದ ಏಕೈಕ ನೆಗೆಟಿವ್ ಕಾಮೆಂಟ್ ಇದು ಎಂದಿದ್ದಾರೆ.
'ಫ್ರೆಶರ್‌ಗಳು ದಿನಕ್ಕೆ 18 ಗಂಟೆ ಕೆಲ್ಸ ಮಾಡಿ..' ಎಂದಿದ್ದ ಬಾಂಬೆ ಶೇವಿಂಗ್ ಕಂಪನಿ ಸಿಇಒ ಕ್ಷಮೆ!
ಡೇಟಾ ಅನಾಲಿಟಿಕ್ಸ್ ಕೆಲಸ: ಐದು ದಿನಗಳ ಕಾಲ ರಸ್ತೆಯಲ್ಲಿ ನಿಂತಿದ್ದ ಅರ್ಹಮ್ ಶೆಹಜಾದ್‌ಗೆ (Mohammad Arham Shahzad) ಈ ಪ್ರಯತ್ನ ಫಲ ನೀಡಿದೆ. ಡೇಟಾ ಅನಾಲಿಟಿಕ್ಸ್‌ನ (Data analytics) ಕೆಲಸ ಅವರಿಗೆ ಸಿಕ್ಕಿದೆ. ನಾನು ಕಲಿತ ವಿದ್ಯೆಗೆ ಇದು ಸರಿಯಾದ ಕೆಲಸ ಎಂದು ಅವರು ಹೇಳಿದ್ದಾರೆ. ಅದಲ್ಲದೆ, ಮುಂದಿನ ಕೆಲ ವಾರಗಳಲ್ಲಿ ಮೂರು ಸಂದರ್ಶನಗಳು ತನಗೆ ನಿಗದಿಯಾಗಿದೆ ಎಂದಿದ್ದಾರೆ. ಶಹಜಾದ್‌ಗೆ ವೀಸಾ ದೊಡ್ಡ ಸಮಸ್ಯೆ ನೀಡಿತ್ತು. ಯುಕೆಯಲ್ಲಿ ಕೆಲಸ ಮಾಡುವ ವಿದ್ಯಾರ್ಥಿಗಳಿಗೆ 'ವರ್ಕರ್ ವೀಸಾ' (Work Visa) ಅಗತ್ಯವಿದೆ. ಶಹಜಾದ್ (Pakistan) ಅವರ ಸ್ಟೂಡೆಂಟ್ ವೀಸಾ ಅವಧಿ ಮುಗಿದಿದೆ. ಈ ಕಾರಣಕ್ಕಾಗಿ, ಅವರು ಇಂಗ್ಲೆಂಡ್‌ನಲ್ಲಿ ಕೆಲಸ ಮಾಡಲು ವರ್ಕರ್ ವೀಸಾ ಅಗತ್ಯವಿದೆ. ಇದರಿಂದಾಗಿ ಹಲವು ಕಂಪನಿಗಳಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಿರಲಿಲ್ಲ.
48 ವರ್ಷಗಳ ಹಿಂದಿನ ತಮ್ಮ ರೆಸ್ಯುಮ್ ಶೇರ್ ಮಾಡಿದ ಬಿಲ್ ಗೇಟ್ಸ್!
ಯುಕೆ ಸರ್ಕಾರದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ವೀಸಾದ ಶುಲ್ಕ 57 ಸಾವಿರದಿಂದ 1 ಲಕ್ಷದ 30 ಸಾವಿರದವರೆಗೆ ಇದೆ. ಜುಲೈನಲ್ಲಿ, ಶಹಜಾದ್ ಅವರು ತಮ್ಮ ಕೆಲಸದ ಸಮಯದಲ್ಲಿ ಬ್ರಿಟನ್‌ನಲ್ಲಿ (London) ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಎದುರಿಸುತ್ತಿರುವ ತೊಂದರೆಗಳ ಕುರಿತು ಲಿಂಕ್ಡ್‌ಇನ್ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಈಗ ಶಹಜಾದ್ ಗೆ ಡೇಟಾ ಅನಾಲಿಟಿಕ್ಸ್ ಕೆಲಸ ಸಿಕ್ಕಿದೆ. ಆದರೆ ಇದಕ್ಕಾಗಿ ಅವರಿಗೆ ಮೂರು ತಿಂಗಳು ಬೇಕಾಯಿತು. ನವೆಂಬರ್‌ನಲ್ಲಿ ಹೊಸ ಕಂಪನಿಯೊಂದಿಗೆ ಕೆಲಸ ಮಾಡಲು ಪ್ರಾರಂಭಿಸುತ್ತೇನೆ ಎಂದು ಶೆಹಜಾದ್ ಹೇಳಿದ್ದಾರೆ.