Gadag: ಹೋಮ್ ಗಾರ್ಡ್ ಸೇವೆಯಲ್ಲಿ ಮುಂದುವರೆಸಲು ಲಂಚದ ಬೇಡಿಕೆ, ಸಿಎಂಗೆ ಪತ್ರ ಬರೆದ ಸಿಬ್ಬಂದಿ

ಗದಗ ಜಿಲ್ಲೆಯ ಮುಳಗುಂದ  ಗೃಹರಕ್ಷಕದಳ ಘಟಕದ ಸಿಬ್ಬಂದಿಗಳ ನವೀಕರಣ ಪತ್ರಕ್ಕೆ ಸಹೀ ಹಾಕೋದಕ್ಕೆ ಅಧಿಕಾರಿಯೊಬ್ರು ಲಂಚದ ಬೇಡಿಕೆ ಇಟ್ಟಿದ್ದಾರೆ ಅನ್ನೋ ಗಭೀರ ಆರೋಪ ಕೇಳಿ ಬಂದಿದೆ.

demanding bribe to continue in Home Guard service gadag Staff wrote letter to cm bommai gow

ವರದಿ: ಗಿರೀಶ್ ಏಷ್ಯಾನೆಟ್ ಸುವರ್ಣನ್ಯೂಸ್

ಗದಗ (ಡಿ.10): ಜಿಲ್ಲೆಯ ಮುಳಗುಂದ  ಗೃಹರಕ್ಷಕದಳ ಘಟಕದ ಸಿಬ್ಬಂದಿಗಳ ನವೀಕರಣ ಪತ್ರಕ್ಕೆ ಸಹೀ ಹಾಕೋದಕ್ಕೆ ಅಧಿಕಾರಿಯೊಬ್ರು ಲಂಚದ ಬೇಡಿಕೆ ಇಟ್ಟಿದ್ದಾರೆ ಅನ್ನೋ ಗಭೀರ ಆರೋಪ ಕೇಳಿ ಬಂದಿದೆ. 5000 ರೂಪಾಯಿ ಲಂಚ ಕೊಟ್ಟಿಲ್ಲ ಅಂತಾ ನಮ್ಮ ನೇಮಕಾತಿ ನವೀಕರಣ ಮಾಡಿಲ್ಲ ಅನ್ನೊ ಆರೋಪವನ್ನು ಮನವಿ ಪತ್ರದಲ್ಲಿ ಪ್ರಸ್ತಾಪಿಸಿ ಸಿಎಂ'ಗೆ ಸಲ್ಲಿಸಲಾಗಿದೆ. 2009ರಿಂದಲೂ ಹೋಮ್'ಗಾರ್ಡ್ ಸೇವೆಯಲ್ಲದ್ದ ಮುಳಗುಂದ 13 ಜನರನ್ನ ಏಕಾ ಏಕಿ ತೆಗೆಯಲಾಗಿದೆ. ಪರೇಡ್'ನಲ್ಲಿ ಭಾಗವಹಿಸಲು ಬಿಡ್ತಾಯಿಲ್ಲ್ವಂತೆ. ಅಷ್ಟೇ ಅಲ್ಲ ಕರೋನಾ ಸಮಯದಲ್ಲಿ ಕರ್ತವ್ಯನಿರ್ವಹಣೆ ಮಾಡಿದ 5ಜನರ 33ದಿನದ ಗೌರವಧನವನ್ನೂ ಸಹ ಕೊಟ್ಟಿಲ್ಲ. ನವೀಕರಣ ಮಾಡ್ಬೇಕಂದ್ರೆ ಘಟಕಾಧಿಕಾರಿ ಎನ್ ಎಸ್ ಪತ್ತಾರಗೆ ಲಂಚಕೊಡಬೇಕಂತೆ. ನೇಮಕಾತಿ ನವೀಕರಣಕ್ಕೆ 5000ರೂಪಾಯಿ ಕೊಡದೇ ಇರೋದು ಇದಕ್ಕೆ ಕಾರಣ ಅಂತಾ ಸರ್ಕಾರಕ್ಕೆ ಪತ್ರ ಬರೆದು ನ್ಯಾಯ ಕೊಡಿಸಿ ಅಂತಾ ಪತ್ರದ ಮೂಲಕ ಸಿಎಂ'ಗೆ ಮನವಿ ಮಾಡಿದ್ದಾರೆ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಗಾರ್ಡ್ ಮೇಲೆ ಗಾಡಿ ಹತ್ತಿಸಿದ ಅತ್ಯಾಚಾರ ಆರೋಪಿ

ವಿಚಾರವನ್ನ ಮೇಲಾಧಿಕಾರಿಗಳ ಬಳಿ ಹೇಳಿಕೊಳ್ಳೊದಕ್ಕೆ ಅಂತಾ ಹೋದ್ರೆ ತನ್ನ ಪ್ರಭಾವ ಬಳಸಿ ನಮ್ಮ  ನೇಮಕಾತಿಯ ನವೀಕರಣವಾಗದ ಹಾಗೆ ನಾಗರಾಜ್ ಪತ್ತಾರ ನೋಡಿಕೊಳ್ತಿದ್ದಾರೆ. ಅಷ್ಟೇ ಅಲ್ಲಾ ಜಿಲ್ಲಾ ಕಚೇರಿಯಲ್ಲಿರೋರನ್ನ ಸಂಪರ್ಕ ಮಾಡಿದ್ರೆ ನಿಮ್ಮ ಯುನಿಟ್ ಆಫೀಸರ್ ಬಳಿನೇ ಸಮಸ್ಯೆ ಬಗೆಹರಿಸಿಕೊಳ್ಳಿ ಅಂತಿದಾಂತೆ. ವಿಚಿತ್ರ ಅಂದ್ರೆ ಜಿಲ್ಲಾ ಕಮಾಂಡೆಂಟ್ ಅವರನ್ನ ಭೇಟಿ ಮಾಡೋಕು ಬಿಡ್ತಿಲ್ಲ ಅನ್ನೋ ಆರೋಪವನ್ನ ಮಾಡ್ತಾಯಿರುವ ಹೋಮ್'ಗಾರ್ಡ್ಸ್ ನಾಗರಾಜ್ ಪತ್ತಾರ ಅವ್ರನ್ನ ಕೂಡಲೇ ಅಮಾನತ್ತು ಮಾಡಿ ಹೊಸ ಘಟಕಾಧಿಕಾರಿಗಳನ್ನ ನಿಯೋಜನೆ ಮಾಡುವಂತೆ ಒತ್ತಾಯಿಸ್ತಾಯಿದ್ದಾರೆ.

 

 ನೇಮಕ ಮುನ್ನ ಸೆಕ್ಯುರಿಟಿ ಗಾರ್ಡ್‌ಗೆ ತರಬೇತಿ ಕಡ್ಡಾಯ; ಅಧಿಸೂಚನೆ ಪ್ರಕಟ

ಈ ಬಗ್ಗೆ ಜಿಲ್ಲಾ ಕಮಾಂಡೆಂಟ್ ಅವರನ್ನ ಕೇಳಿದ್ರೆ, ಘಟಕಾಧಿಕಾರಿ ಮೇಲೆ ಲಂಚದ ಆರೋಪ ಮಾಡ್ತಿರುವ ಹೋಮ್'ಗಾರ್ಡ್ಸ್ ಸಿಬ್ಬಂದಿ  ಶಿಸ್ತಿನ ವರ್ತನೆ ಮಾಡಿಲ್ಲ ಅನ್ನುವ ದೂರುಗಳಿವೆ. ಆದಾಗ್ಯೂ ಅವರೆಲ್ಲ ನಮ್ಮ ಬಳಿ ನೇರವಾಗಿ ಬಂದು ಮಾತಾಡಿದ್ರೆ ಸಮಸ್ಯೆ ಬಗೆಹರಿಸ್ತಿವಿ ಅಂತಿದ್ದಾರೆ. ತಪ್ಪು ಯಾರದ್ದೇ ಆಗಿರಲಿ ನಿಷ್ಕಾಮ ಸೇವೆಯೆಂದೇ ಕರೆಯಲಾಗುವ ಗೃಹರಕ್ಷಕ ದಳದ ಗೌರವ ಕಳೆಯದ ಹಾಗೆ ಜಿಲ್ಲಾ ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಶೀಘ್ರವೇ ಈ ಸಮಸ್ಯೆ ಬಗೆಹರಿಸಲಿ ಒಂದೊಮ್ಮೆ ಘಟಕಾಧಿಕಾರಿ ವಿರುದ್ಧದ ಆರೋಪವೂ ಸತ್ಯವೇ ಆಗಿದ್ರೆ ಸೂಕ್ತ ಕ್ರಮಕೈಗೊಳ್ಳಲಿ.

Latest Videos
Follow Us:
Download App:
  • android
  • ios