ಶಾಸಕ ಪ್ರದೀಪ ಈಶ್ವರ್‌ಗೆ ಸಚಿವ ಸ್ಥಾನ ನೀಡಲು ಬೇಡಿಕೆ

ಚಿಕ್ಕಬಳ್ಳಾಪುರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಬಲಿಜ ಸಮುದಾಯದ ಪ್ರದೀಪ ಈಶ್ವರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ತಾಲೂಕು ಬಲಿಜ ಸಂಘದ ಪದಾಧಿಕಾರಿಗಳು ಗ್ರಹಿಸಿದರು.

Demand to give MLA Pradeep Eshwar a ministerial post snr

 ಚಿಕ್ಕನಾಯಕನಹಳ್ಳಿ: ಚಿಕ್ಕಬಳ್ಳಾಪುರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಬಲಿಜ ಸಮುದಾಯದ ಪ್ರದೀಪ ಈಶ್ವರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ತಾಲೂಕು ಬಲಿಜ ಸಂಘದ ಪದಾಧಿಕಾರಿಗಳು ಗ್ರಹಿಸಿದರು.

ಪ್ರವಾಸಿ ಮಂದಿರದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಮಾಜದ ಮುಖಂಡ ಹಾಗೂ ಯುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಸಿ.ಕೆ.ಶಾಂತಕುಮಾರ, ಪ್ರದೀಪ ಈಶ್ವರ ಅವರು ಹಲವು ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ನಡೆಸುತ್ತಿದ್ದಾರೆ. ಬಲಿಜ ಸಮುದಾಯದ ಏಕೈಕ ಶಾಸಕರಾಗಿರುವ ಇವರನ್ನು ರಾಜ್ಯದ 30 ಲಕ್ಷ ಬಲಿಜ ಸಮುದಾಯದ ಪರವಾಗಿ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಸಚಿವರನ್ನಾಗಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಸಹಕರಿಸುವಂತೆ ಕಾಂಗ್ರೆಸ್‌ ಹೈಕಮಾಂಡನ್ನು ಕೋರಿದರು.

ಇದೇ ವೇಳೆ ಬಲಿಜ ಸಂಘದ ಸದಸ್ಯರಾದ ಬಿಎಸ್‌ಎನ್‌ಎಲ್‌ ಚಂದ್ರಶೇಖರ, ನರಸಿಂಹಮೂರ್ತಿ, ಪ್ರಕಾಶ್‌, ಅನಿಲಕುಮಾರ, ಯೋಗಾನಂದ, ಮಲ್ಲೇಶ, ಚಂದ್ರಧರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ನನ್ನ ಸೋಲು ಅಭಿವೃದ್ಧಿಯ ಸೋಲು

ಚಿಕ್ಕಬಳ್ಳಾಪುರ (ಮೇ.15) : ನನ್ನ ಸೋಲು ಅಭಿವೃದ್ಧಿಗಾದ ಸೋಲು. ನನ್ನ ಸೋಲಿಗೆ ಕ್ಷೇತ್ರದಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್‌, ಜೆಡಿಎಸ್‌ ನಡೆಸಿದ ರಾಜಕೀಯ ಷಡ್ಯಂತ್ರವೇ ಕಾರಣ. ಜೆಡಿಎಸ್‌ ಮತಗಳು ಕಾಂಗ್ರೆಸ್‌ಗೆ ಹೋದ ಕಾರಣ ನಾನು ಸೋಲಬೇಕಾಯಿತು ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್‌ ತಮ್ಮ ಸೋಲಿನ ಬಗ್ಗೆ ವಿಶ್ಲೇಷಿಸಿದರು.

ನಗರದ ತಮ್ಮ ನಿವಾಸದಲ್ಲಿ ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಗೆಲುವು ಶಾಶ್ವತವಲ್ಲ. ಸೋಲು ಕೂಡ ಅಂತಿಮವಲ್ಲ. ಕ್ಷೇತ್ರದಲ್ಲಿ ಅನಿರ್ವಾಯವಾಗಿ ಸೋಲು ಅನುಭವಿಸಿದ್ದೇನೆ. ಜೆಡಿಎಸ್‌ ತನ್ನ ಸಾಂಪ್ರದಾಯಿಕ ಮತಗಳ ಗಳಿಕೆಯಲ್ಲಿ ವಿಫಲವಾಗಿ ಕೊನೆ ಕ್ಷಣದಲ್ಲಿ ಜೆಡಿಎಸ್‌ ನಾಯಕರು ಕಾಂಗ್ರೆಸ್‌ಗೆ ಅಡ್ಡ ಮತದಾನ ಮಾಡಿಸಿದ್ದರಿಂದ ನಾನು ಸೋಲು ಬೇಕಾಯಿತು ಎಂದರು.

Chikkaballapur Constituency: ಅಭಿವೃದ್ಧಿಯ ಹರಿಕಾರ ಡಾ.ಸುಧಾಕರ್‌ ಸೋಲಿಗೆ ಕಾರಣವೇನು?

ಬಚ್ಚೇಗೌಡರಿಂದ ಆತ್ಮವಂಚನೆ

ಚುನಾವಣೆಯಲ್ಲಿ ವೈಯಕ್ತಿಕ ನಿರ್ಧಾರ ತೆಗೆದುಕೊಂಡು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡರು(KP Bachchegowda) ಆತ್ಮವಂಚನೆ ಮಾಡಿಕೊಂಡಿದ್ದಾರೆ. ಇದು ಕ್ಷಮಿಸಲಾರದ ಅಪರಾಧ, ಅವರಿಂದ ಈ ರೀತಿಯ ನಿರ್ಧಾರ ನಾನು ನಿರೀಕ್ಷೆ ಮಾಡಿರಲಿಲ್ಲ. ಬಚ್ಚೇಗೌಡರು ನನ್ನ ವಿರುದ್ದ 3 ಬಾರಿ ಸೋತಿದ್ದಕ್ಕೆ ಹುನ್ನಾರ ನಡೆಸಿ ನನ್ನ ಸೋಲಿಗೆ ಕಾಂಗ್ರೆಸ್‌ ಜೊತೆ ಕೈ ಜೋಡಿಸಿದರು. ಸದ್ಯ ನಾನು ಸೋಲಿನಿಂದ ಹೊರ ಬಂದಿಲ್ಲ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯೋಚಿಸಿಲ್ಲ ಎಂದರು.

ಮಾಜಿ ಶಾಸಕರಾಗಿ, ಕೆ.ಬಿ.ಪಿಳ್ಳಪ್ಪನವರ ಮಗನಾಗಿ 19 ಸಾವಿರ ಮತ ಪಡೆಯಲು ಸಾಧ್ಯವೇ, ಬಚ್ಚೇಗೌಡರಿಂದ ಇಂತಹ ತೀರ್ಮಾನ ನಿರೀಕ್ಷೆ ಮಾಡಿರಲಿಲ್ಲ. ಆ ಕುಟುಂಬ ಉತ್ತಮ ರಾಜಕಾರಣ ಮಾಡಿತ್ತು, ಪಿಳ್ಳಪ್ಪನವರ ಆತ್ಮಕ್ಕೆ ನೋವು ತಂದ ತೀರ್ಮಾನ ಇದು. ಮುಂದಿನ ದಿನಗಳಲ್ಲಿ ಜೆಡಿಎಸ್‌ ಪಕ್ಷ ಅಸ್ತಿತ್ವದಲ್ಲಿಯೆ ಇರುವುದಿಲ್ಲ ಎಂದು ಸುಧಾಕರ್‌ ಭವಿಷ್ಯ ನುಡಿದರು.

ಸೋಲಿಗೆ ಜೆಡಿಎಸ್‌ ಕುತಂತ್ರ ಕಾರಣ

ಇದೇ ತರಹ ಜೆಡಿಎಸ್‌ ನ ಷಡ್ಯಂತ್ರಕ್ಕೆ ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ(CT Ravi)ಯೂ ಬಲಿಯಾದರು. ಮಂಡ್ಯ ಜಿಲ್ಲೆಯಲ್ಲಿಯೂ ಇದೇ ರೀತಿ ಜೆಡಿಎಸ್‌ ಮತಗಳು ಕಾಂಗ್ರೆಸ್‌ನತ್ತ ಹೋಗಿವೆ. ಇವರ ಕುತಂತ್ರಗಳಿಂದಲೇ ಇಂದು ಜೆಡಿಎಸ್‌ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಂಡಿದೆ. ಇವರ ಕುತಂತ್ರ ಮತ್ತು ಹುನ್ನಾರವೇ ನನಗೂ ಇಲ್ಲಿ ಮುಳುವಾಗಿದೆ. ಜೆಡಿಎಸ್‌ ಕುತಂತ್ರದ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಇದ್ದರೂ ಕೆ.ಪಿ.ಬಚ್ಚೇಗೌಡರು ಈರೀತಿಯ ಕೃತ್ಯಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಇದರಿಂದಾಗಿಯೇ ನಾನು ಸೋಲುವಂತಾಗಿದೆ ಎಂದರು.

Latest Videos
Follow Us:
Download App:
  • android
  • ios