ಹೊಸದರ ಬದಲು ಹಳೇ ಸಿಸಿ ಕ್ಯಾಮೆರಾ ದುರಸ್ತಿಗೆ ಆಗ್ರಹ

  • ಹೊಸದರ ಬದಲು ಹಳೇ ಸಿಸಿ ಕ್ಯಾಮೆರಾ ದುರಸ್ತಿಗೆ ಆಗ್ರಹ
  • ಭಟ್ಕಳ ಪುರಸಭೆ ಸಾಮಾನ್ಯ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ವಿಸ್ತೃತ ಚರ್ಚೆ
  • ನಿರ್ವಹಣೆ ಇಲ್ಲದೇ ಕೆಟ್ಟುನಿಂತ ಉಪಕರಣ
Demand for repair of old CC camera instead of new one ukrav

ಭಟ್ಕಳ (ಅ.8) : ಇಲ್ಲಿನ ಪುರಸಭೆ ಅಧ್ಯಕ್ಷ ಫರ್ವೇಜ್‌ ಕಾಶಿಮ್‌ಜಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಲವು ವಿಷಯದ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ಪರಿಹಾರಕ್ಕೆ ಆಗ್ರಹಿಸಿದರು. ಪಟ್ಟಣದಲ್ಲಿ ಹೊಸದಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪುರಸಭಾ ಸದಸ್ಯರು ಈ ಹಿಂದೆ ಅಳವಡಿಸಿದ ಸಿಸಿ ಕ್ಯಾಮರವನ್ನು ದುರಸ್ತಿ ಮಾಡುವಂತೆ ಒತ್ತಾಯಿಸಿದರು. ಸದಸ್ಯ ಕೃಷ್ಣಾನಂದ ಪೈ, ಉಪಾಧ್ಯಕ್ಷ ಕೈಸರ ಮಾತನಾಡಿ, ಈ ಹಿಂದೆ .28 ಲಕ್ಷ ವೆಚ್ಚದಲ್ಲಿ ಪುರಸಭೆಯಿಂದ ಪಟ್ಟಣದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ ನಿರ್ವಹಣೆಯಿಲ್ಲದೇ ಎಲ್ಲವೂ ಕೆಟ್ಟು ನಿಂತಿದೆ. ಈಗ ಪುನಃ ಹೊಸ ಕ್ಯಾಮೆರಾ ಅಳವಡಿಸಿದರೆ ಇದೇ ಗತಿ ಆಗುತ್ತದೆ ಎಂದರು.

ಬರೀ ಕೋಮು ಭಾಷಣ ಬಿಟ್ಟು ನೀವೇನು ಮಾಡಿದ್ದೀರಿ?, ಭಟ್ಕಳ ಶಾಸಕ ಸುನೀಲ್‌ ನಾಯ್ಕ್‌ಗೆ ತಂಝೀಮ್‌ ಪ್ರಶ್ನೆ

ಸದಸ್ಯ ಶ್ರೀಕಾಂತ ನಾಯ್ಕ ಮಾತನಾಡಿ, ಸಿಸಿಟಿವಿ ಕ್ಯಾಮೆರಾ ಅಳವಡಿಸಿವುದರಿಂದ ಪೊಲೀಸರಿಗಿಂತ ನಮಗೆ ಹೆಚ್ಚು ಅನುಕೂಲವಾಗಲಿದೆ. ಅಪರಾಧ ಪತ್ತೆಗೆ ಸಹಕಾರಿ ಆಗುವುದರಿಂದ ಒಳ್ಳೆಯ ಕೆಲಸಕ್ಕೆ ನಾವು ಸಹಕಾರ ನೀಡಬೇಕು ಎಂದರು.

ಹಾಗಾದರೆ ಮೊದಲು ಹಳೆಯ ಸಿಸಿಟಿವಿ ಕ್ಯಾಮೆರಾ ದುರಸ್ತಿ ಮಾಡಿಸಿ, ಅದರ ನಿರ್ವಹಣೆಯ ಬಗ್ಗೆಯೂ ಕ್ರಮ ವಹಿಸಬೇಕು ಎಂದು ಹೇಳಿದರು.

ಮುಖ್ಯಾಧಿಕಾರಿ ಎಂ.ಕೆ. ಸುರೇಶ, ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಪುರಸಭೆಯಿಂದಲೇ ಮಾಡುತಿದ್ದಾರೆ. ಇಲ್ಲಿಯೂ ಪುರಸಭೆಯಿಂದ ನಿರ್ವಹಿಸಲಾಗುವುದು ಎಂದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಅಧ್ಯಕ್ಷ ಫರ್ವೇಜ್‌ ಕಾಶಿಮ್‌ಜಿ ಹಳೆ ಕ್ಯಾಮರಾ ದುರಸ್ತಿಗೆ ಯೋಜನೆ ಸಿದ್ಧಪಡಿಸಲಾಗುವುದು ಎಂದರು.

ಉಚಿತವಾಗಿ ಕೋಳಿ ತ್ಯಾಜ್ಯ ಸಂಗ್ರಹಣೆ ಮಾಡಲು ಖಾಸಗಿ ವ್ಯಕ್ತಿ ಅರ್ಜಿ ಸಲ್ಲಿಸಿದರೂ ಪುರಸಭೆ ಇನ್ನೂ ತನಕ ಅವರಿಗೆ ಅನುಮತಿ ನೀಡದಿರುವ ಬಗ್ಗೆ ಸದಸ್ಯ ಶ್ರೀಕಾಂತ ನಾಯ್ಕ ಆಕ್ಷೇಪ ವ್ಯಕ್ತಪಡಿಸಿದರು. ಈಗ ಕೋಳಿ ತ್ಯಾಜ್ಯ ಸಂಗ್ರಹ ಮಾಡುವ ಕಂಪೆನಿಯವರಿಗೆ .50 ಸಾವಿರ ನೀಡಲಾಗುತ್ತದೆ. ಜೊತೆಗೆ ಇಬ್ಬರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಈಗ ಬಂದಿರುವ ವ್ಯಕ್ತಿ ಉಚಿತವಾಗಿ ತ್ಯಾಜ್ಯ ಸಂಗ್ರಹ ಮಾಡುವುದಾಗಿ ತಿಳಿಸಿದ್ದಾರೆ. ಆದರೂ ಅನುಮತಿ ನೀಡಲು ಮೀನಮೇಷವೇಕೆ ಎಂದು ಪ್ರಶ್ನಿಸಿದರು. ಇದರಿಂದ ಪುರಸಭೆ ಲಾಭವಲ್ಲವೇ ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಅಧ್ಯಕ್ಷ ಫರ್ವೇಜ್‌ ಕಾಶಿಮ್‌ಜಿ, ಈ ಕುರಿತು ಅರ್ಜಿ ಆಹ್ವಾನಿಸಲಾಗಿತ್ತು. ಕೇವಲ ಒಬ್ಬರು ಮಾತ್ರ ತ್ಯಾಜ್ಯ ಸಂಗ್ರಹಣೆಗೆ ಆಸಕ್ತಿ ವಹಿಸಿ ಅರ್ಜಿ ಸಲ್ಲಿಸಿದ್ದಾರೆ. ಷರತ್ತು ವಿಧಿಸಿ ಅವರಿಗೆ ತ್ಯಾಜ್ಯ ಸಂಗ್ರಹಕ್ಕೆ ಅವಕಾಶ ನೀಡಲಾಗುವುದು ಎಂದರು.

ಬೀದಿದೀಪ ನಿರ್ವಹಣೆ, ರಸ್ತೆಗೆ ಅಡ್ಡಲಾಗಿರುವ ಮರಗಳ ಟೊಂಗೆಯನ್ನು ಕತ್ತರಿಸುವುದು. ನೆರೆಹಾವಳಿಯಿಂದ ಹಾನಿಗೀಡಾದ ಚರಂಡಿ ಹಾಗೂ ರಸ್ತೆ ದುರಸ್ತಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸದಸ್ಯರು ಆಗ್ರಹಿಸಿದರು.

ಭಟ್ಕಳದಲ್ಲಿ ಭುಗಿಲೆದ್ದ ದೇವಸ್ಥಾನ ಮಹಾದ್ವಾರ V/s ಟಿಪ್ಪು ಗೇಟ್ ನಿರ್ಮಾಣ ವಿವಾದ

ಬಂದರು ರಸ್ತೆಯಲ್ಲಿ ಬೀದಿದೀಪ ಇಲ್ಲವಾಗಿದೆ. ಲೋಕೋಪಯೋಗಿ ಇಲಾಖೆಗೆ ಪುರಸಭೆಯಿಂದ ಪತ್ರ ಬರೆದು ಶೀಘ್ರ ಬೀದಿದೀಪ ಅಳವಡಿಸುಂತೆ ಸೂಚಿಸಲು ಸದಸ್ಯ ಶ್ರೀಕಾಂತ ನಾಯ್ಕ ಆಗ್ರಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಇಮಶಾದ್‌, ಪುರಸಭೆಯ ಸದಸ್ಯರು, ಯೋಜನಾಧಿಕಾರಿ ವೇಣುಗೋಪಾಲ ಶಾಸ್ತ್ರಿ, ಹಿರಿಯ ಆರೋಗ್ಯ ನಿರೀಕ್ಷಕಿ ಸುಜಿಯಾ ಮುಂತಾದವರಿದ್ದರು/

Latest Videos
Follow Us:
Download App:
  • android
  • ios