ಹುಣಸೋಡು ಗಣಿಸ್ಫೋಟ : ಮೃತರ ಸಂಖ್ಯೆ ಏರಿಕೆ

ಶಿವಮೊಗ್ಗದ ಹುಣಸೋಡು ಗಣಿ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಏರಿಕೆಯಾಗಿದೆ. ಆದರೆ ಇಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಬಗೆಹರಿಯದ ಪ್ರಶ್ನೆಯಾಗಿಯೇ ಉಳಿದಿದೆ.  

Death Toll Raises in Hunasodu Blast Case snr

ಶಿವಮೊಗ್ಗ (ಜ.24): ಹುಣಸೋಡು ಗಣಿಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟುಎಂಬುದು ಬಗೆಹರಿಯದ ಪ್ರಶ್ನೆಯಾಗಿ ಉಳಿದಿದ್ದು ಇದೀಗ ಅಧಿಕೃತವಾಗಿ ಆರು ಎಂದು ಘೋಷಿಸಲಾಗಿದೆ. 

ಶುಕ್ರವಾರ ಐದು ಮಂದಿ ಮೃತರಾಗಿದ್ದಾರೆ ಎಂದು ಜಿಲ್ಲಾಡಳಿತ ಘೋಷಿಸಿತ್ತು. ಇಂದು ಇನ್ನೋರ್ವ ವ್ಯಕ್ತಿಯ ಮೃತಪಟ್ಟಿರುವುದನ್ನು ಜಿಲ್ಲಾಡಳಿತ ದೃಢಪಡಿಸಿದೆ. ಇದರಲ್ಲಿ ಐದು ಜನರ ಪೈಕಿ ಭದ್ರಾವತಿಯ ಮಂಜುನಾಥ್‌, ಪ್ರವೀಣ್‌, ಆಂಧ್ರದ ರಾಜು, ಜಾವೀದ್‌ ಮತ್ತು ಪವನ್‌ ಮೃತದೇಹವನ್ನು ಗುರುತಿಸಲಾಗಿದ್ದು, ಇನ್ನೊಂದು ಮೃತದೇಹವನ್ನು ಇನ್ನೂ ಗುರುತಿಸಲಾಗಿಲ್ಲ. 

ಶಿವಮೊಗ್ಗ ಸ್ಫೋಟದಲ್ಲಿ ಮೃತರಿಬ್ಬರ ಕಣ್ಣೀರ ಕಥೆ ಇದು : ತುಂಬು ಗರ್ಭಿಣಿ ಪತ್ನಿ ತೊರೆದು ಹೋದ ...

ಐವರ ಪೈಕಿ ಇಬ್ಬರ ಶವಗಳನ್ನು ಜಿಲ್ಲಾಡಳಿತ ವಾರಸುದಾರರಿಗೆ ಒಪ್ಪಿಸಿತ್ತು. ಶನಿವಾರ ಮೂವರ ಶವಗಳನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸಲಾಗಿದೆ.

 ಮೂವರು ಸಂಗಡಿಗರು ನಾಪತ್ತೆ

  ಗಣಿಸ್ಫೋಟದ ಬೆನ್ನಲ್ಲೇ ಭದ್ರಾವತಿಯ ಬಸವನಗುಡಿಯ ಮೂರು ಮಂದಿ ನಾಪತ್ತೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಬಸವನಗುಡಿ ಮೃತ ಮಂಜುನಾಥ್‌ ಜೊತೆ ಮೃತ ಪ್ರವೀಣ್‌ ಸೇರಿದಂತೆ ಬಸವನಗುಡಿ ಮತ್ತು ಅಂತರಗಂಗೆಯ ಐದು ಮಂದಿ ಯಾವಾಗಲೂ ಜೊತೆಗೆ ಇರುತ್ತಿದ್ದರು. 

ಕೇಂದ್ರ ಸಚಿವ ಸುರೇಶ್ ಅಂಗಡಿಗೆ ರಾಜಕೀಯ ಗಣ್ಯರ ಅಂತಿಮ ನಮನ! .

ಎಲ್ಲಿಯೇ ಹೋದರೂ ಇವರು ಐದು ಮಂದಿ ಒಟ್ಟಿಗೇ ಕೆಲಸಕ್ಕೆ ಹೋಗುತ್ತಿದ್ದರು. ಗುರುವಾರ ಕೂಡ ಅಂತರಗಂಗೆಯಿಂದ ಈ ಐದು ಮಂದಿ ಒಟ್ಟಿಗೆ ಒಂದೇ ವಾಹನದಲ್ಲಿ ಹೊರಟಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು. ಆದರೆ ಸ್ಫೋಟದ ಬಳಿಕ ಮಂಜುನಾಥ್‌ ಮತ್ತು ಪ್ರವೀಣ್‌ ಮೃತರಾಗಿದ್ದಾರೆ ಎಂದು ಜಿಲ್ಲಾಡಳಿತ ಹೇಳಿ ಶವವನ್ನು ವಾರಸುದಾರರಿಗೆ ನೀಡಿದೆ. ಆದರೆ ಇವರ ಜೊತೆಯಲ್ಲಿ ಇದ್ದ ಪುನೀತ್‌, ನಾಗರಾಜ್‌ ಮತ್ತು ಶಶಿಕುಮಾರ್‌ ಇದುವರೆಗೂ ಎಲ್ಲಿದ್ದಾರೆ ಗೊತ್ತಾಗುತ್ತಿಲ್ಲ. ಈ ಮೂರು ಮಂದಿಯ ಮೊಬೈಲ್‌ ಸ್ವಿಚ್‌ಆಫ್‌ ಆಗಿದೆ. ನಾಪತ್ತೆಯಾದವರ ಕುರಿತು ಜಿಲ್ಲಾಡಳಿತ ಮತ್ತು ಕುಟುಂಬ ಸದಸ್ಯರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

Latest Videos
Follow Us:
Download App:
  • android
  • ios