Asianet Suvarna News Asianet Suvarna News

ಮಂಗಳೂರು: ಟೋಲ್‌ ಸಿಬ್ಬಂದಿಯಿಂದ ಜೀವ ಬೆದರಿಕೆ

ತಲಪಾಡಿ ಟೋಲ್‌ ಪ್ಲಾಝಾದಲ್ಲಿ ಸಿಬ್ಬಂದಿ ಜೀವ ಬೆದರಿಕೆ ಒಡ್ಡಿದ್ದಾರೆಂಬ ಆರೋಪ ಕೇಳಿ ಬಂದಿದೆ. ತಲಪಾಡಿ ಟೋಲ್‌ ಪ್ಲಾಝಾದ ನಗದು ಸ್ವೀಕಾರ ಟೋಲ್‌ಗೆಟ್‌ನಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ಪ್ರತಿಭಟಿಸಿದ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ಧೀಕ್‌ ತಲಪಾಡಿ ಅವರಿಗೆ ಬೆದರಿಕೆ ಒಡ್ಡಲಾಗಿದೆ.

death threat from mangalore toll staff
Author
Bangalore, First Published Jan 11, 2020, 12:57 PM IST

ಮಂಗಳೂರು(ಜ.11): ತಲಪಾಡಿ ಟೋಲ್‌ ಪ್ಲಾಝಾದ ನಗದು ಸ್ವೀಕಾರ ಟೋಲ್‌ಗೆಟ್‌ನಲ್ಲಿ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವುದನ್ನು ಪ್ರತಿಭಟಿಸಿದ ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ಧೀಕ್‌ ತಲಪಾಡಿ ಅವರಿಗೆ ಟೋಲ್‌ ಸಿಬ್ಬಂದಿ ಜೀವ ಬೆದರಿಕೆ ಒಡ್ಡಿದ್ದಾರೆಂದು ಅಪಾದಿಸಿ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ತಲಪಾಡಿ ಟೋಲ್‌ ಪ್ಲಾಝಾದಲ್ಲಿ 10 ಟೋಲ್‌ ಗೇಟ್‌ಗಳಲ್ಲಿ ಎರಡೂ ಬದಿಯಲ್ಲಿ ತಲಾ ಎರಡು ಟೋಲ್‌ ಗೇಟ್‌ನಲ್ಲಿ ನಗದು ಸ್ವೀಕಾರ ಮಾಡಲು ಈ ಹಿಂದೆ ಪ್ರತಿಭಟನೆ ನಡೆದು ತೀರ್ಮಾನಿಸಲಾಗಿತ್ತು.

ಸೀಕ್ವೆನ್ಸ್‌ ಬದಲಿಸಿ ವಿಡಿಯೋ ಬಿಡುಗಡೆ ಮಾಡಿದ್ರಾ ಕುಮಾರಸ್ವಾಮಿ..?

ಆದರೆ ಟೋಲ್‌ ಸಿಬ್ಬಂದಿ ಎರಡೂ ಬದಿಯ ಒಂದು ಟೋಲ್‌ ಗೇಟ್‌ನಲ್ಲಿ ಮಾತ್ರ ಟೋಲ್‌ ಸ್ವೀಕಾರಕ್ಕೆ ಅವಕಾಶ ನೀಡಿದ್ದು, ಇದರಿಂದ ನಗದು ಸ್ವೀಕಾರದ ವಾಹನಗಳು ಸರತಿಯಲ್ಲಿ ಸಂಚರಿಸುವುದರಿಂದ ಖಾಸಗಿ ಬಸ್‌ಗಳು ಪ್ರಯಾಣ ಮೊಟಕುಗೊಳಿಸಿ ಟೋಲ್‌ನಿಂದಲೇ ಹಿಂತಿರುಗುತ್ತಿತ್ತು.

ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದು, ಇದನ್ನು ಪ್ರಶ್ನಿಸಿದ ಸಿದ್ದೀಕ್‌ ಮೇಲೆ ಟೋಲ್‌ ಸಿಬ್ಬಂದಿ ಜೀವ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಲಾಗಿದೆ. ಜೀವ ಬೆದರಿಕೆ ಒಡ್ಡಿರುವುದನ್ನು ಸ್ಥಳದಲ್ಲಿ ಸಿದ್ದೀಕ್‌ ಪ್ರತಿಭಟಿಸಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ, ನಗದು ಸ್ವೀಕಾರಕ್ಕೆ ಎರಡು ಟೋಲ್‌ಗಳನ್ನು ವ್ಯವಸ್ಥೆ ಮಾಡಿದರು.

ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಫೇಸ್‌ ರೆಕಗ್ನಿಶನ್‌ ತಂತ್ರಜ್ಞಾನ!

Follow Us:
Download App:
  • android
  • ios