ಮಂಗಳೂರು(ಜ.09): ಪೌರತ್ವ ತಿದ್ದುಪಡಿ ಕಾಯ್ದೆ ಪರ ಮಾತನಾಡಿದ ಮಂಗಳೂರಿನ ಮುಸ್ಲಿಂ ಮುಖಂಡನಿಗೆ ಕೊಲೆ ಬೆದರಿಕೆ ಬಂದಿದೆ. ಸಿಎಎ ಪರ ಮುಸ್ಲಿಂ ಮುಖಂಡ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೊಲ್ಲಿರಾಷ್ಟ್ರದಿಂದ ಕೊಲೆ ಬೆದರಿಕೆ ಬಂದಿದೆ.

ಸಿಎಎ ಪರ ಧ್ವನಿಯೆತ್ತಿದ ಬಿಜೆಪಿಯ ಮುಸ್ಲಿಂ ಮುಖಂಡನಿಗೆ ಕೊಲೆ ಬೆದರಿಕೆ ಬಂದಿದ್ದು, ಮಂಗಳೂರಿನ ಮುಡಿಪು ನಿವಾಸಿ ನ್ಯಾಯವಾದಿ, ಬಿಜೆಪಿ ಮುಖಂಡ ಅಸ್ಗರ್ ಆಲಿಗೆ ಜೀವ ಬೆದರಿಕೆ ಬಂದಿತ್ತು.

JNU ಬ್ಯಾನ್ ಮಾಡೋದು ಸರಿ ಅಲ್ಲ: ಕಲ್ಲಡ್ಕ ಪ್ರಭಾಕರ್ ಭಟ್

ಸಿಎಎ ಮತ್ತು ಎನ್‌ಆರ್‌ಸಿಯಿಂದ ಮುಸ್ಲಿಮರಿಗೆ ತೊಂದರೆಯಿಲ್ಲ ಎಂದು ಅಸ್ಗರ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಕೊಲ್ಲಿ ರಾಷ್ಟ್ರದಿಂದ ಕರೆ ಮಾಡಿದ ವ್ಯಕ್ತಿ ಕೊಲೆ ಅಸ್ಗರ್‌ಗೆ ಕೊಲೆ ಬೆದರಿಕೆಯೊಡ್ಡಿದ್ದಾನೆ.

ಬ್ಯಾರಿ ಭಾಷೆಯಲ್ಲಿ ಮಾತನಾಡಿದ ಆಡಿಯೋವನ್ನು ಕಿಡಿಗೇಡಿಗಳು ಅಸ್ಗರ್‌ಗೆ ಕಳುಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಒಳ್ಳೆಯವರಾಗಿರೋದ್ರಿಂದ ನೀನು ಇನ್ನೂ ಉಳಿದಿದ್ದಿ. ನಿನ್ನನ್ನು ಯಾವತ್ತೋ ಹಿಸುಕಿ ಪೊದೆಯೊಳಗೆ ಎಸೆಯಬೇಕಿತ್ತು. ನಿನ್ನನ್ನ ಬಿಟ್ಟಿದ್ದು ತಪ್ಪು, ನೀನು ಈ ಸಮಯದಲ್ಲಿ ಬಿಜೆಪಿ ಅಂತ ಅದಕ್ಕೆ ಸಪೋರ್ಟ್ ‌ಮಾಡ್ತೀಯಲ್ವಾ.? ಅಮಿತ್ ಶಾ, ಮೋದಿ ನಿನ್ನ ಅಪ್ಪನಾ? ಅವತ್ತು ಗುಜರಾತ್ ಮಾರಣಹೋಮದಲ್ಲಿ ಸತ್ತಿದ್ದು ನಮ್ಮ ಸಹೋದರರು. ನಿನ್ನನ್ನ ಬಿಡ್ತೇನೆ ಅಂತ ಅನ್ಕೊಂಡಿದ್ಯಾ? ಇದು ನಿನಗೆ ಲಾಸ್ಟ್ ವಾರ್ನಿಂಗ್. ನಿನ್ನ ಬಿಜೆಪಿಯವರು ನಿಂಗೆ 24 ಗಂಟೆ ಪ್ರೊಟೆಕ್ಷನ್ ಕೊಡಲ್ಲ. ನಿನ್ನನ್ನ ಹಿಸುಕಿ ಪೊದೆಗೆ ಎಸೆಯೋಕಿದೆ ನೋಡು ಎಂದು ಬೆದರಿಸಲಾಗಿದೆ.

CAA ಪರ ಅಭಿಯಾನ: ಬಿಜೆಪಿಗೆ 52 ಲಕ್ಷ ಮಿಸ್ಡ್ ಕಾಲ್!

ಬ್ಯಾರಿ ಭಾಷೆಯಲ್ಲಿ ಅಸ್ಗರ್ ಮೊಬೈಲ್‌ಗೆ ಬೆದರಿಕೆ ಸಂದೇಶ ರವಾನೆಯಾಗಿದೆ. ಅಸ್ಗರ್ ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಸ್ಗರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರೂ ಆಗಿದ್ದಾರೆ.