ನವದೆಹಲಿ[ಜ.07]: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸುವಂತೆ ಕೋರಿ ಮಿಸ್ಡ್‌ಕಾಲ್‌ ಅಭಿಯಾನ ಆರಂಭಿಸಿರುವ ಬಿಜೆಪಿಗೆ ಸೋಮವಾರ ರಾತ್ರಿ 8 ಗಂಟೆಯವರೆಗೆ 52.72 ಲಕ್ಷ ಮಿಸ್ಡ್‌ ಕಾಲ್‌ಗಳು ಬಂದಿವೆ.

ಪೌರತ್ವ ಜಾಗೃತಿಗೆ ಬಿಜೆಪಿ ಮನೆಮನೆ ಅಭಿಯಾನ ಶುರು

8866288662 ಮೊಬೈಲ್‌ ಸಂಖ್ಯೆಗೆ ಮಿಸ್ಡ್‌ ಕಾಲ್‌ ಮಾಡುವಂತೆ ಬಿಜೆಪಿ 4 ದಿನಗಳ ಹಿಂದೆ ಅಭಿಯಾನ ಆರಂಭಿಸಿತ್ತು. ಇದಕ್ಕೆ ಸೋಮವಾರ ರಾತ್ರಿವರೆಗೆ 52 ಲಕ್ಷ ಜನರ ಬೆಂಬಲ ಈವರೆಗೆ ಹರಿದುಬಂದಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ತಿಳಿಸಿದ್ದಾರೆ.

ಈ ನಡುವೆ, ಸಭೆಯೊಂದರಲ್ಲಿ ಮಾತನಾಡಿದ ಶಾ, ‘ನಿಮ್ಮ ಬಳಿ ಫೋನು ಇದೆಯಲ್ವಾ? ಇಲ್ಲಿಯೇ ಮಿಸ್ಡ್‌ ಕಾಲ್‌ ಕೊಡಿ’ ಎಂದು ಸಭಿಕರಿಗೆ ಕರೆ ನೀಡಿದರು.

ಪೌರತ್ವ ಕಾಯ್ದೆ ಬೆಂಬಲಿಸುತ್ತೀರಾ?: ಈ ನಂಬರ್‌ಗೆ ಮಿಸ್ಡ್ ಕಾಲ್ ಕೊಡಿ ಎಂದ ಬಿಜೆಪಿ!