ಕರೆಂಟ್ ಶಾಕ್ ಹೊಡೆದು ನವಿಲು ಸಾವು: ಸಾವನ್ನಪ್ಪಿದ ಪ್ರಾಣಿ, ಪಕ್ಷಿಗಳ ಅಂತ್ಯಕ್ರಿಯೆ ಮಾಡಬೇಡಿ ಎಂದ ಸರ್ಕಾರ.!
ಆಹಾರವನ್ನು ಅರಸಿಕೊಂಡು ಉಡುಪಿ ಜನವಸತಿ ಪ್ರದೇಶದೊಳಗೆ ಬಂದ ನವಿಲು ವಿದ್ಯುತ್ ಲೈನ್‌ನ ಶಾಕ್ ತಗುಲಿ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಉಡುಪಿ (ಏ.03): ಇಂದು ಬೆಳಗ್ಗೆ ಉಡುಪಿ ನಗರದ ಪಣಿಯಾಡಿಯಲ್ಲಿ ರಾಷ್ಟ್ರ ಪಕ್ಷಿ ನವಿಲು ಜನ ವಸತಿ ಪ್ರದೇಶದಲ್ಲಿ ಅಸ್ಪಸ್ಥಗೊಂಡಂತೆ ಸೋಮವಾರ ಬೆಳಗ್ಗೆ ಕಂಡು ಬಂತು. ಇನ್ನು ಸ್ಥಳೀಯರು ಹೋಗಿ ಅದನ್ನು ಕಾಪಾಡಬೇಕು ಎಂದು ಪ್ರಯತ್ನ ಮಾಡುವಷ್ಟರಲ್ಲಿಯೇ ನವಿಲು ಸಾವನ್ನಪ್ಪಿದೆ.
ಕೂಡಲೇ ಸ್ಥಳೀಯರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ರವಾನಿಸಿದ್ದಾರೆ. ಕ್ಷಣಾರ್ಧದಲ್ಲಿ ಸ್ಥಳಕ್ಕೆ ಆಗಮಿಸಿದ ನಿತ್ಯಾನಂದ ಒಳಕಾಡು, ನವಿಲಿನ ದೇಹವನ್ನು ಪರಿಶೀಲನೆ ಮಾಡಿದರು. ಅಷ್ಟೊತ್ತಿಗಾಗಲೇ ನವಿಲು ಮೃತಪಟ್ಟಿದೆ ಎಂದು ನಿತ್ಯಾನಂದ ಒಳಕಾಡು ಮಾಹಿತಿ ನೀಡಿದ್ದಾರೆ. ಆದರೆ, ಈ ನವಿಲನ್ನು ಇಲ್ಲಿಯೇ ಅಂತ್ಯಕ್ರಿಯೆ ಮಾಡೋಣ ಎಂದು ಜನರು ಹೇಳಿದ್ದು, ಈ ರೀತಿ ಮಾಡಬಾರದು ರಂದು ನಿತ್ಯಾನಂದ ಅವರು ಜನರಿಗೆ ಅರಿವು ಮೂಡಿಸಿದ್ದಾರೆ. ಒಂದು ವೇಳೆ ಯಾವುದೇ ಕಾಡು ಪ್ರಾಣಿಗಳು ನಾಡಿನಲ್ಲಿ ಬಂದು ಸಾವನ್ನಪ್ಪಿದರೂ ಅವುಗಳನ್ನು ಅಂತ್ಯಕ್ರಿಯೆ ಮಾಡದೇ ಅರಣ್ಯಾಧಿಕಾರಿಗಳ ಸುಪರ್ದಿಗೆ ಒಪ್ಪಿಸಬೇಕು ಎಂದು ಮಾಹಿತಿ ನೀಡಿದರು.
ಜಯ ಮೃತ್ಯುಂಜಯ ಸ್ವಾಮೀಜಿಗೆ ಬೆದರಿಕೆ: ಭದ್ರತೆ ಕೊಟ್ಟ ಮುಖ್ಯಮಂತ್ರಿ
ಅರಣ್ಯ ಅಧಿಕಾರಿಗಳಿಗೆ ಹಸ್ತಾಂತರ: ಕಳೆದ ರಾತ್ರಿ ಹಾರುವ ಸಂದರ್ಭ ನವಿಲು ವಿದ್ಯುತ್ ತಂತಿಗೆ ಸಿಲುಕಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ನವಿಲಿನ ಕಳೇಬರವನ್ನು ನಿತ್ಯಾನಂದ ಒಳಕಾಡು ಸ್ಥಳದಿಂದ ರವಾನಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕ ಮಾಡಿ ಮೃತ ದೇಹವನ್ನು ಮಣಿಪಾಲದ ತಿಮ್ಮಕ್ಕ ಟ್ರೀ ಪಾರ್ಕ್ ನಲ್ಲಿ ಕಾರ್ಯಾಚರಿಸುವ ಗಸ್ತು ಅರಣ್ಯಾಧಿಕಾರಿ ಪಾಣ ಅವರಿಗೆ ಹಸ್ತಾಂತರ ಮಾಡಿದ್ದಾರೆ. ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ರಾಷ್ಟ್ರ ಪ್ರಾಣಿಗಳು ಯಾವುದೇ ಆಕಸ್ಮಿಕ ಅವಘಡದಿಂದ ಮೃತಪಟ್ಟರೆ ಅದನ್ನು ಅಂತ್ಯಸಂಸ್ಕಾರ ಮಾಡಬಾರದು ಎಂದು ಇತ್ತೀಚೆಗೆ ಕೇಂದ್ರ ಸರ್ಕಾರ ಆದೇಶ ಮಾಡಿದೆ.
ಕಾಡಂಚಿನಲ್ಲಿ ಸತ್ತ ಪ್ರಾಣಿ ದೇಹವಿಡಿ: ಈ ಹಿಂದೆ ಅಗ್ನಿಚಿತೆ ನಿರ್ಮಾಣ ಮಾಡಿ, ಹೂಳುವ ಮೂಲಕ ಗೌರವಯುತ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಇತ್ತೀಚಿನ ನಿಯಮದ ಪ್ರಕಾರ ಮೃತ ಪ್ರಾಣಿಯನ್ನು ಕಾಡಿನಂಚಿನಲ್ಲಿ ಇಡಬೇಕು. ಕಾಡು ಪ್ರಾಣಿಗಳು ಬಂದು ಸತ್ತ ಪ್ರಾಣಿಯನ್ನು ಆಹಾರವಾಗಿ ಸ್ವೀಕರಿಸಬೇಕು ಎಂಬ ಆದೇಶವಿದೆ. ಆದ್ದರಿಂದ ಸರ್ಕಾರದ ಹೊಸ ನಿಯಮದಂತೆ ನಿತ್ಯಾನಂದ ಒಳಕಾಡು ಅವರು ಅರಣ್ಯ ಅಧಿಕಾರಿಗಳಿಗೆ ನವಿಲಿನ ಮೃತ ದೇಹವನ್ನು ಹಸ್ತಾಂತರ ಮಾಡಿದ್ದಾರೆ.
ಮೀಸಲಾತಿ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಕಾಡಿನಲ್ಲಿ ಆಹಾರ ಸಿಗದೇ ನಾಡಿನತ್ತ ಬರುತ್ತಿರುವ ನವಿಲುಗಳು: ಇತ್ತೀಚಿನ ದಿನಗಳಲ್ಲಿ ಉಡುಪಿ ನಗರದಾದ್ಯಂತ ಅತಿ ಹೆಚ್ಚು ಸಂಖ್ಯೆಯ ನವಿಲುಗಳು ಓಡಾಡುತ್ತಿವೆ. ಈ ಹಿಂದೆ ಕಾಡಂಚಿನ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತಿದ್ದ ನವಿಲುಗಳು, ಈಗ ಎಲ್ಲೆಂದರಲ್ಲಿ ಬಂದು ವಾಹನ, ವಿದ್ಯುತ್ ಸಂಪರ್ಕಕ್ಕೆ ಘಾಸಿಗೊಂಡು ಸಾಯುತ್ತಿವೆ. ಬೆಳೆ ನಾಶದ ಕಾರಣಕ್ಕೆ ಜನರು ನವಿಲಿನ ಕಾಟದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ, ಇನ್ನೊಂದೆಡೆ ನವಿಲುಗಳು ಆಹಾರ ಸಿಗದೇ ನಗರಗಳನ್ನೇ ಆಶ್ರಯಿಸುತ್ತಿರುವುದು ಖೇದಕರವಾಗಿದೆ. ಕಾಡಿನಲ್ಲಿ ಹಣ್ಣು ಮತ್ತು ಇತರೆ ಪಕ್ಷಿಗಳಿಗೆ ಆಹಾರ ಆಗುವಂತಹ ಮರಗಿಡಗಳನ್ನು ಬೆಳಸಬೇಕು ಎಂದು ಸಲಹೆ ನೀಡಿದರು.