ಚರಂಡಿ ಮೇಲೆ ಚಪ್ಪಡಿ ಹಾಕಿದ್ದ ಕಾರಣಕ್ಕೆ ಮೃತದೇಹ ಯಾರಿಗೂ ಕಂಡಿರಲಿಲ್ಲ. ಚರಂಡಿ ನೀರು ಹರಿಯದೆ ದುರ್ವಾಸನೆ ಬರುತ್ತಿದ್ದ ಕಾರಣಕ್ಕೆ ಚರಂಡಿ ಚಪ್ಪಡಿಯನ್ನು ಸರಿಸಿ ಸ್ಥಳೀಯರು ನೋಡಿದಾಗ ಮೃತದೇಹ ಪತ್ತೆ.
ಬೆಂಗಳೂರು(ಮಾ.01): ಒಂಭತ್ತು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ಕೂಲಿ ಕಾರ್ಮಿಕನೊಬ್ಬ ಮೃತದೇಹವು ಆತನ ಮನೆ ಸಮೀಪದ ಚರಂಡಿಯಲ್ಲಿ ಮಂಗಳವಾರ ಪತ್ತೆಯಾಗಿದೆ. ಬಿನ್ನಿಮಿಲ್ ಸಮೀಪದ ಮಾರ್ಕಂಡೇಯ ಲೇಔಟ್ ನಿವಾಸಿ ಮಧುಸೂದನ್ (33) ಮೃತ ದುರ್ದೈವಿ. ಮನೆ ಸಮೀಪದ ಚರಂಡಿ ನೀರು ಸರಾಗವಾಗಿ ಸಾಗದ ಹಿನ್ನಲೆಯಲ್ಲಿ ಸ್ಥಳೀಯರು ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತನ್ನ ಪತ್ನಿ ಸುಷ್ಮಿತಾ ಹಾಗೂ ಇಬ್ಬರು ಮಕ್ಕಳ ಜತೆ ನೆಲೆಸಿದ್ದ ಮಧುಸೂದನ್, ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ವಿಪರೀತ ಮದ್ಯ ವ್ಯಸನಿಯಾಗಿದ್ದ ಆತ, ಮನೆಗೆ ಬಾರದೆ ಫೆಬ್ರವರಿ 19ರಿಂದ ಕಾಣೆಯಾಗಿದ್ದ. ತನ್ನ ಪತಿಗಾಗಿ ಸುತ್ತಮುತ್ತ ಹುಡುಕಾಟ ನಡೆಸಿದ್ದರು. ಕೊನೆಗೆ ಎಲ್ಲೂ ಕಾಣದೆ ಹೋದಾಗ ಮಂಗಳವಾರ ಜೆ.ಜೆ.ನಗರ ಠಾಣೆಗೆ ಆತನ ಪತ್ನಿ ಸುಷ್ಮಿತಾ ದೂರು ನೀಡಿದ್ದಳು. ಆದರೆ ಮನೆ ಸಮೀಪದ ಚರಂಡಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಗೋಕಾಕ್: ಉದ್ಯಮಿ ರಾಜು ಝಂವರ್ ಹತ್ಯೆ ಪ್ರಕರಣ, 6 ದಿನಗಳ ಬಳಿಕ ಶವ ಪತ್ತೆ
ಚರಂಡಿ ಮೇಲೆ ಚಪ್ಪಡಿ ಹಾಕಿದ್ದ ಕಾರಣಕ್ಕೆ ಮೃತದೇಹ ಯಾರಿಗೂ ಕಂಡಿರಲಿಲ್ಲ. ಚರಂಡಿ ನೀರು ಹರಿಯದೆ ದುರ್ವಾಸನೆ ಬರುತ್ತಿದ್ದ ಕಾರಣಕ್ಕೆ ಚರಂಡಿ ಚಪ್ಪಡಿಯನ್ನು ಸರಿಸಿ ಸ್ಥಳೀಯರು ನೋಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
