ಗೋಕಾಕ್‌: ಉದ್ಯಮಿ ರಾಜು ಝಂವರ್ ಹತ್ಯೆ ಪ್ರಕರಣ, 6 ದಿನಗಳ ಬಳಿಕ ಶವ ಪತ್ತೆ

ರಾಜು ಝಂವರ ಮೃತದೇಹಕ್ಕಾಗಿ ಪೊಲೀಸರು ಮೆಗಾ ಸರ್ಚ್ ಆಪರೇಷನ್ ಕೈಗೊಂಡಿದ್ದರು. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಎರಡೂ ಜಿಲ್ಲೆಗಳ 350 ಪೊಲೀಸರು ಶವ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. 

Businessman Raju Zawar Deadbody Found After 6 Days at Gokak in Belagavi grg

ಬೆಳಗಾವಿ(ಫೆ.17):  ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ಉದ್ಯಮಿ ರಾಜು ಝಂವರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ 6 ದಿನಗಳ ಬಳಿಕ ರಾಜು ಝಂವರ ಮೃತದೇಹ ಪತ್ತೆಯಾಗಿದೆ. ರಾಜು ಝಂವರ ಮೃತದೇಹಕ್ಕಾಗಿ ಪೊಲೀಸರು ಮೆಗಾ ಸರ್ಚ್ ಆಪರೇಷನ್ ಕೈಗೊಂಡಿದ್ದರು. ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಎರಡೂ ಜಿಲ್ಲೆಗಳ 350 ಪೊಲೀಸರು ಶವ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದ್ದರು. 

ಪಂಚನಾಯಕನಟ್ಟಿ ಬಳಿ ಘಟಪ್ರಭಾ ಬಲದಂಡೆ ಕಾಲುವೆಯಲ್ಲಿ ರಾಜು ಝಂವರ ಶವ ಪತ್ತೆಯಾಗಿದೆ. ಫೆಬ್ರವರಿ 10ರ ರಾತ್ರಿ ಗೋಕಾಕ್‌ ನಗರದಿಂದ ಉದ್ಯಮಿ ರಾಜು ಝಂವರ್ ನಾಪತ್ತೆಯಾಗಿದ್ದರು. ಗೋಕಾಕ್ ಸಿಟಿ ಆಸ್ಪತ್ರೆ ಬಳಿ ರಾಜು ಝಂವರ್ ದ್ವಿಚಕ್ರವಾಹನ ಪತ್ತೆಯಾಗಿತ್ತು. 

ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಪತ್ನಿಯ ಶೀಲದ ಮೇಲೆ ಶಂಕೆ!: ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪತಿ

ತನಿಖೆ ವೇಳೆ ವೈದ್ಯ ಡಾ.ಸಚಿನ್ ಶಿರಗಾವಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ಡಾ.ಸಚಿನ್ ಶಿರಗಾವಿ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದರ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟದ್ದನು.  ಗೋಕಾಕ್‌ನ ಯೋಗಿಕೊಳ್ಳ ಮಾರ್ಗದಲ್ಲಿ ಮಾರ್ಕಂಡೇಯ ನದಿ ದಡದಲ್ಲಿ ಹರಿತವಾದ ಆಯುಧದಿಂದ ರಾಜು ಝಂವರನನ್ನ ಹಲ್ಲೆಗೈದು ಕೊಲೆ ಮಾಡಲಾಗಿತ್ತು. ಬಳಿಕ ಕಾರಿನಲ್ಲಿ ಮೃತದೇಹ ತಂದು ಕೊಳವಿ ಬಳಿ ಕಾಲುವೆಗೆ ಎಸೆಯಲಾಗಿತ್ತು ಅಂತ ಡಾ.ಸಚಿನ್ ಶಿರಗಾವಿ ಮಾಹಿತಿ ನೀಡಿದ್ದನು. 

ಯೋಗಿಕೊಳ್ಳ ಮಾರ್ಗದ ಮಾರ್ಕಂಡೇಯ ನದಿ ದಡದಲ್ಲಿ ರಕ್ತದ ಕಲೆ, ಮುರಿದ ಕನ್ನಡಕ, ಪೆನ್ ಪತ್ತೆಯಾಗಿತ್ತು. ಆರೋಪಿ ವೈದ್ಯನ ಮಾಹಿತಿ ಮೇರೆಗೆ ಪೊಲೀಸರು ಶೋಧಕಾರ್ಯ ನಡೆಸಿದ್ದರು. ಕೊಳವಿ ಗ್ರಾಮದಿಂದ 37 ಕಿಮೀ ಕಾಲುವೆಯಲ್ಲಿ ಶೋಧ ಕಾರ್ಯ ನಡೆದಿತ್ತು. ಬೆಳಗಾವಿ ಜಿಲ್ಲೆ ಮೂವರು ಡಿವೈಎಸ್‌ಪಿ, ಎಂಟು ಇನ್ಸ್‌ಪೆಕ್ಟರ್, ಬಾಗಲಕೋಟೆ ಎಎಸ್‌ಪಿ ಸೇರಿ 350ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಪೈಕಿ ಮೂವರನ್ನ ಬಂಧಿಸಿದ್ದು ಇನ್ನಿಬ್ಬರಿಗಾಗಿ ಪೊಲೀಸರು ಜಾಲ ಬೀಸಿದ್ದಾರೆ. ಗೋಕಾಕ್ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

Latest Videos
Follow Us:
Download App:
  • android
  • ios