ಕುಮಟಾ(ಜ.27): ಬಾಡದ ಮುಖ್ಯ ಕಡಲತೀರದಲ್ಲಿ ಮೃತ​ಪಟ್ಟ ಬೃಹತ್‌ ಗಾತ್ರದ ಚಿರತೆಯೊಂದು ತೇಲಿ ಬಂದಿರುವ ಘಟನೆ ಸೋಮವಾರ ಸಂಜೆ ಸಂಭ​ವಿ​ಸಿದೆ.

ಸುಮಾರು 3 ವರ್ಷದ ಚಿರತೆಯ ಶವ ಸಮುದ್ರದಲ್ಲಿ ತೇಲಿ ಬಂದಿತ್ತು. ಇದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. 

ಚಿರತೆ ಮರಿಗಳ ಹಳೆಯ ಚಿತ್ರ ವೈರಲ್‌: ಜನ​ರಲ್ಲಿ ಹೆಚ್ಚಿದ ಆತಂಕ

ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿ, ವರದಿ ನೀಡಲಿದ್ದಾರೆ. ನಂತರ ಮುಂದಿನ ತನಿಖೆ ನಡೆಯಬೇಕಿದೆ. ಸಾವಿಗೆ ನಿಖರ ಕಾರಣ ತಿಳಿಯಲಾಗುತ್ತದೆ ಎಂದು ವಲಯ ಅರಣ್ಯಾಧಿಕಾರಿ ಪ್ರವೀಣ ನಾಯಕ ತಿಳಿಸಿದ್ದಾರೆ.