Asianet Suvarna News Asianet Suvarna News

ಬೆಳಗಾವಿ: ಭಯದ ವಾತಾವರಣ ಸೃಷ್ಟಿಸುವ ಪುಂಡರಿಗೆ ಜಾಗವಿಲ್ಲ, ಡಿಸಿಪಿ ರೋಹನ್‌

ಸಾರ್ವಜನಿಕರ ಹಾಗೂ ಪೊಲೀಸರ ನಡುವೆ ಸೌಹಾರ್ಧತೆ ಮುಖ್ಯವಾಗಿರುತ್ತದೆ. ಕೆಳ ಹಂತದ ಅಧಿಕಾರಿ, ಸಿಬ್ಬಂದಿಗಳಿಂದ ಲೋಪವಾಗಬಹುದು. ಇದರಿಂದಾಗಿ ಪೊಲೀಸರಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂಬ ಕೊರಗು ಜನರಲ್ಲಿ ಮೂಡಬಾರದು. ಅನ್ಯಾವಾಗಿದ್ದಲ್ಲಿ ಅಥವಾ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ ನೇರವಾಗಿ ಮೇಲಾಧಿಕಾರಿಗಳನ್ನು ಭೇಟಿ ಮಾಡಬಹುದು. ನನ್ನ ಕಚೇರಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಸದಾಕಾಲವೂ ಬಾಗಿಲು ತೆರೆದಿರುತ್ತದೆ: ಡಿಸಿಪಿ ರೋಹನ್ ಜಗದೀಶ

DCP Rohan Jagadish Talks Over Illegal Activities in Belagavi grg
Author
First Published Sep 8, 2023, 9:00 PM IST

ಬೆಳಗಾವಿ(ಸೆ.08): ಗಡಿನಾಡು, ಕುಂದಾನಗರಿ ಬೆಳಗಾವಿ ಒಂದಿಲ್ಲೊಂದು ಪ್ರಕರಣದ ಮೂಲಕ ರಾಜ್ಯದ ಗಮನ ಸೆಳೆಯುತ್ತಾ ಬಂದಿದೆ. ಆದರೆ ಪೊಲೀಸ್‌ ಅಧಿಕಾರಿಗಳು ದೃತಿಗೆಡದೆ ತಮ್ಮ ಶಕ್ತಿ ಮೀರಿ ಕೆಲಸ ನಿರ್ವಹಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಹಗಲಿರುಳು ಕೆಲಸ ಮಾಡಿ ಗಲಾಟೆ, ದೊಂಬಿಗಳನ್ನು ಸಂಪೂರ್ಣವಾಗಿ ಹತೋಟಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇದೀಗ ಗಣೇಶೋತ್ಸವ ಹಬ್ಬ ಸಮೀಸುತ್ತಿರುವ ಸಮಯದಲ್ಲಿ ಬೆಳಗಾವಿ ನಗರಕ್ಕೆ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ಕನ್ನಡಿಗ ರೋಹನ್ ಜಗದೀಶ ಅವರು ಆಗಮಿಸಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಬಳಿಕ ಕನ್ನಡಪ್ರಭದೊಂದಿಗೆ ಮಾತನಾಡಿದ್ದಾರೆ.

ಪುಂಡ ಪೋಕರಿಗಳಿಗೆ ಜಾಗವಿಲ್ಲ:

ನಗರ ಪೊಲೀಸ್‌ ವ್ಯಾಪ್ತಿಯಲ್ಲಿ ಕ್ಷಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವುದರ ಜತೆಗೆ ಜನರಲ್ಲಿ ಭಯದವಾತಾವರಣ ಸೃಷ್ಟಿಸುವ ಪುಂಡ ಪೋಕರಿಗಳಿಗೆ ಇಲ್ಲಿ ಜಾಗವಿಲ್ಲ. ದುಂಡಾವರ್ತನೆ ತೋರುವವರು ಯಾರೇ ಆಗಿದ್ದರೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹಾಗೂ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು.

ಧಾರವಾಡ-ಮೈಸೂರು ಎಕ್ಸ್‌ಪ್ರೆಸ್‌ ರೈಲು ಬೆಳಗಾವಿಗೂ ವಿಸ್ತರಣೆ

ಜನರ ನಾಡಿಮೀಡಿತ ತಿಳಿದುಕೊಂಡು ಕಾರ್ಯ ಮಾಡುವೆ :

ಬೆಳಗಾವಿ ಅತ್ಯಂತ ಹೃದವಂತ ನಗರವಾಗಿದೆ. ಇಲ್ಲಿ ಕನ್ನಡಿಗರು, ಮರಾಠಿ ಹಾಗೂ ಕೊಂಕಣಿ ಭಾಷೆ ಸೇರಿದಂತೆ ಹಲವು ಭಾಷಿಕರು ಇಲ್ಲಿವಾಸವಾಗಿದ್ದಾರೆ. ಅಲ್ಲದೇ ಈ ನಗರ ಹಲವು ಸಂಸ್ಕೃತಿಯನ್ನು ಹೊಂದಿರುವ ನಗರವಾಗಿದೆ. ಗಣೇಶೋತ್ಸವ ಹಾಗೂ ಕರ್ನಾಟಕ ರಾಜ್ಯೋತ್ಸವ ಇಡೀ ರಾಜ್ಯದ ಗಮನ ಸೆಳೆಯುವಂತೆ ಆಚರಣೆ ಮಾಡುತ್ತಾರೆ. ಈ ಮೂಲಕ ಇದೊಂದು ಸುಂಸ್ಕೃತ ನಗರವಾಗಿದ್ದರಿಂದ ಇಲ್ಲಿನ ಜನರ ನಾಡಿ ಮಿಡಿತವನ್ನು ಅರ್ಥೈಯಿಸಿಕೊಂಡು ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೇವೆ ಸಲ್ಲಿಸುತ್ತೇನೆ. ಬೆಳಗಾವಿ ಬಗ್ಗೆ ಕೇಳಿದ್ದೇನೆ, ಇದೀಗ ಇಲ್ಲಿ ಸೇವೆ ಮಾಡುವ ಅವಕಾಶ ಒದಗಿಬಂದಿದೆ. ಇಲ್ಲಿನ ಜನರ ನಾಡಿ ಮೀಡಿತವನ್ನು ಅರಿತುಕೊಂಡು ಕೆಲಸ ಮಾಡುತ್ತೇನೆ.

ಅಕ್ರಮ ಚಟುವಟಿಕೆ ವಿರುದ್ಧ ಸಮರ :

ನಗರ ಪೊಲೀಸ್‌ ವ್ಯಾಪ್ತಿಯಲ್ಲಿ ಜೂಜಾಟ, ಮಟಕಾ ಸೇರಿದಂತೆ ಅಕ್ರಮ ಚಟುವಟಿಕೆ ಹಾಗೂ ಸಮಾಜಘಾತುಕರನ್ನು ಯಾವುದೇ ಮುಲಾಜಿಲ್ಲದೇ ಮಟ್ಟ ಹಾಕಲು ಪೊಲೀಸ್‌ ಆಯುಕ್ತರು ಮಾರ್ಗದರ್ಶನ ಹಾಗೂ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ, ಎಸಿಪಿ, ಪೊಲೀಸ್‌ ಇನಸ್ಪೆಕ್ಟರ್‌ಗಳ ಸಹಕಾರೊಂದಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲದೇ ಈ ಕುರಿತು ಅಧಿಕಾರಿ ಮತ್ತು ಸಿಬ್ಬಂದಿಗಳೂ ಸೂಚನೆ ನೀಡಲಾಗುವುದು. ನಿರ್ಲಕ್ಷ್ಯ ತೋರುವ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧವೂ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಲು ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಹೆದರಿಕೆ ಶುರುವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಡಿಸಿಪಿ ಮೊದಲ ಹುದ್ದೆ :

ತರಬೇತಿ ಮುಗಿದ ಬಳಿಕ ಶಿವಮೊಗ್ಗ ಜಿಲ್ಲೆಯ ಸಾಗರ ಉಪವಿಭಾಗದಲ್ಲಿ ಸಹಾಯಕ ಪೊಲೀಸ್‌ ಅಧೀಕ್ಷಕರಾಗಿ ಕೆಲಸ ಮಾಡಿದ್ದೇನೆ. ನಂತರ ಬೆಳಗಾವಿ ನಗರಕ್ಕೆ ಡಿಸಿಪಿಯಾಗಿ ಮೊದಲ ಅಧಿಕಾರವನ್ನು ವಹಿಸಿಕೊಂಡಿದ್ದೇನೆ. ಪೊಲೀಸ್‌ ಇಲಾಖೆಗೆ ಪ್ರತಿದಿನವೂ, ಪ್ರತಿ ಕ್ಷಣವೂ ಸವಾಲುಗಳ ಎದುರಾಗುತ್ತಲೆ ಇರುತ್ತವೆ. ಪೊಲೀಸರಿಗೆ ಒತ್ತಡದಲ್ಲಿ ಕಾರ್ಯನಿರ್ವಹಿಸುವುದು ಸಾಮಾನ್ಯ. ಅನುಭವಿ ಅಧಿಕಾರಿಯಾಗಿರುವ ನಮ್ಮ ಪೊಲೀಸ್‌ ಆಯುಕ್ತರಾದ ಸಿದ್ದರಾಮಪ್ಪ ಸಾಹೇಬರ ಮಾರ್ಗದರ್ಶನ, ಸಲಹೆ, ಸೂಚನೆಗಳೊಂದಿಗೆ ಹಾಗೂ ಡಿಸಿಪಿ ಸ್ನೇಹಾ ಅವರು ಅನುಭವಿ ಅಧಿಕಾರಿಯಾಗಿರುವುದರಿಂದ ಅವರ ಸಲಹೆಗಳೊಂದಿಗೆ ಕಾರ್ಯ ನಿರ್ವಹಿಸುತ್ತೇನೆ.

ಕಚೇರಿ ಬಾಗಿಲು ಸದಾಕಾವೂ ತೆರೆದಿರುತ್ತದೆ :

ಸಾರ್ವಜನಿಕರ ಹಾಗೂ ಪೊಲೀಸರ ನಡುವೆ ಸೌಹಾರ್ಧತೆ ಮುಖ್ಯವಾಗಿರುತ್ತದೆ. ಕೆಳ ಹಂತದ ಅಧಿಕಾರಿ, ಸಿಬ್ಬಂದಿಗಳಿಂದ ಲೋಪವಾಗಬಹುದು. ಇದರಿಂದಾಗಿ ಪೊಲೀಸರಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂಬ ಕೊರಗು ಜನರಲ್ಲಿ ಮೂಡಬಾರದು. ಅನ್ಯಾವಾಗಿದ್ದಲ್ಲಿ ಅಥವಾ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದಲ್ಲಿ ನೇರವಾಗಿ ಮೇಲಾಧಿಕಾರಿಗಳನ್ನು ಭೇಟಿ ಮಾಡಬಹುದು. ನನ್ನ ಕಚೇರಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಸದಾಕಾಲವೂ ಬಾಗಿಲು ತೆರೆದಿರುತ್ತದೆ.

Follow Us:
Download App:
  • android
  • ios