ಮಂಗಳೂರು(ಸೆ.15) : ಪಿಸಿ(ಪೊಲೀಸ್‌ ಕಮಿಷನರ್‌) ಮತ್ತು ಪಿಸಿ(ಪೊಲೀಸ್‌ ಕಾನ್‌ಸ್ಟೇಬಲ್‌) ಇಬ್ಬರೂ ಒಂದೇ. ಇಬ್ಬರು ಕೂಡ ಮಾಡುವ ಕೆಲಸ ಒಂದೇ. ಹಾಗಾಗಿ ಇಬ್ಬರೂ ಸಮಾನರು, ಇವರಿಬ್ಬರಲ್ಲಿ ಯಾವುದೇ ಭೇದ ಇಲ್ಲ. 

ಹೀಗಾಗಿ ಒಂದಾಗಿ ಕೆಲಸ ಮಾಡುವಂತೆ ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ಅವರು ಶುಕ್ರವಾರ ಪೊಲೀಸ್‌ ಕವಾಯತಿನಲ್ಲಿ ಕರೆ ನೀಡಿದ ಬೆನ್ನಿಗೆ ಮರುದಿನವೇ ಇದನ್ನು ಸಾಕಾರಗೊಳಿಸುವಲ್ಲಿ ಪೊಲೀಸ್‌ ಅಧಿಕಾರಿಗಳು ಮುಂದಡಿ ಇರಿಸಿದ್ದಾರೆ.

ನಗರ ಕಾನೂನು ಹಾಗೂ ಅಪರಾಧ ವಿಭಾಗದ ಡಿಸಿಪಿ ಅರುಣಾಂಗ್ಶು ಗಿರಿ ಅವರು ಶನಿವಾರ ಪೊಲೀಸ್‌ ಕಮಿಷನರೇಟ್‌ ಕಚೇರಿಯ ಹಿಂಭಾಗದಲ್ಲಿರುವ ನಗರದ ಸಿಎಆರ್‌ ಕ್ಯಾಂಟಿನ್‌ಗೆ ತೆರಳಿ ಕಾನ್‌ಸ್ಟೇಬಲ್‌ ಜೊತೆಗೆ ಭೋಜನ ಮಾಡಿ, ಸರಳತೆ ಮೆರೆದರು. ಇದು ಕೇವಲ ಪೊಲೀಸ್‌ ಕಾನ್‌ಸ್ಟೇಬಲ್‌ಗಳಿಗೆ ಸೀಮಿತವಾದ ಕ್ಯಾಂಟಿನ್‌. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ಕ್ಯಾಂಟಿನ್‌ಗೆ ತೆರಳು ಸಹಭೋಜನ ಮಾಡುವ ಮೂಲಕ ಪೊಲೀಸ್‌ ಅಧಿಕಾರಿಯೊಬ್ಬರು ಅಧಿಕಾರಿಗಳೂ ಪೊಲೀಸರೂ ಒಂದೇ ಎಂಬ ಸಂದೇಶ ಸಾರಿದ್ದಾರೆ. ಇದು ಪೊಲೀಸ್‌ ಇಲಾಖೆಯಲ್ಲಿ ಮಹತ್ವದ ಸಂಗತಿಯಾಗಿದೆ ಎಂದು ಟ್ವೀಟ್‌ ಮಾಡಿರುವ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ಡಿಸಿಪಿ ನಡವಳಿಕೆಗೆ ಶಹಭಾಸ್‌ ಎಂದಿದ್ದಾರೆ.