Asianet Suvarna News Asianet Suvarna News

'ಸರ್ಕಾರದ ವಿರುದ್ಧ HDK ಕೊಳಕು ಹೇಳಿಕೆ ನಿಲ್ಲಿಸದಿದ್ದರೆ ಭ್ರಷ್ಟಾಚಾರ ಬಯಲು ಮಾಡ್ತೇನೆ'

ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರದ ವಿರುದ್ಧ ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ|ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಪರಮಾಧಿಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದೆ| ಸಂಕ್ರಾಂತಿ ಬಳಿಕ ನೂತನ ಸಚಿವರ ನೇಮಕವಾಗಲಿದೆ|

DCM Laxman Savadi Talks Over Former CM H D Kumarswamy
Author
Bengaluru, First Published Jan 13, 2020, 9:51 AM IST
  • Facebook
  • Twitter
  • Whatsapp

ಕೊಪ್ಪಳ(ಜ.13): ಮಾಜಿ ಮುಖ್ಯಮಂತ್ರಿಗಳಾದ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು. ಎಚ್‌ಡಿಕೆ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಕೊಳಕು ಹೇಳಿಕೆಯನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಅವರ ಭ್ರಷ್ಟಾಚಾರ ಬಯಲಿಗೆ ಎಳೆಯಲಾಗುವುದು ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸರ್ಕಾರದ ವಿರುದ್ಧ ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮೂರು ವರ್ಷದ ಅವಧಿ ಮುಗಿದ ಬಳಿಕ ದಲಿತರಿಗೆ ಮುಖ್ಯಮಂತ್ರಿ ಪಟ್ಟ ದೊರೆಯಲಿದೆ ಎಂಬ ಶಾಸಕ ರಾಜೂಗೌಡ ಹೇಳಿಕೆಗೆ, ಅದು ಅವರ ವೈಯಕ್ತಿಕ ಅಭಿಪ್ರಾಯ. ನಮ್ಮದು ರಾಷ್ಟ್ರೀಯ ಪಕ್ಷವಾಗಿದೆ. ಅವರ ಅಭಿಪ್ರಾಯ ಪಕ್ಷದ ತೀರ್ಮಾನವಲ್ಲ ಎಂದು ಸವದಿ ಹೇಳಿದ್ದಾರೆ.

ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ 12 ಶಾಸಕರಿಗೂ ಸಚಿವ ಸ್ಥಾನ ದೊರೆಯಲಿದೆಯೇ ಎಂಬ ಪ್ರಶ್ನೆಗೆ, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಪರಮಾಧಿಕಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇದೆ. ಸಂಕ್ರಾಂತಿ ಬಳಿಕ ನೂತನ ಸಚಿವರ ನೇಮಕವಾಗಲಿದೆ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಭವಿಷ್ಯ: 'ಯಡಿಯೂರಪ್ಪ ನಂತರ ರಾಜ್ಯದಲ್ಲಿ ದಲಿತರಿಗೆ ಸಿಎಂ ಪಟ್ಟ'

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ. ಪೌರತ್ವ ಕಾಯ್ದೆಯಿಂದ ದೇಶದ ಅಖಂಡತೆಗೆ ಮತ್ತಷ್ಟುಬಲ ಬಂದಿದೆ. ಈ ವರೆಗೂ ಪೌರತ್ವ ಕಾಯ್ದೆ 8 ಬಾರಿ ತಿದ್ದುಪಡಿಯಾಗಿದೆ. ಆದರೆ, ಈ ಬಾರಿ ಮುಸ್ಲಿಂ ಬಾಂಧವರಿಗೆ ಕಾಂಗ್ರೆಸ್‌ ಎನ್‌ಆರ್‌ಸಿ ಬಗ್ಗೆ ಗೊಂದಲ ಸೃಷ್ಟಿಸುವ ಮೂಲಕ ಬೀದಿಗಿಳಿದು ಹೋರಾಟ ನಡೆಸುವಂತೆ ಪ್ರೇರೇಪಿಸುತ್ತಿದೆ. ಪೌರತ್ವ ಕಾಯ್ದೆಯಿಂದ ದೇಶದ ಯಾವುದೇ ಸಮುದಾಯಕ್ಕೆ ತೊಂದರೆಯಾಗುವುದಿಲ್ಲ. ಸುಳ್ಳು ಮಾಹಿತಿಗಳಿಂದ ಉದ್ವೇಗಕ್ಕೆ ಒಳಗಾಗಿ ಹೋರಾಟ ನಡೆಸದಂತೆ ಸವದಿ ಮನವಿ ಮಾಡಿದರು.
 

Follow Us:
Download App:
  • android
  • ios