Asianet Suvarna News Asianet Suvarna News

ಶಿವಸೇನೆಗೆ ದುರಾಸೆ ಹೆಚ್ಚಾಗಿದ್ದರಿಂದಲೇ ಇಂತಹ ಪರಿಸ್ಥಿತಿ ಎದುರಾಗಿದೆ: ಡಿಸಿಎಂ ಸವದಿ

ಮಹಾರಾಷ್ಟ್ರದಲ್ಲಿ ಫಲಿತಾಂಶ ಬಂದ ಬಳಿಕ ಶಿವಸೇನೆಗೆ ದುರಾಸೆ ಬಂದಿತ್ತು ಎಂದ ಸವದಿ| ಬಿಜೆಪಿ-ಎನ್.ಸಿ.ಪಿ ಸೇರಿ‌ ಸರ್ಕಾರ ಮಾಡಿದ್ದೇವೆ| ಮುಂದಿನ ಐದು ವರ್ಷದವರೆಗೂ ಈಗಿರುವಂತೆಯೇ ಸಿಎಂ-ಡಿಸಿಎಂ ಇರ್ತಾರೆ|

DCM Laxman Savadi Talked About Maharashtra Political Development
Author
Bengaluru, First Published Nov 23, 2019, 10:26 AM IST

ಅಥಣಿ(ನ.23): ಮಹಾರಾಷ್ಟ್ರದಲ್ಲಿ ಚುನಾವಣೆ ಪೂರ್ವದಲ್ಲಿಯೇ ಮೈತ್ರಿ ಮಾಡಿಕೊಳ್ಳಲಾಗಿತ್ತು. ಮೊದಲಿನಿಂದಲೂ ಶಿವಸೇನೆ ನಮ್ಮೊಂದಿಗೆಯೇ ಇತ್ತು. ಆದರೆ, ಫಲಿತಾಂಶ ಬಂದ ಬಳಿಕ ಶಿವಸೇನೆಗೆ ದುರಾಸೆ ಬಂದಿತ್ತು. ಬಂದಿತ್ತು  ಹೀಗಾಗಿ ಬಿಜೆಪಿ-ಎನ್.ಸಿ.ಪಿ ಸೇರಿ‌ ಸರ್ಕಾರ ಮಾಡಿದ್ದೇವೆ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ. 

ಮಹಾರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿ ಬೆಳವಣಿಗೆ ವಿಚಾರದ ಬಗ್ಗೆ ಶನಿವಾರ ನಗರದಲ್ಲಿ ಪ್ರತಿಕ್ರಿಯೆ ನೀಡಿದ ಸವದಿ ಅವರು, ಮಹಾರಾಷ್ಟ್ರದ ಫಲಿತಾಂಶ ಬಂದ ಬಳಿಕ ಶಿವಸೇನೆಗೆ ದುರಾಸೆ ಬಹಳ ಹೆಚ್ಚಾಗಿತ್ತು, ಆ ದುರಾಸೆಗೆ ಈಗ ಶಿವಸೇನೆ ಜೀವನದಲ್ಲಿಯೇ ಯಾವತ್ತು ಮರೆಯಲಾರದಂತಹ ಸನ್ನಿವೇಶ ಬಂದಿದೆ ಎಂದು ಹೇಳಿದ್ದಾರೆ. 

'ಮಹಾ' ರಾಜಕೀಯದಲ್ಲಿ ರೋಚಕ ತಿರುವು: 'ಸೇನೆ'ಗೆ ಶಾಕ್, ಫಡ್ನವೀಸ್ ಮತ್ತೆ ಸಿಎಂ!

ಇದೀಗ ಬಿಜೆಪಿ-ಎನ್.ಸಿ.ಪಿ ಸೇರಿ‌ ಸರ್ಕಾರ ರಚನೆ ಮಾಡಿದ್ದೇವೆ, ಮುಂದಿನ ಐದು ವರ್ಷದವರೆಗೂ ಈಗಿರುವಂತೆಯೇ ಸಿಎಂ-ಡಿಸಿಎಂ ಇರ್ತಾರೆ. ಅದೇ ರೀತಿಯಲ್ಲಿ ಅಧಿಕಾರ ಹಂಚಿಕೆಯಾಗಲಿದೆ ಎಂದು ಹೇಳಿದ್ದಾರೆ. 

ಮಹಾರಾಷ್ಟ್ರ ರಾಜಕೀಯ ರೋಚಕ ತಿರುವು ಪಡೆದಿದೆ. ರಾತ್ರೋ ರಾತ್ರಿ ಶಿವಸೇನೆಗೆ ಬಿಜೆಪಿ ಶಾಕ್ ನೀಡಿದ್ದು, ದೇವೇಂದ್ರ ಫಡ್ನವಿಸ್ ಸಿಎಂ ಹಾಗೂ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

Follow Us:
Download App:
  • android
  • ios