ದೇವದುರ್ಗ(ಜ.29): ಮಹಾರಾಷ್ಟ್ರ ಸರ್ಕಾರ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ಆದ್ದರಿಂದಲೆಯೇ ಜನರನ್ನು ದಿಕ್ಕಿ ತಪ್ಪಿಸುವ ಕೆಲಸವನ್ನು ಅಲ್ಲಿನ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. 

ತಾಲೂಕಿನ ಗೂಗಲ್‌ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಸರ್ಕಾರವು ಗೊಂದಲದಲ್ಲಿದೆ. ಅದರಿಂದ ಹೊರಬರಲು, ಜನರ ದಿಕ್ಕನ್ನು ತಪ್ಪಿಸುವುದಕ್ಕಾಗಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಿದೆ. ಮಹಾರಾಷ್ಟ್ರದ ನಡೆಯನ್ನು ಈಗಾಗಲೇ ಬಹಳಷ್ಟು ಸಲ ಖಂಡಿಸಿದ್ದೇವೆ. ಆದರೆ, ಅಲ್ಲಿನ ಸಿಎಂ ಠಾಕ್ರೆ ಅವರು ಪದೇಪದೆ ಅದನ್ನೇ ಪುನರಾವರ್ತಿಸುತ್ತಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಪ್ರಬುದ್ಧ ರಾಜಕಾರಣಿಯಾಗಿ ಮಾತನಾಡುವುದನ್ನು ಕಲಿಯಬೇಕು ಎಂದರು. 

ರಾಯಚೂರು; ಆತ್ಮಹತ್ಯೆಗೆ ಪ್ರೇಮಿಗಳು ಶರಣು, ಇಬ್ಬರಿಗೂ ಮದುವೆಯಾಗಿತ್ತು!

ಮಹಾರಾಷ್ಟ್ರ-ಕರ್ನಾಟಕ ಗಡಿ ವಿಚಾರ ಮುಗಿದು ಹೋಗಿದೆ. ಮಹಾಜನ್‌ ಆಯೋಗದ ವರದಿಯನ್ನು ಎಲ್ಲರೂ ಒಪ್ಪಿಕೊಂಡಿದ್ದೆವೆ. ಆದರೂ ಸುಪ್ರೀಂ ಕೋರ್ಟಿನಲ್ಲಿ ಖಾಸಗಿ ಅರ್ಜಿ ಸಲ್ಲಿಸಿದ್ದು ಅದರಲ್ಲಿಯೂ ರಾಜ್ಯದ ಪರ ತೀರ್ಪು ಬರುವ ವಿಶ್ವಾಸವಿದೆ ಎಂದರು.