‘ಬಿಜೆಪಿ ಸರ್ಕಾರ ಬಂದಾಗ ಒಳ್ಳೆಯದ್ದೇ ಇರುತ್ತೆ, ಆದರೆ ಈ ಬಾರಿ ವೈರಸ್‌ ಬಂದಿದೆ’

ಕೊರೋನಾ ವೈರಸ್ ಬಗ್ಗೆ ಯಾವುದೇ ಮಾಹಿತಿ ಮುಚ್ಚಿಡಬೇಡಿ| ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ  ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ| ಜನತಾ ಕರ್ಫ್ಯೂ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲೂ ಬೆಂಬಲ| ಸಾರಿಗೆ ಸಂಚಾರ ಸ್ತಬ್ಧ| ಜನರು  ಹೊರಬರದಂತೆ ಕರೆ ನೀಡಲಾಗಿದೆ| 

DCM Govind Karjol Talks Over Janata Curfew

ಬಾಗಲಕೋಟೆ(ಮಾ.21]:  ಕೊರೋನಾ ವೈರಸ್ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್ ಹಣ ಬಳಸಿಕೊಳ್ಳಲು ಸೂಚನೆ ನೀಡಿದೆ. ಈಗಾಗಲೇ ಕಲಬುರಗಿಯಲ್ಲಿ ಕೊರೋನಾ ಪರೀಕ್ಷಾ ಲ್ಯಾಬ್ ತೆರೆಯಲಾಗಿದೆ. ಹುಬ್ಬಳ್ಳಿಯಲ್ಲೊಂದು ಲ್ಯಾಬ್ ತೆರೆಯಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. 

ಇಂದು[ಶನಿವಾರ] ನಗರದ ಜಿಲ್ಲಾಡಳಿತ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದಾಗ ಎಲ್ಲವೂ ಒಳ್ಳೆದು ಇರುತ್ತೆ. ಆದರೆ ಈ ಬಾರಿ ವೈರಸ್ ವೊಂದು ಬಂದಿದೆ ಎಂದು ತಿಳಿಸಿದ್ದಾರೆ. 

ಪೊಲೀಸ್ ಆಯುಕ್ತರ ಕಚೇರಿಯಲ್ಲೂ ಕರ್ಫ್ಯೂ!

ಮಧ್ಯಪ್ರದೇಶ ರಾಜ್ಯವೂ ಬಿಜೆಪಿ ತೆಕ್ಕೆಗೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇನ್ಮುಂದೆ ಎಲ್ಲ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಯಲ್ಲಿದ್ದ 4 ಲಕ್ಷ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರ ತೀವ್ರವಾಗಿ ತಪಾಸಣೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 5ಚೆಕ್ ಪೊಸ್ಟ್ ಮೂಲಕ ತಪಾಸಣಾ ಕಾರ್ಯ ನಡೆಯುತ್ತಿದೆ. ತಪಾಸಣೆಗೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಕೊರೋನಾ ವೈರಸ್ ಬಗ್ಗೆ ಯಾವುದೇ ಮಾಹಿತಿ ಮುಚ್ಚಿಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ  ಕೊರೋನಾ  ವೈರಸ್ ಬಗ್ಗೆ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಾಳೆ ಜನತಾ ಕರ್ಫ್ಯೂ ಹಿನ್ನೆಲೆ ಬಾಗಲಕೋಟೆ ಜಿಲ್ಲೆಯಲ್ಲೂ ಬೆಂಬಲ ವ್ಯಕ್ತವಾಗಿದೆ. ಸಾರಿಗೆ ಸಂಚಾರ ಸ್ತಬ್ಧವಾಗಿರಲಿದೆ, ಜನರು  ಹೊರಬರದಂತೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. 

ಜನತಾ ಕರ್ಫ್ಯೂಗೆ ಜೈ ಎಂದ ಬೆಂಗಳೂರು ಜನತೆ..!

ಜನರ ಅಗತ್ಯ ಸೇವೆಗಲಿಗೆ  ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಧರ್ಮದ ಸಾಮೂಹಿಕ ಪ್ರಾರ್ಥನೆಗಳಿಗೆ ಕಡಿವಾಣ ಹಾಕಾಲಗಿದೆ. ಈ ಸಂಬಂಧ ನೊಟೀಸ್ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ.  ಮದುವೆಗೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ. 

ಬಾದಾಮಿಯಲ್ಲಿ ಕೊರೋನಾ ಎಫೆಕ್ಟ್ ನಿಂದ ಕೋತಿಗಳು ಆಹಾರವಿಲ್ಲದೆ ಪರದಾಟ ವಿಚಾರದ ಬಗ್ಗೆ ಮಾತನಾಡಿದ ಅವರು, ಕೋತಿಗಳಿಗೆ ಆಹಾರ ಒದಗಿಸಲು ಬಾದಾಮಿ ತಹಶೀಲ್ದಾರ್ ಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ಧಾರೆ. 

Latest Videos
Follow Us:
Download App:
  • android
  • ios