ವಿಜಯಪುರ(ಜ.27): ಸಚಿವ ಸಂಪುಟ ವಿಸ್ತರಣೆ ವಿಚಾರದ ಕುರಿತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮಾತಾನಾಡುತ್ತಾರೆ. ನಾನು ಪ್ರವಾಸದಲ್ಲಿ ಇರುವ ಕಾರಣ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಬಿಜೆಪಿ ಪಕ್ಷದ ನಿಷ್ಟಾವಂತ ಕಾರ್ಯಕರ್ತನಾಗಿದ್ದೇನೆ. ನಾವು ಬೆಳೆದಿರುವದೇ ಪಾರ್ಟಿಯಿಂದ. ಪಕ್ಷ ಯಾವುದೇ ನಿರ್ಣಯ ಕೈಗೊಂಡರು ಅದಕ್ಕೆ ನಾನು ಬದ್ಧನಾಗಿದ್ದೇನೆ. ಪಕ್ಷ ನಿರ್ಣಯ ಕೈಗೊಂಡರೆ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ವಿಜಯಪುರ ಜಿಲ್ಲಾ ಪ್ರವಾಸದ ಸಂಬಂಧ ಸೋಮವಾರ ನಗರದಲ್ಲಿ ಮಧ್ಯಮದವರ ಜೊತೆ ಮಾತನಾಡಿದ ಅವರು, ರಾಷ್ಟ್ರೀಯ ಅದ್ಯಕ್ಷರು, ಪ್ರಧಾನ ಮಂತ್ರಿ, ಯಡಿಯೂರಪ್ಪ ನವರು ಏನು ನಿರ್ಣಯ ಕೈಗೊಳ್ಳುತ್ತಾರೋ ಅದಕ್ಕೆ ನಾನು ಬದ್ದನಾಗಿದ್ದೇನೆ. ನಾನು ಸಚಿವ ಸ್ಥಾನ ಬಿಡು ಎಂದರೆ ಅತ್ಯಂತ ಖುಷಿ ಇಂದ ಬಿಡುವೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿಸಿಎಂ ಸ್ಥಾನ ಹೆಚ್ಚಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಡಿಸಿಎಂ ಸ್ಥಾನ ಹೆಚ್ಚಾಗಿರುವ ಪರಿಣಾಮ ಜನರಿಗೆ ಯಾವುದೇ ತೊಂದರೆ ಆಗಿಲ್ಲ. ಸಾರ್ವಜನಿಕರ ಜೊತೆ ನಾವು ಸಾರ್ವಜನಿಕರು‌ ಸಾಮಾನ್ಯ ಜನರಿಗೆ ಕೊಡುವ ವ್ಯವಸ್ಥೆ ನಮಗೆ ಕೊಡಿ ಎಂದು ನಾನು ಮೊದಲೇ ಹೇಳಿದ್ದೇನೆ. ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಜಯಪುರ ಜಿಲ್ಲೆಗೂ ಸ್ಥಾನ ಮಾನ ಸಿಗಬೇಕು ಎಂದು ಹೇಳಿದ್ದಾರೆ.