Asianet Suvarna News Asianet Suvarna News

ಕಾರವಾರ: ಕೊನೆಗೂ ಸಂಚಾರಕ್ಕೆ ತೆರೆದುಕೊಂಡ ಸುರಂಗ..!

ಜಿಲ್ಲಾಧಿಕಾರಿ ಷರತ್ತು ವಿಧಿಸಿ ಸಂಚಾರಕ್ಕೆ ಸುರಂಗವನ್ನು ಮುಕ್ತಗೊಳಿಸಿದ್ದಾರೆ. ಅ. 8ರಂದು ಜಂಟಿ ತಪಾಸಣೆ ನಡೆಯಲಿದ್ದು, ಆ ತಪಾಸಣೆಯ ಮೇಲೆ ಸುರಂಗದಲ್ಲಿ ಸಂಚಾರದ ಭವಿಷ್ಯ ಅವಲಂಬಿತವಾಗಿದೆ ಎನ್ನುವುದು ಜಿಲ್ಲಾಧಿಕಾರಿ ಆದೇಶದ ಸಾರಾಂಶ. ತಪಾಸಣೆಯ ಕಾಲಕ್ಕೆ ಲೋಪದೋಷಗಳು ಕಂಡುಬಂದಲ್ಲಿ ಮತ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

DC Permit for Traffic in Tunnel at Karwar grg
Author
First Published Oct 3, 2023, 10:58 PM IST

ಕಾರವಾರ(ಅ.03):  ರಾಜಕೀಯ, ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿವರ್ತಿತವಾಗಿದ್ದ ಚತುಷ್ಪಥ ಹೆದ್ದಾರಿಯ ಸುರಂಗ ಗಣಪತಿ ಉಳ್ವೇಕರ ನೇತೃತ್ವದಲ್ಲಿ ನಡೆದ ಜನಾಗ್ರಹದ ಹೋರಾಟದ ಫಲವಾಗಿ ಸೋಮವಾರ ವಾಹನ ಸಂಚಾರಕ್ಕೆ ತೆರೆದುಕೊಂಡಿತು. ಜಿಲ್ಲಾಧಿಕಾರಿ ಷರತ್ತು ವಿಧಿಸಿ ಸಂಚಾರಕ್ಕೆ ಸುರಂಗವನ್ನು ಮುಕ್ತಗೊಳಿಸಿದ್ದಾರೆ. ಅ. 8ರಂದು ಜಂಟಿ ತಪಾಸಣೆ ನಡೆಯಲಿದ್ದು, ಆ ತಪಾಸಣೆಯ ಮೇಲೆ ಸುರಂಗದಲ್ಲಿ ಸಂಚಾರದ ಭವಿಷ್ಯ ಅವಲಂಬಿತವಾಗಿದೆ ಎನ್ನುವುದು ಜಿಲ್ಲಾಧಿಕಾರಿ ಆದೇಶದ ಸಾರಾಂಶ. ತಪಾಸಣೆಯ ಕಾಲಕ್ಕೆ ಲೋಪದೋಷಗಳು ಕಂಡುಬಂದಲ್ಲಿ ಮತ್ತೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದರೆ ಸುರಂಗದಲ್ಲಿ ಸಂಚಾರಕ್ಕೆ ಸಂಸದ ಅನಂತಕುಮಾರ್ ಹೆಗಡೆ ಹಾಗೂ ನಂತರ ಶಾಸಕ ಸತೀಶ ಸೈಲ್ ಚಾಲನೆ ನೀಡುವ ಮುನ್ನವೇ ಇದೆಲ್ಲವನ್ನೂ ನೋಡಿಕೊಳ್ಳದೆ ಏಕಾಏಕಿ ಆರಂಭಕ್ಕೆ ಅವಕಾಶ ನೀಡಿದ್ದು ತಪ್ಪು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿ ಕೇಳಿಬರುತ್ತಿದೆ. ಸದ್ಯಕ್ಕಂತೂ ಸುರಂಗದಲ್ಲಿ ಸಂಚಾರಕ್ಕೆ ಅವಕಾಶ ದೊರೆತಿದೆ. ಮುಂದೇನಾಗಲಿದೆ ಎನ್ನುವ ಕುತೂಹಲವೂ ಕಾಡುತ್ತಿದೆ. ಸುರಂಗ ಸಮರದಲ್ಲಿ ಪ್ರತಿಷ್ಠೆಯನ್ನು ಮೆರೆಯುತ್ತಿದ್ದವರು ಈಗ ಜಿಲ್ಲಾಧಿಕಾರಿಯತ್ತ ಬೊಟ್ಟು ತೋರಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್‌ ಭಯಕ್ಕೆ ಬಿಜೆಪಿ-ಜೆಡಿಎಸ್‌ ಮೈತ್ರಿ: ಸಚಿವ ಮಂಕಾಳ ವೈದ್ಯ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಕಾರ ಸುರಂಗಕ್ಕೆ ಫಿಟ್ನೆಸ್ ಸರ್ಟಿಫಿಕೆಟ್ ನೀಡಲಾಗಿದೆ. ಜಿಲ್ಲಾ ಆಡಳಿತದ ಪ್ರಕಾರ ಆ ಸರ್ಟಿಫಿಕೆಟ್ ಗೆ ಮಾನ್ಯತೆ ಇದೆಯೇ ಇಲ್ಲವೇ ಎಂಬ ಗೊಂದಲ ಇದೆ. ಸುರಂಗ ಸುರಕ್ಷಿತವಾಗಿರಬೇಕು ಎನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಸುರಕ್ಷತಾ ಕ್ರಮದ ಬಗ್ಗೆ ಇರುವ ಗೊಂದಲವನ್ನು ಅತಿ ಶೀಘ್ರವಾಗಿ ಬಗೆಹರಿಸಿಕೊಳ್ಳದೆ ಸುರಂಗದಲ್ಲಿ ಆರಂಭವಾದ ಸಂಚಾರವನ್ನು ಮೂರು ತಿಂಗಳ ಕಾಲ ತಡೆಹಿಡಿದಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಜನತೆಯ ಪ್ರಶ್ನೆಯಾಗಿದೆ.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಈಗ ಸಾರ್ವಜನಿಕರ ಸಹಾಯದಿಂದ ಸುರಂಗದಲ್ಲಿ ಸಂಚಾರ ಆರಂಭಕ್ಕೆ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ಇಡಿ ದಿನ ಹೋರಾಟ ನಡೆಸಿದ್ದು ಫಲ ನೀಡಿದೆ. ಸಾರ್ವಜನಿಕರ ಆಗ್ರಹಕ್ಕೆ ವಿಳಂಬವಾಗಿಯಾದರೂ ಜಯ ದೊರಕಿದಂತಾಗಿದೆ.

Follow Us:
Download App:
  • android
  • ios