Asianet Suvarna News

'ವಿದೇಶಗಳಿಗೆ ಹೋಲಿಸಿದ್ರೆ ಭಾರತದಲ್ಲಿ ಕೊರೋನಾ ನಿಯಂತ್ರಣ'

ಹಾವೇರಿ ಜಿಲ್ಲೆಯಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಉತ್ತಮ ರೀತಿಯಿಂದ ಸೇವೆ| ಶ್ರೀಮಠವು ಅವರ ಕಾರ್ಯವನ್ನು ಗುರುತಿಸಿ ನೆರವು ನೀಡುತ್ತಿರುವುದು ಒಳ್ಳೆಯ ನಡೆಯಾಗಿದೆ ಎಂದ ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ|

DC Krishna Bajapeyi Talks Over Coronavirus
Author
Bengaluru, First Published May 17, 2020, 9:05 AM IST
  • Facebook
  • Twitter
  • Whatsapp

ರಾಣಿಬೆನ್ನೂರು(ಮೇ.17): ವಿದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹೇಳಿದ್ದಾರೆ. ತಾಲೂಕಿನ ಅರೇಮಲ್ಲಾಪುರ ಗ್ರಾಮದ ಶರಣ ಬಸವೇಶ್ವರ ಮಠದಲ್ಲಿ ಶನಿವಾರ ಶ್ರೀಮಠದ ವತಿಯಿಂದ ಆಶಾ ಕಾರ್ಯಕರ್ತರಿಗೆ ಹಾಗೂ ಪತ್ರಕರ್ತರಿಗೆ ಕೊಡಮಾಡಿದ ಆಹಾರ ಧಾನ್ಯ ಕಿಟ್‌ ವಿತರಿಸಿ ಸನ್ಮಾನಿ ಮಾತನಾಡಿದರು.

"

ಕೊರೋನಾ ಸಂಕಷ್ಟ: ಕೂಲಿ ಮಾಡಲು ಮುಂದಾದ ಪದವೀಧರೆ..!

ಜಿಲ್ಲೆಯಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ಉತ್ತಮ ರೀತಿಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಮಠವು ಅವರ ಕಾರ್ಯವನ್ನು ಗುರುತಿಸಿ ನೆರವು ನೀಡುತ್ತಿರುವುದು ಒಳ್ಳೆಯ ನಡೆಯಾಗಿದೆ ಎಂದರು.
ಶ್ರೀಮಠದ ಡಾ. ಪ್ರಣವಾನಂದರಾಮ ಸ್ವಾಮೀಜಿ, ಉಪ ವಿಭಾಗಾಧಿಕಾರಿ ದೀಲಿಪ ಶಶಿ, ಡಿವೈಎಸ್‌ಪಿ ಟಿ.ವಿ. ಸುರೇಶ ಹಾಗೂ ಗ್ರಾಪಂ ಪಿಡಿಒ ಡಿ.ಬಿ. ಹರಿಜನ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
 

Follow Us:
Download App:
  • android
  • ios