ತಾಲೂ​ಕಿ​ನ ಸೋಗಾನೆಯ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದ ವರದಿಗಾಗಿ ತೆರಳಿದ್ದ ಪತ್ರಕರ್ತ ಆರ್‌.ಎಸ್‌. ಹಾಲಸ್ವಾಮಿ ಅವರ ಜೊತೆ ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್‌ ಉದ್ದಟತನದಿಂದ ವರ್ತಿಸಿದ್ದಾರೆ.

ಶಿವಮೊಗ್ಗ (ಮಾ.01): ತಾಲೂ​ಕಿ​ನ ಸೋಗಾನೆಯ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದ ವರದಿಗೆ ತೆರಳಿದ್ದ ಹಿರಿಯ ಪತ್ರಕರ್ತ ಆರ್‌.ಎಸ್‌.ಹಾಲಸ್ವಾಮಿ ಅವರನ್ನು ಪೊಲೀಸ್‌ ವ್ಯಾನಿ​ನಲ್ಲಿ ಕೂಡಿ​ಹಾ​ಕುವ ಮೂಲಕ ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್‌ ಉದ್ಧಟತನದಿಂದ ವರ್ತಿಸಿದ್ದಾರೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ ಆರೋ​ಪಿ​ಸಿದೆ. ಜತೆಗೆ, ಈ ಘಟ​ನೆ​ಯನ್ನು ಖಂಡಿಸಿ ಗೃಹ​ಸ​ಚಿವ ಆರಗ ಜ್ಞಾನೇಂದ್ರ ಅವ​ರಿಗೆ ಪತ್ರ ಬರೆದು, ಅಧಿ​ಕಾರಿ ವಿರುದ್ಧ ಕ್ರಮ ಕೈಗೊ​ಳ್ಳು​ವಂತೆ ಆಗ್ರ​ಹಿ​ಸಿ​ದೆ.

ಫೆ.27ರಂದು ಮೋದಿ ಕಾರ್ಯಕ್ರಮದ ಬಳಿಕ ಜನ ವಿಮಾನ ನಿಲ್ದಾ​ಣದ ಕಡೆಗೆ ಹೋಗುವ ಉತ್ಸಾ​ಹ​ದ​ಲ್ಲಿ​ದ್ದಾಗ ಎಸ್ಪಿ ರಿಷ್ಯಂತ್‌ ಅವರು ಪರಿಸ್ಥಿತಿ ಅಂಥ ಗಂಭೀರವಲ್ಲದಿದ್ದರೂ ಲಾಠಿಚಾರ್ಜ್‌ ನಡೆ​ಸಿ​ದ್ದಾ​ರೆ. ಆಗ ಸ್ಥಳದಲ್ಲಿದ್ದ ಹಾಲಸ್ವಾಮಿ ವಿಡಿಯೋ ಚಿತ್ರೀಕರಣದಲ್ಲಿ ತೊಡಗಿದ್ದನ್ನು ಗಮ​ನಿಸಿ ಬಲವಂತವಾಗಿ ಸಿಬ್ಬಂದಿ ಮೂಲ​ಕ ಎಳೆದೊಯ್ದು, ವ್ಯಾನಿನಲ್ಲಿ ಕೂಡಿ ಹಾಕಿದ್ದಾರೆ. ಮೊಬೈಲ್‌ ಕಿತ್ತುಕೊಂಡು ವೀಡಿಯೋ ಡಿಲೀಟ್‌ ಮಾಡಿದ್ದಾರೆ. ಗುರುತಿನ ಚೀಟಿ ತೋರಿಸಿದರೂ ಅಕ್ರಮವಾಗಿ ಬಂಧನದಲ್ಲಿಟ್ಟು, ಬೆದರಿಸಿದ್ದಾರೆ. ಘಟನೆ ಸಂಬಂಧ ರಿಷ್ಯಂತ್‌ ಅವರು ಕ್ಷಮೆ​ಯಾ​ಚಿ​ಸ​ಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆ​ಡ​ಬ್ಲ್ಯು​ಜೆ​ಎ​)ದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್‌, ಪ್ರಧಾನ ಕಾರ್ಯದರ್ಶಿ ಅರುಣ್‌ ವಿ.ಟಿ, ರಾಜ್ಯ ಸಮಿತಿ ನಿರ್ದೇಶಕರಾದ ಎನ್‌.ರವಿಕುಮಾರ್‌ ಆಗ್ರ​ಹಿ​ಸಿ​ದ್ದಾ​ರೆ.

ವಿಧಾನಸೌಧದಲ್ಲೇ ವಿಪರೀತ ಲಂಚ ತಾಂಡವ: ಸಿದ್ದರಾಮಯ್ಯ

ಸರ್ಕಾರಿ ನೌಕರರ ಮುಷ್ಕರ: ಏಳನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ರಾಜ್ಯ ಸಂಘದ ಕರೆ ಮೇರೆಗೆ ಸರ್ಕಾರಿ ನೌಕರರು ಬುಧವಾರ ಮುಷ್ಕರ ನಡೆಸಿದ್ದರ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಸರ್ಕಾರಿ ಕಚೇರಿಗಳು ಸಿಬ್ಬಂದಿಗಳಿಲ್ಲದೇ ಬಿಕೋ ಎನ್ನುತ್ತಿದ್ದವು. ಇದರಿಂದಾಗಿ ಸರ್ಕಾರಿ ಕೆಲಸ ಕಾರ್ಯಗಳಿಗೆಂದು ದೂರದ ಊರುಗಳಿಂದ ಬಂದ ಸಾರ್ವಜನಿಕರು ಪರದಾಡಿದರು. ಮಧ್ಯಾಹ್ನದ ಹೊತ್ತಿಗೆ ರಾಜಿ ಸಂಧಾನ ಯಶಸ್ವಿಯಾದರೂ ನೌಕರರು ಸಾರ್ವಜನಿಕರಿಗೆ ಸರ್ಕಾರಿ ಸೇವೆ ಸಿಗಲಿಲ್ಲ.

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ನೌಕರರು ಮುಷ್ಕರದ ಹಾದಿ ಹಿಡಿದ ಹಿನ್ನೆಲೆಯಲ್ಲಿ ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ ಆವರಣದಲ್ಲಿ ಮೌನ ಆವರಿಸಿತ್ತು. ಮುಷ್ಕರದ ಕುರಿತು ಮಾಹಿತಿ ಇಲ್ಲದೇ ಕೆಲಸ, ಕಾರ್ಯಗಳಿಗೆಂದು ದೂರದೂರಿನಿಂದ ಬಂದ ಸಾರ್ವಜನಿಕರು ಪರದಾಡಿದರು. ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿ ಡಿಸಿ ಕೊಠಡಿ ಹೊರತು ಪಡಿಸಿ ಮಿಕ್ಕೆಲ್ಲಾ ಕೊಠಡಿಗಳಿಗೆ ಬೀಗ ಹಾಕಲಾಗಿತ್ತು. ತಮ್ಮ ಕೆಲಸ, ಕಾರ್ಯಗಳಿಗೆಂದು ಜಿಲ್ಲಾಧಿಕಾರಿ ಕಚೇರಿಗೆ ಬಂದ ಸಾರ್ವಜನಿಕರು ಬೇರೆ ದಾರಿ ಇಲ್ಲದೇ ಹಿಂದಿರುಗಿದರು. ಅಲ್ಲದೇ, ತಾಲೂಕು ಕಚೇರಿ ಕಟ್ಟಡ, ಉಪವಿಭಾಗಾಧಿಕಾರಿ ಕಚೇರಿ, ತಹಸೀಲ್ದಾರ್‌ ಕಚೇರಿ ಸೇರಿದಂತೆ ಹಲವು ಪ್ರಮುಖ ಕಚೇರಿಗಳಲ್ಲೂ ಸಿಬ್ಬಂದಿಯಿಲ್ಲ​ದೇ ಬೀಕೋ ಎನ್ನುತ್ತಿತ್ತು.

ಜಿಲ್ಲಾ ಪಂಚಾಯಿತಿ ಕಚೇರಿ, ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಶಾಲೆಗಳು ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಲಿಲ್ಲ. ಮುಷ್ಕರಕ್ಕೆ ಬಹುತೇಕ ಸರ್ಕಾರಿ ನೌಕರರು ಬೆಂಬಲ ನೀಡಿದ್ದರಿಂದ ಕೆಲವು ಕಚೇರಿಗಳು ಬೆಳಗ್ಗೆ ಬೀಗವನ್ನೇ ತೆರೆದಿರಲಿಲ್ಲ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಆಯುಕ್ತರ ಕಚೇರಿಯೊಂದನ್ನು ಬಿಟ್ಟು ಉಳಿದೆಲ್ಲ ವಿಭಾಗಗಳ ಬಾಗಿಲು ಮುಚ್ಚಿದ್ದವು. ವಿವಿಧ ಕೆಲಸ, ಕಾರ್ಯಗಳಿಗೆಂದು ಬಂದಂತಹ ಸಾರ್ವಜನಿಕರು ಪಾಲಿಕೆ ಕಚೇರಿಗಳು ಬಂದ್‌ ಆಗಿರುವುದನ್ನು ಗಮನಿಸಿ ಹಿಂದಿರುಗಬೇಕಾಯಿತು.

ರಾಜ್ಯ ಸರಕಾರಕ್ಕೆ ಕಿವಿ, ಕಣ್ಣು, ಹೃದಯ ಏನೂ ಇಲ್ಲ: ಡಿ.ಕೆ.ಶಿವಕುಮಾರ್‌

ಜಿಲ್ಲಾ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಒಪಿಡಿ ಬಂದ್‌ ಮಾಡಿರಲಿಲ್ಲ. ಆದರೆ ಒಪಿಡಿಯಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಲಿಲ್ಲ. ಉಳಿದ ವಿಭಾಗಗಳಲ್ಲಿ ವೈದ್ಯರು ಎಂದಿನಂತೆ ಸೇವೆ ನೀಡಿದರು. ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸಿದರು. ಇನ್ನು ಸರ್ಕಾರಿ ಶಾಲೆ, ಕಾಲೇಜುಗಳ ಶಿಕ್ಷಕರು, ಉಪನ್ಯಾಸಕರು ಕೂಡ ಮುಷ್ಕರ ನಡೆಸಿದರು. ಸರ್ಕಾರಿ ಶಾಲೆಗಳಿಗೆ ಶಿಕ್ಷಕರು, ಕಾಲೇಜುಗಳಿಗೆ ಉಪನ್ಯಾಸಕರು ಬಾರದ ಹಿನ್ನೆಲೆ ಶಿಕ್ಷಣ ಸಂಸ್ಥೆಗಳಲ್ಲಿ ರಜೆಯ ವಾತಾವರಣವಿತ್ತು.