Asianet Suvarna News Asianet Suvarna News

Davangere: ಕೊಚ್ಚಿಹೋದ ಕಾಲುವೆಯಿಂದ 15 ಕೋಟಿ ಭತ್ತ ಬೆಳೆ ಒಣಗುವ ಭೀತಿ

ಭದ್ರಾ ಉಪಕಾಲುವೆ ಸೇತುವೆ ಕೊಚ್ಚಿಕೊಂಡು  ಹೋಗಿ ಸುಮಾರು ಐದು ಸಾವಿರ ಎಕರೆ ಪ್ರದೇಶಕ್ಕೆ ನೀರು ಇಲ್ಲದೇ  ಬೆಳೆ ಒಣಗುವ ಹಂತ ತಲುಪಿತ್ತು.  ಈಗ ಹರಿಹರ ತಾಲ್ಲೂಕಿನ  ಬಿಜೆಪಿ ಮುಖಂಡ ರೈತರಿಗೆ ಆಸರೆಯಾಗಿ ನಿಂತಿದ್ದಾರೆ.

Davangere rain effect 15 crores paddy crop drying phobia for farmers gow
Author
Bengaluru, First Published Jun 8, 2022, 1:07 AM IST

ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್

ದಾವಣಗೆರೆ (ಜೂ.8) : ದಾವಣಗೆರೆ (Davanagere) ಜಿಲ್ಲೆಯಲ್ಲಿ  ಕಳೆದ ವಾರ ಸುರಿದ ಭಾರಿ ಮಳೆ ಆ ಗ್ರಾಮದ ರೈತರ  ಬದುಕನ್ನೇ ಬುಡಮೇಲು ಮಾಡಿತ್ತು. ಕೆಲವರು ಮಳೆ ನೀರಿಗೆ ಭಾರಿ ಪ್ರಮಾಣದ ಭತ್ತದ ಬೆಳೆ ಕಳೆದುಕೊಂಡರೆ ಇನ್ನು ಕೆಲವರು ನೀರಿಲ್ಲದೇ ಭತ್ತ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬನ್ನಿಕೋಡು ಗ್ರಾಮದ ಬಳಿ ಭದ್ರಾ ಉಪಕಾಲುವೆ ಸೇತುವೆ ಕೊಚ್ಚಿಕೊಂಡು  ಹೋಗಿ ಸುಮಾರು ಐದು ಸಾವಿರ ಎಕರೆ ಪ್ರದೇಶಕ್ಕೆ ನೀರು ಇಲ್ಲದೇ  ಬೆಳೆ ಒಣಗುವ ಹಂತ ತಲುಪಿತ್ತು. ಈ ಬಗ್ಗೆ ರೈತರು ಜಿಲ್ಲಾಡಳಿತ ನೀರಾವರಿ ಇಲಾಖೆಗು  ಮನವಿ ಮಾಡಿದ್ರು ಏನು ಉಪಯೋಗ ಆಗದೇ ಇದ್ದಾಗ ಹರಿಹರ ತಾಲ್ಲೂಕಿನ  ಬಿಜೆಪಿ ಮುಖಂಡ ರೈತರಿಗೆ ಆಸರೆಯಾಗಿ ನಿಂತಿದ್ದಾರೆ. ಅವರ ಸಮಯ ಪ್ರಜ್ನೆಯಿಂದ ರೈತರಿಗೆ ಮಾಡಿದ ಸಹಾಯ ನೂರಾರು ರೈತ ಕುಟುಂಬಗಳಿಗೆ ಅನ್ನ ನೀಡಿದೆ.   

ಇದು ಹೇಳಿ-ಕೇಳಿ ಚುನಾವಣೆ ಸಮಯವಾಗಿರುವುದರಿಂದ ಸಹಜವಾಗಿ ಆಯಾ ಕ್ಷೇತ್ರಗಳಲ್ಲಿ ಈಗಿನಿಂದಲೇ ಚುನಾವಣೆಗೆ ಅಭ್ಯರ್ಥಿಗಳು ರೆಡಿಯಾಗುತ್ತಿದ್ದಾರೆ. ಅದರಂತೆ ಹರಿಹರ ಕ್ಷೇತ್ರದಲ್ಲಿ ನಾನು ಒಬ್ಬ ಆಕಾಂಕ್ಷಿ ಎಂದು ಚಂದ್ರಶೇಖರ್ ಪೂಜಾರಿ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ.

HAVERI; ಮದುವೆ ಸಿದ್ಧತೆಯಲ್ಲಿದ್ದ ಮನೆಯಲ್ಲಿ ಬೆಂಕಿ ಅವಘಡ, 4 ಕುರಿಗಳ ಸಾವು

ಈ ಸಂದರ್ಭದಲ್ಲಿ ರೈತರ ಸಂಕಷ್ಟ ನೋಡಿ  ಸ್ವತಃ ಕೈಯಿಂದ 7 ಲಕ್ಷ ಖರ್ಚು ಮಾಡಿ ಕೊಚ್ಚಿಹೋದ ಸೇತುವೆಗೆ ಕಾಯಕಲ್ಪ ನೀಡಿದ್ದಾರೆ. ಇದರಿಂದ ಸುಮಾರು 15 ಕೋಟಿ ಅಂದಾಜು ಮೊತ್ತ ಬೆಳೆನಷ್ಟವಾಗುವುದು ತಪ್ಪಿದೆ. ಇನ್ನೇನು ಭತ್ತ ಬೆಳೆ ನೀರಿಲ್ಲದೇ ಹೋಯಿತು ಎಂದು ತಲೆಮೇಲೆ ಕೈಹೊತ್ತ ರೈತರಿಗೆ ತುಸು ನೆಮ್ಮದಿ ಸಿಕ್ಕಿದೆ.
  
ಬನ್ನಿಕೋಡು ಬೇವಿನಹಳ್ಳಿ  ಸೇರಿದಂತೆ ಐದಾರು ಗ್ರಾಮಗಳಲ್ಲಿ ಕೆಲ  ಭತ್ತ ಕಟಾವು ಆಗಿದ್ದರೇ  ಇನ್ನು ಕೆಲ ಭತ್ತ ಈಗ ಕಾಳುಗಟ್ಟುತ್ತಿದೆ. ಭದ್ರಾ ಕಾಲುವೆ ಕೊನೆ ಭಾಗದ ರೈತರಿಗೆ ಯಾವಾಗಲು ನೀರು ತಲುಪುವುದು ಒಂದು ತಿಂಗಳು ತಡವಾಗಿ. ತಡವಾಗಿ ನಾಟಿ ಆದ  ಕಾರಣ  ಕಟಾವಿಗೆ  ಇನ್ನೊಂದು ತಿಂಗಳು ಬೇಕೇ ಬೇಕು.   ಮೇಲ್ಭಾಗದ ರೈತರಿಗೆ ನೀರು  ತಲುಪಿದ ಒಂದು ತಿಂಗಳ ಬಳಿಕ ಇವರಿಗೆ ನೀರು ಬರುವುದರಿಂದ ಇವರು ಸ್ವಲ್ಪ ತಡೆದೇ ಕೃಷಿ ಮಾಡುತ್ತಾರೆ.  ಇದೇ ಕಾರಣಕ್ಕೆ ಹತ್ತಾರು ಸಂಕಟಗಳು  ಕೂಡಾ ಇವರಿಗೆ ತಪ್ಪಿದ್ದಲ್ಲ.

ಚಿಕ್ಕಮಗಳೂರು ಬಿಜೆಪಿಯಿಂದ ಕೆಪಿಸಿಸಿ ಕಚೇರಿಗೆ ಚಡ್ಡಿ ರವಾನೆ

 ಕೊಚ್ಚಿಹೋದ ಉಪಕಾಲುವೆಗೆ ಸಿಕ್ತು ಕಾಯಕಲ್ಪ: ಇತ್ತೀಚಿಗೆ  ಸುರಿದ ಭಾರಿ ಮಳೆಗೆ ಬನ್ನಿಕೋಡು ಬಳಿ ಭತ್ತದ ಗದ್ದೆಗೆ ನೀರು ಪೂರೈಕೆ  ಮಾಡುವ ಭದ್ರಾ  ಕಾಲುವೆ ಕೊಚ್ಚಿಕೊಂಡು  ಹೊಯಿತು. ಕೊನೆಯ ಭಾಗಕ್ಕೆ ನೀರು ಬರುವುದೇ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ಕಾಲುವೆ  ಕೊಚ್ಚಿಕೊಂಡು  ಹೋಗಿ ಕಾಲುವೆಯಲ್ಲಿ ನೀರು ಬರದೇ ಇದ್ದದ್ದು ರೈತರ ದುಗುಡ ಹೆಚ್ಚಿಸಿತ್ತು. 

ಈ ಬಗ್ಗೆ ರೈತರು ಜಿಲ್ಲಾಧಿಕಾರಿಗಳ ಬಳಿ ಹೋದ್ರು. ನೀರಾವರಿ ಇಲಾಖೆಯ ಅಧಿಕಾರಿಗಳ ಬಳಿ ಹೋದ್ರು. ಹೀಗೆ ಹತ್ತಾರು ಕಡೆ ಹೋದ್ರು ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಅನಿರೀಕ್ಷಿತವಾಗಿ ಗ್ರಾಮಕ್ಕೆ  ಬಂದ ಬಿಜೆಪಿ ಮುಖಂಡ ಚಂದ್ರಶೇಖರ ಪೂಜಾರ ಗಮನಕ್ಕೆ ರೈತರು ತಂದಾಗ  ನೇರವಾಗಿ ಅವರೇ ಭಾರಿ ಗಾತ್ರ ಪೈಪಗಳನ್ನ ಖರೀದಿ ಮಾಡಿ ಮೂರು ದಿನಗಳಲ್ಲಿ ಕಾಮಗಾರಿ ಮುಗಿಸಿ ಹಾಕಿದ್ದಾರೆ.

ಇದಕ್ಕೆ  ಕನಿಷ್ಟ ಎಳು ಲಕ್ಷ ರೂಪಾಯಿ  ವೆಚ್ಚ ವಾಗಿದ್ದು ಎಲ್ಲಾ ವೆಚ್ಚವನ್ನ ಚಂದ್ರಶೇಖರ ಪೂಜಾರ ಅವರೇ ಕೊಟ್ಟಿದ್ದಾರೆ. ಸ್ಥಳೀಯ ಸಹಕಾರದಿಂದ ಕಾಮಗಾರಿ ಮುಗಿಸಿ ರೈತರ ಗದ್ದೆಗೆ ನೀರು ಹರಿಸಿದ್ದಾರೆ.

ಕಾಲುವೆಗೆ  ತಾತ್ಕಾಲಿಕ ಕಾಯಕಲ್ಪ, ಉಳಿಯಿತು 15 ಕೋಟಿ ರೂ ಬೆಳೆ: ಕಳೆದ ವಾರ ಮಳೆ ಸುರಿದಾಗ  ಕಾಲುವೆ  ಕೊಚ್ಚಿಕೊಂಡ  ಹೋದ ಹಿನ್ನೆಲೆಯಲ್ಲಿ ಸುಮಾರು ಹತ್ತು  ಗ್ರಾಮಗಳ ವ್ಯಾಪ್ತಿಯ  ಐದು   ಸಾವಿರ ಎಕರೆಗು  ಹೆಚ್ಚು  ಭತ್ತ ಸರ್ವ ನಾಶವಾಗುತ್ತಿತ್ತು. ಮೇಲಾಗಿ ಇನ್ನೊಂದು ಬಾರಿ ನೀರು  ಕೊಟ್ಟರೇ ಕಟಾವಿಗೆ ಬರುತ್ತಿತ್ತು. 

ಕಳೆದ ಹತ್ತು ದಿನಗಳ ಹಿಂದೆ ನಾಲ್ಕು ದಿನ  ಸುರಿದ ಮಳೆ ನಿಂತು ಭಾರಿ ಬಿಸಿಲು ಅದರ ಝಳಕ್ಕೆ ಭತ್ತ ಬಸವಳಿದಿತ್ತು.  ಇಂತಹ  ಪರಿಸ್ಥಿತಿಯಲ್ಲಿ  ಭತ್ತ  ಕೈಗೆ ಬರಲ್ಲ ಎಂದು  ರೈತರು ಸರ್ಕಾರಿ ಕಚೇರಿಗಳನ್ನ ಸುತ್ತಿ ಸುಸ್ತಾಗಿದ್ದರು. ಇದರಿಂದ ಸುಮಾರು 16 ರಿಂದ 20 ಕೋಟಿ ರೂಪಾಯಿ  ವೆಚ್ಚದ  ಭತ್ತ ರೈತರಿಗೆ ಲಾಭವಾಗಿದೆ.  ಇದರಿಂದ   ಈ ಮುಖಂಡರ  ಸಹಕಾರದಿಂದ ರೈತರ ಮುಖದಲ್ಲಿ ಮಂದ ಹಾಸ ಮೂಡಿದೆ ಎನ್ನುತ್ತಾರೆ ಬನ್ನಿಕೋಡು ಗ್ರಾಮದ  ರೈತ ಜಗದೀಶ್ 

ಸರ್ಕಾರಗಳು  ಸಕಾಲಕ್ಕೆ  ಸ್ಪಂದಿಸಿದ್ರೆ ರೈತರು ಜನ ಸಾಮಾನ್ಯರು ಬದುಕುತ್ತಾರೆ. . ಆದ್ರೆ  ಮಳೆ ಸುರಿದು ಆಘಾತವಾಗಿ ದಿಕ್ಕು ತಿಳಿಯದೇ ಸರ್ಕಾರಿ ಕಚೇರಿಯಲ್ಲಿ ಸುತ್ತಾಡಿದ ರೈತರಿಗೆ   ಸಮಯಕ್ಕೆ ಸರಿಯಾಗಿ ಸ್ಪಂದನೆ ಸಿಗದಿದ್ದಾಗ ಯುವ ಮುಖಂಡ ಚಂದ್ರಶೇಖರ್ ಪೂಜಾರ್ ರೈತರಿಗೆ ಆಸರೆಯಾಗಿದ್ದಾರೆ.  ಇದರಿಂದ ಅಪಾರದ ಪ್ರಮಾಣದ  ಭತ್ತ  ರೈತರ ಮನೆ ಸೇರುವ ಭರವಸೆ ಮೂಡಿದೆ. ಮುಂದಿನ ಚುನಾವಣೆ ನೆಪದಲ್ಲಾದ್ರು ಚಂದ್ರಶೇಖರ್ ಪೂಜಾರ್ ಸಕಾಲಕ್ಕೆ ರೈತರಿಗೆ ನೆರವಾಗಿದ್ದು ಶ್ಲಾಘನೆಯೇ ಸರಿ.

Follow Us:
Download App:
  • android
  • ios