ದಾವಣಗೆರೆ: ರಾಸಾಯನಿಕ ಬಣ್ಣದ ಗಣೇಶನ ಮೂರ್ತಿ ನಿಷೇಧ

ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ರಾಸಾಯನಿಕ ಬಣ್ಣಗಳ ಗೌರಿ ಗಣೇಶನ ಮೂರ್ತಿ ತಯಾರಿಕೆ ಹಾಗೂ ಮಾರಾಟ ಮಾಡಬಾರದೆಂದು ದಾವಣಗೆರೆ ಪುರಸಭೆ ಮುಖ್ಯಾಧಿಕಾರಿ ನೊಟೀಸ್ ಜಾರಿ ಮಾಡಿದ್ದಾರೆ. ಹಾಗೆಯೇ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಸುವಂತೆ ಅವರು ಸೂಚಿಸಿದ್ದಾರೆ.

Davanagere Town Municipality issues notice tells to use nature friendly Ganesha Statue

ದಾವಣಗೆರೆ(ಜು.31): ಗೌರಿ-ಗಣೇಶ ಹಬ್ಬ ಹತ್ತಿರ ಬರುತ್ತಿದ್ದು ಪರಿಸರಕ್ಕೆ ಹಾನಿಯಾಗುವಂತಹ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ರಸಾಯನಿಕ ಬಣ್ಣಗಳ ಗೌರಿ ಗಣೇಶನ ಮೂರ್ತಿ ತಯಾರಿಕೆ ಹಾಗೂ ಮಾರಾಟ ಮಾಡಬಾರದೆಂದು ಪುರಸಭೆ ತಿಳಿಸಿದೆ.

ಪುರಸಭೆ ಮುಖ್ಯಾಧಿಕಾರಿ ಬಸವರಾಜ್‌, ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಪರಿಸರ ಅಭಿಯಂತರ ತಿಮ್ಮಪ್ಪ ನೋಟಿಸ್‌ ಜಾರಿ ಮಾಡಿದ್ದಾರೆ.

‘ಒಂದೇ ಗಣೇಶ ಪ್ರತಿಷ್ಠಾಪಿಸಿ ಅಂದರೆ ನಮ್ಮನ್ನೇ ಹಿಂದೂ ವಿರೋಧಿ ಅಂತಾರೆ!’

ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ ಮತ್ತು ರಸಾಯನಿಕ ಬಣ್ಣದ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಜಲಚರಗಳಿಗೆ, ಪ್ರಾಣಿ, ಪಕ್ಷಿಗಳಿಗೆ ಪರಿಸರಕ್ಕೆ ಮತ್ತು ಜನರ ಆರೋಗ್ಯದ ಮೇಲೆ ಧಕ್ಕೆ ಉಂಟಾಗುತ್ತದೆ ಎಂದಿದ್ದಾರೆ.

ಪರಿಸರ ಸ್ನೇಹಿ ಗಣೇಶ:

ಪರಿಸರ ಸ್ನೇಹಿ ಗಣಪತಿ ಗೌರಿ ಮೂರ್ತಿಗಳನ್ನು ತಯಾರಿಸುವಂತೆ ತಿಳಿವಳಿಕೆ ಹೇಳಿ, ಇದನ್ನು ಮೀರಿದಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios