ದಾವಣೆಗೆರೆಯಲ್ಲಿ ಶಂಕಿತ ಉಗ್ರ ಸುಹೇಲ್ ಬಂಧನ ಜನರಲ್ಲಿ ಆತಂಕ ಹೆಚ್ಚಿಸಿದೆ. ದಾವಣಗೆರೆಯಲ್ಲಿ ಕುಳಿತು ಪಾಕಿಸ್ತಾನ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಆರೋಪದಡಿ ಸುಹೇಲ್ ಬಂಧನವಾಗಿದೆ. ಇದರ ಬೆನ್ನಲ್ಲೇ ಆತನ ನಂಬರ್ ಪಾಕಿಸ್ತಾನದ ಗ್ರೂಪ್‌ಗಳಲ್ಲಿ ಹೇಗೆ ಬಂತೋ ಗೊತ್ತಿಲ್ಲ ಎಂದ ಸಹೋದರ ಹೇಳಿದ್ದಾನೆ. 

ದಾವಣೆಗೆರ (ಜೂ.25) ಆಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಪಾಕಿಸ್ತಾನ ಉಗ್ರರ ಜೊತೆ ಸಂಚು ರೂಪಿಸಿ ದಾವಣೆಗೆರೆಯಲ್ಲಿ ಅರೆಸ್ಟ್ ಆಗಿರುವ ಶಂಕಿತ ಉಗ್ರ ಸೊಹೆಲ್ ಪ್ರಕರಣದ ತನಿಖೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಶಂಕಿತ ಉಗ್ರ ಸೊಹೇಲ್ ಬಂಧನ ಪ್ರಕರಣ ಕುರಿತು ಸಹೋದರ ಶೋಯೆಬ್ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾನೆ. ಎರಡು ತಿಂಗಳ ಹಿಂದೆ ಸುಹೇಲ್‌ಗೆ ಮೊಬೈಲ್ ಕೊಡಿಸಿದ್ದೆ. ಆದರೆ ಪಾಕಿಸ್ತಾನ ಮೂಲದ ಗ್ರೂಪ್‌ಗಳಿಗೆ ಈತನ ನಂಬರ್ ಹೇಗೆ ಆ್ಯಡ್ ಆಯ್ತು ಗೊತ್ತಿಲ್ಲ ಎಂದು ಶೋಯೆಬ್ ಹೇಳಿದ್ದಾರೆ. ನಾವು ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯವರು. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲಾಗಿದೆ. ನನ್ನ ಐಡಿ ಬಳಸಿ ಆತನಿಗೆ ಸಿಮ್ ಕೊಡಿಸಲಾಗಿದೆ ಎಂದು ಶೋಯೆಬ್ ಹೇಳಿದ್ದಾನೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಏನಾಯ್ತೋ ಗೊತ್ತಿಲ್ಲ, ಹೇಗಾಯ್ತೋ ಗೊತ್ತಿಲ್ಲ, ಏನಿದೆಯೋ ಗೊತ್ತಿಲ್ಲ

ನಮ್ಮ ತಂದೆ ತಾಯಿಗೆ ಒಟ್ಟು ಹತ್ತು ಜನ ಮಕ್ಕಳು. ಆರು ಸಹೋದರಿಯರು ಹಾಗೂ ನಾಲ್ವರು ಸಹೋದರರು. ಸುಹೇಲ್ ಕೊನೆಯವನು, ಆತನ ವಯಸ್ಸು ಕಡಿಮೆ ಇದೆ. ಹೀಗಾಗಿ ನನ್ನ ಆಧಾರ್ ಕಾರ್ಡ್ ಬಳಸಿ ಸಿಮ್ ಕೊಡಿಸಿದ್ದೆ. ಆತನ ಆಧಾರ್ ಕಾರ್ಡ್ ಸೇರಿದಂತೆ ಎಲ್ಲರ ಆಧಾರ್ ಕಾರ್ಡ್ ವಿಳಾಸ ಅಪ್‌ಡೇಟ್ ಮಾಡಿದ್ದೇವೆ. ಈ ಹಿಂದೆ ದೆಹಲಿ, ನೋಯ್ಡಾ ಸೇರಿ ಹಲವೆಡೆ ಕೆಲಸ ಮಾಡಿದ್ದೇವೆ. ಪಾಕಿಸ್ತಾನದ ಗ್ರೂಪ್‌ಗಳಲ್ಲಿ ಯಾರು ಆತನ ಆ್ಯಡ್ ಮಾಡಿದ್ದಾರೆ ಗೊತ್ತಿಲ್ಲ. ಅದರಲ್ಲಿ ಏನು ಮಾತುಕತೆ ಆಗಿದೆ ಗೊತ್ತಿಲ್ಲ. ಪೊಲೀಸರು ಆಗಮಿಸಿ ನಮ್ಮ 8 ಜನರನ್ನು ಕರೆದುಕೊಂಡು ಹೋಗಿದ್ರು. ಬಳಿಕ ಆತನ ಮೊಬೈಲ್‌ನಲ್ಲಿ‌ ಏನು ಪತ್ತೆಯಾಗಿದೆಯೋ ಗೊತ್ತಿಲ್ಲ. ತಮ್ಮನ ಅರೆಸ್ಟ್ ಮಾಡಿ ಕೋರ್ಟ್‌ಗೆ ಹಾಜರು ಪಡಿಸಿ ಜೈಲಿಗೆ ಕಳಿಸಿದರು ಎಂದು ಶೋಯೆಬ್ ಹೇಳಿದ್ದಾನೆ.

ನಮ್ಮ ತಂದೆ ತಾಯಿಗೆ ವಿಷಯ ತಿಳಿಸಿದ್ದೇವೆ. ಉತ್ತರ ಪ್ರದೇಶದಲ್ಲಿರುವ ಅವರು ನಾಳೆ ಅಥವಾ ನಾಡಿದ್ದು ಬರಬಹುದು ಎಂದು ಸುಹೇಲ್ ಸಹೋದರ ಶೋಯೆಬ್‌ ಹೇಳಿದ್ದಾನೆ. ಇತ್ತ ಸುಹೇಲ್ ಜೊತೆ ದಾವಣೆಗೆರೆ ಕೆಲಸಕ್ಕೆ ಸೇರಿದ ಜಹೇದ್ ಅರೆಸ್ಟ್ ಕುರಿತು ಪ್ರತಕ್ರಿಯಿಸಿದ್ದಾನೆ.

ನಾವು ಕಾರ್ಮಿಕರು ನಮಗೇನು ಗೊತ್ತಿಲ್ಲ

ದಾವಣಗೆರೆ ಜಿಲ್ಲೆ ಹರಿಹರದಲ್ಲಿ ಶಂಕಿತ ಉಗ್ರ ಸುಹೇಲ್ ಬಂಧನ ಪ್ರಕರಣ ಸಂಬಂಧ ಸುಹೇಲ್ ಜೊತೆ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಬಹುತೇಕ ಎಲ್ಲಾ ಉದ್ಯೋಗಿಗಳು ಒಕ್ಕೊರಲಿನಿಂದ ನಮಗೇನು ಗೊತ್ತಿಲ್ಲ, ನಾವು ಕಾರ್ಮಿಕರು ಎಂದಿದ್ದಾರೆ. ನಾವು ಹತ್ತು ಹದಿನೈದು ದಿನಗಳ ಹಿಂದೆ ಕೆಲಸಕ್ಕೆ ಆಗಮಿಸಿದ್ದೇವೆ. ಅವರು ಇಬ್ಬರು ಸಹೋದರರು ಇದ್ದರು. ಇಬ್ಬರು ಈಗ ಇಲ್ಲಿಂದ ಹೋಗಿದ್ದಾರೆ . ಹೆಚ್ಚಿನ ಮಾಹಿತಿ ನಮಗೆ ಗೊತ್ತಿಲ್ಲ ಎಂದು ಸಹೋದ್ಯೋಗಿ ಜಹೇದ್ ಹೇಳಿದ್ದಾನೆ.