Davanagere: ಶಾಲೆಯ ಆವರಣ ಕುಡುಕರ ದಿನನಿತ್ಯದ ಪಾರ್ಟಿ ಹಾಲ್, 1200 ಬಿಯರ್ ಬಾಟಲ್ ಪತ್ತೆ!
ದಾವಣಗೆರೆ ಸರ್ಕಾರಿ ಶಾಲೆಯ ಆವರಣವನ್ನು ಕುಡುಕರು ಪಾರ್ಟಿ ಅಡ್ಡೆ ಮಾಡಿಕೊಂಡಿದ್ದಾರೆ. ಪ್ರತಿನಿತ್ಯ ಕುಡುಕರು ಬಿಯರ್ ಬಾಟಲ್ ಗಳನ್ನು ಶಾಲೆಯ ಆವರಣದಲ್ಲೇ ಬೀಸಾಕಿ ಹೋಗುತ್ತಿದ್ದಾರೆ. ಯುವ ಬ್ರಿಗೇಡ್ ಕಾರ್ಯಕರ್ತರು ಸಮಾಜಸೇವಾ ಕಾರ್ಯಕ್ಕೆಂದು ಶಾಲೆ ಆವರಣದಲ್ಲಿ ಕಣ್ಣಾಡಿಸಿದಾಗ ರಾಶಿ ರಾಶಿ ಮದ್ಯದ ಬಾಟಲಿಗಳು ಸಿಕ್ಕಿವೆ.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಡಿ.19): ದಾವಣಗೆರೆ ಸರ್ಕಾರಿ ಶಾಲೆಯ ಆವರಣವನ್ನು ಕುಡುಕರು ಪಾರ್ಟಿ ಅಡ್ಡೆ ಮಾಡಿಕೊಂಡಿದ್ದಾರೆ. ಪ್ರತಿನಿತ್ಯ ರಾತ್ರಿ ಮದ್ಯ ಸೇವಿಸುವ ಕುಡುಕರು ಮದ್ಯದ ಬಿಯರ್ ಬಾಟಲ್ ಗಳನ್ನು ಶಾಲೆಯ ಆವರಣದಲ್ಲೇ ಬೀಸಾಕಿ ಹೋಗುತ್ತಿದ್ದಾರೆ.. ಹೀಗೆ ಬೀಸಾಕಿದ ಸಾವಿರಾರು ಬಿಯರ್ ಬಾಟಲ್ ಗಳ ಸಂಖ್ಯೆ ಸಾರ್ವಜನಿಕರಲ್ಲಿ ಗಾಬರಿ ಮೂಡಿಸಿದೆ. ಸಿಕ್ಕ ಮದ್ಯದ ಬಾಟಲ್ ನೋಡಿದ್ರೆ ಇದೇನು ಶಾಲೆಯೋ ಅಥವಾ ಬಾರ್ ಅಂಡ್ ರೆಸ್ಟೋರೆಂಟ್ ಎಂದು ಕೇಳುವಂತಾಗಿದೆ.
ದೆಹಲಿ ಮದ್ಯ ನೀತಿ ಹಗರಣ: ಸಿಬಿಐನಿಂದ ಕೆಸಿಆರ್ ಪುತ್ರಿ ಕವಿತಾ ವಿಚಾರಣೆ
ದಾವಣಗೆರೆ ನಗರದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಜರೇಕಟ್ಟೆ ಗ್ರಾಮದ ಸರ್ಕಾರಿ ಅನುದಾನಿತ ಶ್ರೀ ಆಂಜನೇಯಸ್ವಾಮಿ ವಸತಿ ಪ್ರೌಢಶಾಲೆಯ ಆವರಣ ಕುಡುಕರ ಅಡ್ಡೆಯಾಗಿದೆ. ಶಾಲೆಗೆ ಹೊಂದಿಕೊಂಡಿರುವ ಆಟದ ಮೈದಾನ. ಆವರಣದಲ್ಲಿ ಗಿಡಗೆಂಟೆಗಳ ಬಳಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಸಿಕ್ಕುತ್ತವೆ. ಯುವ ಬ್ರಿಗೇಡ್ ಕಾರ್ಯಕರ್ತರು ಸಮಾಜಸೇವಾ ಕಾರ್ಯಕ್ಕೆಂದು ಶಾಲೆ ಆವರಣದಲ್ಲಿ ಕಣ್ಣಾಡಿಸಿದಾಗ ರಾಶಿ ರಾಶಿ ಮದ್ಯದ ಬಾಟಲಿಗಳು ಸಿಕ್ಕಿವೆ. ಇದೇನು ಹೀಗೆ ಎಂದು ಅಲ್ಲಿನ ಶಿಕ್ಷಕರು ವಿದ್ಯಾರ್ಥಿಗಳನ್ನು ವಿಚಾರಿಸಿದಾಗ ಈ ಶಾಲಾ ಆವರಣ ಕುಡುಕರ ಅಡ್ಡೆಯಾದ ಕತೆಯನ್ನು ಬಿಚ್ಚಿಟ್ಟಿದ್ದಾರೆ.
ನಕಲಿ ಮದ್ಯ ಪ್ರಕರಣದಲ್ಲಿ ಸಾವಿನ ಸಂಖ್ಯೆ 65ಕ್ಕೆ ಏರಿಕೆ, ಪರಿಹಾರ ಕೇಳಲೇಬೇಡಿ ಎಂದ ಬಿಹಾರ ಸಿಎಂ!
ಜರೇಕಟ್ಟೆ ದೇವರಬೆಳಕೆರೆ ಮಾರ್ಗದ ಪ್ರಮುಖ ರಸ್ತೆಯಲ್ಲೇ ಆಂಜನೇಯ ಪ್ರೌಢಶಾಲೆ ಬರುತ್ತದೆ. ಆಂಜನೇಯ ಪ್ರೌಢಶಾಲೆಗೆ ಸಮೀಪದಲ್ಲೇ ಒಂದು ಮದುವೆ ಸಮುದಾಯ ಭವನ ಇದೆ. ಜರೇಕಟ್ಟೆ ಗ್ರಾಮದಲ್ಲಿ ಎರಡು ಬಾರ್ ಗಳಿದ್ದು ಶಾಮನೂರು ಜರೇಕಟ್ಟೆ ರಸ್ತೆಯಲ್ಲಿ ಹಲವು ಬಾರ್ ಅಂಡ್ ರೆಸ್ಟೋರೆಂಟ್ ಡಾಬಾಗಳಿವೆ. ಸಂಜೆಯಾಗುತ್ತಲೇ ಈ ರಸ್ತೆಯಲ್ಲಿ ಸಂಚರಿಸುವವರು ಕುಡಿಯುವುದಕ್ಕೆ ನಿರ್ಜನ ಜಾಗ ನೋಡುತ್ತಾರೆ. ಇಲ್ಲೇ ಹೈಸ್ಕೂಲ್ ಮೈದಾನ ಇರೋದರಿಂದ ಅಲ್ಲಿಗೆ ಬಂದು ಮೋಜು ಮಸ್ತಿ ಮಾಡಿ ಮದ್ಯದ ಬಾಟಲಿಗಳನ್ನು ಸ್ಕೂಲ್ ಆವರಣದ ಗಿಡ ಮರಗಳ ಬಳಿ ಎಸೆದು ಹೋಗುತ್ತಾರೆ.. ಹಾಗಾಗಿ ಸ್ಕೂಲ್ ಆವರಣದಲ್ಲಿ ಎಲ್ಲೇ ಹುಡುಕಿದ್ರು ಬಿಯರ್ ಬಾಟಲ್ ಪ್ಲಾಸ್ಟಿಕ್ ಕವರ್ ,ಮದ್ಯದ ಪೌಚುಗಳು ಸಿಗುತ್ತವೆ.
ಅಕ್ರಮ ಮದ್ಯಮಾರಾಟ ನಿಲ್ಲಿಸಲು ಆಗ್ರಹ
ವಿಜಯನಗರ: ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ ತಕ್ಷಣವೇ ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು ಎಂದು ಆಗ್ರಹಿಸಿ ಗ್ರಾಕೂಸ್ ಸಂಘಟನೆಯವರು ತಾಲೂಕು ಅಬಕಾರಿ ಅಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಈ ಕುರಿತು ಗ್ರಾಕೂಸ್ ಸಂಚಾಲಕಿ ಅಕ್ಕಮಹಾದೇವಿ ಮರಬ್ಬಿಹಾಳು ಮಾತನಾಡಿ, ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಸತತ 6 ವರ್ಷಗಳಿಂದ ಮಹಿಳಾ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿವೆ. ಗ್ರಾಮೀಣ ಪ್ರದೇಶಗಳಲ್ಲಿನ ಗಲ್ಲಿಗಲ್ಲಿಗಳಲ್ಲಿ ಎಗ್ಗಿಲ್ಲದೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು,ಈಗಾಗಲೇ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಅಬಕಾರಿ ಅಧಿಕಾರಿಗಳಿಗೆ ಸಾಕಷ್ಟುಬಾರಿ ಮನವಿ ಸಲ್ಲಿಸಲಾಗಿದೆ. ಅಬಕಾರಿ ಅಧಿಕಾರಿಗಳು ಈಗ ನ್ಯಾಯಾಲಯದ ಆದೇಶವನ್ನು ಚಾಚುತಪ್ಪದೆ ಪಾಲಿಸಿ ಅಕ್ರಮ ಮದ್ಯ ಮಾರಾಟ ಸಂಪೂರ್ಣ ನಿಲ್ಲಿಸಬೇಕು. ತಾಲೂಕಿನ ಬಾಚಿಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿರುವ ಎಂಎಸ್‌ಐಎಲ್ ಬಾರ್‌ನ್ನು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದರಿಂದ ಸ್ಥಳವನ್ನು ಕೂಡಲೇ ಬದಲಿಸಬೇಕು. ಬೆಣಕಲ್ಲು ಎಂಎಸ್‌ಐಎಲ್ ಬಾರ್ ಶಾಲೆ ಮತ್ತು ಗ್ರಾಪಂ ಕಚೇರಿ ಪಕ್ಕದಲ್ಲಿ ಇರುವುದರಿಂದ ಶಾಲಾ ಮಕ್ಕಳಿಗೆ, ಮಹಿಳೆಯರಿಗೆ ತೊಂದರೆಯಾಗಿದ್ದು ಇದನ್ನು ಕೂಡ ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಒಕ್ಕೂಟದ ತ್ರಿವೇಣಿ,ಎಂ.ಬಿ.ಕೊಟ್ರಮ್ಮ, ಶಿಲ್ಪಾ,ಸಂಬ್ರೀನ್, ಲಲಿತ ಇತರರಿದ್ದರು.