ದಾವಣಗೆರೆ: ರಷ್ಯಾದಿಂದ 110 ವಿದ್ಯಾರ್ಥಿಗಳು ಬೆಂಗಳೂರಿಗೆ

ಮಾಸ್ಕೋದಿಂದ ದೆಹಲಿಗೆ ವಂದೇ ಮಾತರಂ ಮಿಷಿನ್‌ ವಿಮಾನದಲ್ಲಿ ಈ ಎಲ್ಲಾ 110 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬರಲು ಅವಕಾಶ ಸಿಗಲಿಲ್ಲ| ಸಂಸದ ಸಿದ್ದೇಶ್ವರ್‌ಗೆ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಬೆಂಗಳೂರಿಗೆ ಬಂದಿಳಿಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದ ವಿದ್ಯಾರ್ಥಿಗಳು|

Davanagere Based Students Back to Bengaluru From Russia

ದಾವಣಗೆರೆ(ಜು.13): ರಷ್ಯಾದಲ್ಲಿ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ 110 ವಿದ್ಯಾರ್ಥಿಗಳು ತಾಯ್ನಾಡಿಗೆ ಬರಲು ಟ್ವಿಟ್ಟರ್‌, ಫೇಸ್‌ಬುಕ್‌ನಲ್ಲಿ ಮಾಡಿದ ಮನವಿಗೆ ಸಂಸದ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ್‌ ಸ್ಪಂದಿಸಿದ್ದಾರೆ. 

ಮಾಸ್ಕೋದಿಂದ ದೆಹಲಿಗೆ ವಂದೇ ಮಾತರಂ ಮಿಷಿನ್‌ ವಿಮಾನದಲ್ಲಿ ಈ ಎಲ್ಲಾ 110 ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬರಲು ಅವಕಾಶ ಸಿಗಲಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಸಂಸದ ಸಿದ್ದೇಶ್ವರ್‌ಗೆ ಫೇಸ್‌ಬುಕ್‌, ಟ್ವಿಟರ್‌ನಲ್ಲಿ ಬೆಂಗಳೂರಿಗೆ ಬಂದಿಳಿಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದ್ದರು.

ವೈರಸ್‌ ಹಾವಳಿ, ಸದ್ಯ ಮಠ-ಮಂದಿರಕ್ಕೆ ಬರಬೇಡಿ..!

ವೈದ್ಯ ವಿದ್ಯಾರ್ಥಿಗಳ ಮನವಿಗೆ ಸ್ಪಂದಸಿದ ಸಂಸದ ಜಿ.ಎಂ.ಸಿದ್ದೇಶ್ವರ್‌ ಜುಲೈ 1ರಂದು ವಿದೇಶಾಂಗ ಸಚಿವ ಜೈಶಂಕರ್‌, ವಿಮಾನಯಾನ ಸಚಿವ ಹರದೀಪ್‌ ಸಿಂಗ್‌ಪುರಿಗೆ ಪತ್ರ ಬರೆದು ಮತ್ತು ಟ್ವೀಟ್‌ ಮೂಲಕವೂ ಗಮನ ಸೆಳೆದಿದ್ದರು. ಸಿದ್ದೇಶ್ವರ್‌ ಮನವಿಗೆ ಸ್ಪಂದಿಸಿದ ಸಚಿವ ಜೈಶಂಕರ್‌ ಈ ಎಲ್ಲಾ ವಿದ್ಯಾರ್ಥಿಗಳು ರಷ್ಯಾದ ಮಾಸ್ಕೋದಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದಾರೆ.

ಈ ಎಲ್ಲ ವಿದ್ಯಾರ್ಥಿಗಳು ಜು.13ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಇದರಲ್ಲಿ 11 ಜನ ದಾವಣಗೆರೆ ಜಿಲ್ಲೆಯವರಾಗಿದ್ದಾರೆ. ಇದಕ್ಕೆ ವಿದ್ಯಾರ್ಥಿಗಳು ಸಿದ್ದೇಶ್ವರ್‌ ಮತ್ತು ಕೇಂದ್ರ ಸಚಿವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
 

Latest Videos
Follow Us:
Download App:
  • android
  • ios