ಕೋವಿಡ್ ಪರಿಹಾರ ಹಣ ಅತ್ತೆ ಪಾಲಾಗದಂತೆ ಸೊಸೆ ಹೋರಾಟ, ರಿಮ್ಸ್ ಆಸ್ಪತ್ರೆ ಡೀನ್ ವಿರುದ್ಧ ಪ್ರತಿಭಟನೆ
ಕೋವಿಡ್ ಪರಿಹಾರ ಹಣಕ್ಕಾಗಿ ಅತ್ತೆ- ಸೊಸೆ ನಡುವೆ ಕಸರತ್ತು ನಡೆಯುತ್ತಿದೆ. ಕೋವಿಡ್ ವಾರಿಯರ್ ಪರಿಹಾರ ಹಣ ಅತ್ತೆ ಪಾಲು ಆಗದಂತೆ ಸೊಸೆ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸುತ್ತಿದ್ದಾಳೆ.
ರಾಯಚೂರು (ಜೂ.8): ಕೋವಿಡ್ ಪರಿಹಾರ ಹಣಕ್ಕಾಗಿ ಅತ್ತೆ- ಸೊಸೆ ನಡುವೆ ಕಸರತ್ತು ನಡೆಯುತ್ತಿದೆ. ಕೋವಿಡ್ ವಾರಿಯರ್ ಪರಿಹಾರ ಹಣ ಅತ್ತೆ ಪಾಲು ಆಗದಂತೆ ಸೊಸೆ ರಾಯಚೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸುತ್ತಿದ್ದಾಳೆ. ನನ್ನ ಗಂಡನ ಪರಿಹಾರ ಹಣ ನನಗೆ ನೀಡುವಂತೆ ಸೊಸೆ ಮಂಜುಳಾ ಜೆ. ಏಕಾಂಗಿ ಆಗಿ ಪ್ರತಿಭಟನೆ ನಡೆಸುತ್ತಿದ್ದಾಳೆ.
ಕಳೆದ ಎರಡು ವರ್ಷಗಳ ಹಿಂದೆ ಕೋವಿಡ್ (Covid) ನಿಂದಾಗಿ ಮಂಜುಳಾ ಅವರ ಪತಿ ಲೋಹಿತ್.ಜಿ.ಕೆ ಮೃತಪಟ್ಟಿದ್ದರು. ಒವರು ರಿಮ್ಸ್ ಆಸ್ಪತ್ರೆ (Rims Hospital ) ಸಿಬ್ಬಂದಿಯಾಗಿದ್ದರು. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ರಿಸರ್ಚ್ ವಿಜ್ಞಾನಿಯಾಗಿದ್ದರು.
ಚಿತ್ರದುರ್ಗ: ವಾಕಿಂಗ್ ಹೋದಾಗ ಹಾವು ಕಚ್ಚಿ RFO ಸಾವು, ಸಿಪಿಐ ಹೃದಯಾಘಾತದಿಂದ ನಿಧನ
ಪರಿಹಾರ ಹಣ ಪತ್ನಿ ಮಂಜುಳಾ ಜೆ. ಹೆಸರಿಗೆ ನೀಡಬೇಕಿತ್ತು. ಆದರೆ ಪರಿಹಾರ ಹಣವನ್ನು ಲೋಹಿತ್ ಅವರ ತಾಯಿ ಮಂಜುಳಾ .ಕೆ ಇವರಿಗೆ ನೀಡಲು ನಿರ್ಧಾರ ಮಾಡಲಾಗಿದೆ. ಹೀಗಾಗಿ ಅತ್ತೆಗೆ ಪರಿಹಾರ ಹಣ ನೀಡಬೇಡಿ ಎಂದು ಸೊಸೆ ಕಚೇರಿಯಿಂದ ಕಚೇರಿಗೆ ಅಲೆದಾಟ ನಡೆಸಿದ್ದಾರೆ. ಹೆಂಡತಿ ಇದ್ರೂ ಮೃತನ ತಾಯಿಗೆ ಹೇಗೆ ಪರಿಹಾರ ನೀಡುತ್ತೀರಾ ಎಂಬುವುದು ಸೊಸೆಯ ವಾದವಾಗಿದೆ. ಹೀಗಾಗಿ ಕೋವಿಡ್ ವಾರಿಯರ್ ಗೆ ಬರುತ್ತಿರುವ 50ಲಕ್ಷ ಹಣಕ್ಕಾಗಿ ಅತ್ತೆ ಮತ್ತು ಸೊಸೆ ಕಸರತ್ತು ನಡುವೆ ಕಸರತ್ತು ನಡೆಯುತ್ತಿದೆ.
ಒಂದೇ ಹುದ್ದೆಗೆ ಇಬ್ಬರು ಶಿಕ್ಷಣಾಧಿಕಾರಿಗಳ ಕಿತ್ತಾಟ, ನೀ ಕೊಡೆ- ನಾ ಬಿಡೆ ಎಂದು
ಅತ್ತೆಗೆ ಹಣ ನೀಡಬೇಡಿ ಎಂದು ಸೊಸೆ ಮಂಜುಳಾ.ಜೆ. ಮನವಿ ಮಾಡಿದ್ದು, ರಾಯಚೂರು ಜಿಲ್ಲಾಡಳಿತ ಮತ್ತು ರಿಮ್ಸ್ ಆಸ್ಪತ್ರೆ ಡೀನ್ ವಿರುದ್ಧ ಮಂಜುಳಾ ಅವರು ಈ ಆರೋಪ ಹೊರೆಸಿ. ಪ್ರತಿಭಟನೆ ನಡೆಸುತ್ತಿದ್ದಾರೆ.