ಬೆಂಗಳೂರು [ಮಾ.08]:  ಹಣದ ವಿಚಾರಕ್ಕೆ ಪತಿ ಜತೆಗೂಡಿ ಮಗಳೇ ತಾಯಿಯನ್ನು ಕೊಂದು ಆಕಸ್ಮಿಕ ಸಾವಿನ ಕಥೆ ಕಟ್ಟಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ವೈಯಾಲಿಕಾವಲ್‌ ನಿವಾಸಿ ಅನಸೂಯ (41) ಕೊಲೆಯಾದ ದುರ್ದೈವಿ. ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ, ಮೃತರ ಪುತ್ರಿ ವೇಣಿ ಮತ್ತು ಅಳಿಯ ರಾಜು ಎಂಬಾತನನ್ನು ಬಂಧಿಸಲಾಗಿದೆ ಎಂದು ವೈಯಾಲಿಕಾವಲ್‌ ಠಾಣೆ ಪೊಲೀಸರು ಹೇಳಿದ್ದಾರೆ. ಅನಸೂಯ ಮೊದಲಿಗೆ ಡೇವಿಡ್‌ ಎಂಬುವರನ್ನು ವಿವಾಹವಾಗಿದ್ದು, ದಂಪತಿಗೆ ವೇಣಿ ಎಂಬ ಮಗಳು ಜನಿಸಿದ್ದಳು. 

ಆಕೆಯನ್ನು ರಾಜು ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಕೆಲ ವರ್ಷಗಳ ಹಿಂದೆ ಅನಾರೋಗ್ಯದಿಂದ ಡೇವಿಡ್‌ ನಿಧನರಾಗಿದ್ದು, ಬಳಿಕ ಅನಸೂಯ ನಂಜಪ್ಪ ಎಂಬುವರನ್ನು 2ನೇ ಮದುವೆ ಆಗಿದ್ದರು. ಅವರ 2ನೇ ಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ನಂಜಪ್ಪ ಕೂಡ 5 ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ನಂತರ ಇಬ್ಬರು ಮಕ್ಕಳ ಜತೆ ವೈಯಾಲಿಕಾವಲ್‌ನಲ್ಲಿ ನೆಲೆಸಿದ್ದರು.

ಬಿಜೆಪಿ ಮುಖಂಡನಿಗೆ ಕೋಟಿ-ಕೋಟಿ ಪಂಗನಾಮ ಹಾಕಿದ ಗೋಲ್ಡ್‌ ಮ್ಯಾನ್..!...

ಫೆ.19ರಂದು ವೇಣಿ ತನ್ನ ಪತಿ ಜತೆ ವೈಯಾಲಿಕಾವಲ್‌ನ ತಾಯಿ ಅನಸೂಯ ಮನೆಗೆ ಹೋಗಿದ್ದು, ಹಣದ ವಿಚಾರವಾಗಿ ಜಗಳವಾಗಿದೆ. ಈ ವೇಳೆ ವೇಣಿ ತನ್ನ ಪತಿ ಜತೆಗೂಡಿ ತಾಯಿಯ ಮೇಲೆ ಹಲ್ಲೆ ನಡೆಸಿದ್ದು, ಅಸ್ವಸ್ಥಗೊಂಡ ಅವರನ್ನು ರಸ್ತದೊತ್ತಡ ಕಡಿಮೆಯಾಗಿದೆ ಎಂದು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಚಿಕಿತ್ಸೆ ಫಲಿಸದೇ ಅನಸೂಯ ಮೃತಪಟ್ಟಿದ್ದರು. ಕೊನೆಯ ಅನಸೂಯಳ ಅಣ್ಣ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿದಾಗ ಸಂತ್ಯಾಂಶ ಬೆಳಕಿಗೆ ಬಂದಿದೆ.