Asianet Suvarna News Asianet Suvarna News

ಬಿಜೆಪಿ ಮುಖಂಡನಿಗೆ ಕೋಟಿ-ಕೋಟಿ ಪಂಗನಾಮ ಹಾಕಿದ ಗೋಲ್ಡ್‌ ಮ್ಯಾನ್..!

ಈತ ಗೋಲ್ಡ್ ಮ್ಯಾನ್. ಮೈತುಂಬಾ ಗೋಲ್ಡ್ ಹಾಕ್ತಾನೆ. ಈ ಗೋಲ್ಡ್ ಮನುಷ್ಯನನ್ನ ನಂಬಿದ್ರೆ ಪಂಗನಾಮ ಹಾಕ್ತಾನೆ. ಈಗ ಬಿಜೆಪಿ ನಾಯಕನಿಗೆ ಕೋಟಿಗಟ್ಟಲೇ ಪಂಗನಾಮ ಹಾಕಿದ್ದಾನೆ. ಅಷ್ಟಕ್ಕೂ ಯಾರು ಈ ಗೋಲ್ಡ್ ಮ್ಯಾನ್?

CCB Arrets Tamil nadu gang For cheating To Bengaluru BJP Leader
Author
Bengaluru, First Published Mar 7, 2020, 3:57 PM IST

ಬೆಂಗಳೂರು, (ಮಾ.07):  ಬೆಂಗಳೂರಿನ ವಿಜಯನಗರ ಕ್ಷೇತ್ರದ ಬಿಜೆಪಿ ಮುಖಂಡ ಹಾಗೂ ಮಾಜಿ ಕಾರ್ಪೊರೇಟರ್​​​ ಹೆಚ್​. ರವೀಂದ್ರ ಕೋಟಿ- ಕೋಟಿ ರೂ. ಲೋನ್ ಆಸೆಗೆ ಬಿದ್ದು ಮೋಸ ಹೋಗಿದ್ದಾರೆ.

"

ಲೋನ್​​ ಆಸೆ ತೋರಿಸಿ ರವೀಂದ್ರ ಕೋಟ್ಯಂತರ ರೂ. ವಂಚಿಸಿದ ಖತರ್ನಾಕ್​​ ತಂಡವನ್ನು ಇದೀಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯ ಗುಪ್ತಾಂಗದಲ್ಲಿತ್ತು 8 ಕೋಟಿ ಮೌಲ್ಯದ ವಸ್ತು!

ತಮಿಳುನಾಡು ಮೂಲದ ಹರಿಗೋಪಾಲಕೃಷ್ಣನ್ ನಾಡರ್ ಮತ್ತು ತಂಡವನ್ನ​ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಮಾರು 5 ಕೆಜಿಯಷ್ಟು ಚಿನ್ನದ ಒಡವೆ ಹಾಕ್ಕೊಂಡು ರವೀಂದ್ರ ಅವರನ್ನು ಭೇಟಿಯಾಗಿದ್ದ ಈ ಖತರ್ನಾಕ್​ ತಂಡ, 150 ಕೋಟಿ ರೂ. ಲೋನ್​ ಕೊಡಿಸೋ ಆಸೆ ತೋರಿಸಿದ್ದಾನೆ. 

ಅಲ್ಲದೇ ಈ ವ್ಯವಹಾರಕ್ಕೆ 4.5 ಕೋಟಿ ರೂ. ಲಕ್ಷ ಅಗ್ರಿಮೆಂಟ್​ ಚಾರ್ಜ್​​​​ ಪಡೆದಿತ್ತು. ಆದ್ರೆ, ಹಣ ಪಡೆದ ನಂತರ ನಾಡರ್ ನಾಪತ್ತೆಯಾಗಿದ್ದಾನೆ.

​ಬಳಿಕ ರವೀಂದ್ರ ತಾವು ಮೋಸ ಹೋಗಿದ್ದು ಗೊತ್ತಾಗ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಸಿಸಿಬಿ ಟೀಂ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ವಿಚಾರಣೆ ನಡೆಸಿದೆ.

Follow Us:
Download App:
  • android
  • ios