Asianet Suvarna News Asianet Suvarna News

FB ಲವರ್ ಜೊತೆ ಓಡಿ ಹೋದ ಮಗಳು, ಮೊಮ್ಮಗನ ಕೊಂದು, ವೃದ್ಧೆ ಆತ್ಮಹತ್ಯೆಗೆ ಯತ್ನ

ವಿಧವೆಯಾಗಿದ್ದ ಮಗಳು ಫೇಸ್‌ಬುಕ್ ಲವರ್ ಜೊತೆ ಓಡಿಹೋಗಿದ್ದಕ್ಕೆ ವೃದ್ಧೆಯೊಬ್ಬರು ಮೊಮ್ಮಗನನ್ನು ಕೆರೆಗೆ ತಳ್ಳಿ ತಾನೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಮಗಳು ಓಡಿ ಹೋಗಿ ಮಾನ ಹೋಯಿತು ಎಂದು ಅಂಜಿದ ವೃದ್ಧೆ ಈ ರೀತಿ ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ.

Daughter elopes with facebook friend
Author
Bangalore, First Published Sep 25, 2019, 12:47 PM IST
  • Facebook
  • Twitter
  • Whatsapp

ಮಂಡ್ಯ(ಸೆ. 25): ಫೇಸ್ ಬುಕ್ ಪ್ರಿಯಕರನ ಪ್ರೀತಿಗೆ ಮನ ಸೋತು ಓಡಿ ಹೋದ ಮಗಳ ನಿರ್ಧಾರಕ್ಕೆ ಮಾನ ಹೋಯಿತು ಎಂದು ಅಂಜಿದ ತಾಯಿಯೊಬ್ಬಳು ಮೊಮ್ಮಗನನ್ನು ಕೆರೆ ತಳ್ಳಿ ಕೊಲೆ
ಮಾಡಿ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿ ಪ್ರಕರಣ ವೊಂದು ತಾಲೂಕಿನ ಸಿಂದಘಟ್ಟದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.

ಶೀಳನೆರೆ ಹೋಬಳಿಯ ಉಯ್ಗೋನಹಳ್ಳಿ ಮಾರುತಿ ನಗರ ಬಡಾವಣೆಯ ಲಕ್ಷ್ಮೀ ಪುತ್ರ ಪ್ರಜ್ವಲ್ (11 ವರ್ಷ) ಕೊಲೆ ಯಾದ ಬಾಲಕ. ಮೊಮ್ಮಗನನ್ನು ಕೆರೆ ತಳ್ಳಿದ ನಂತರ ತಾನೂ ಕೆರೆಗೆ ಹಾರಿದ ಅಜ್ಜಿ  ಸಾವಿತ್ರಮ್ಮ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮನೆತನದ ಗೌರವಕ್ಕೆ ಚ್ಯುತಿ ತಂದ ಪುತ್ರಿ ಲಕ್ಷ್ಮಿ ಮೇಲಿನ ಕೋಪಕ್ಕೆ ಅಜ್ಜಿ ಸಾವಿತ್ರಮ್ಮ ಮನನೊಂದು ಮೊಮ್ಮಗ ಪ್ರಜ್ವಲ್‌ನನ್ನು ಕೈ ಕಾಲು ಕಟ್ಟಿ ಕೆರೆಗೆ ತಳ್ಳಿದ್ದಾರೆ.

ಮಂಡ್ಯ: ವರುಣನ ಅಬ್ಬರಕ್ಕೆ ಜನ ತತ್ತರ

ಬಾಲಕ ನೀರು ಕುಡಿದು ಸಾವನ್ನಪ್ಪಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಸಾವಿತ್ರಮ್ಮ ಯತ್ನಿಸಿದರು. ಸ್ಥಳೀಯರು ಅಜ್ಜಿ ಯನ್ನು ಬಚಾವ್ ಮಾಡಿದರು. ಮೊಮ್ಮಗನನ್ನು ಕೆರೆಗೆ ತಳ್ಳಿ
ಕೊಲೆ ಮಾಡಿದ ಆರೋಪದ ಮೇರೆಗೆ ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿತ್ರಮ್ಮನನ್ನು ವಶಕ್ಕೆ ಪಡೆದು ವಿಚಾರಣೆ ಮಾಡು ತ್ತಿದ್ದಾರೆ. ಫೇಸ್‌ಬುಕ್ ಪ್ರಿಯಕರ ಹಾಗೂ ಪ್ರಿಯತಮೆ ಲಕ್ಷ್ಮಿ ಘಟನೆ ನಡೆದ ನಂತರ ಕೆ.ಆರ್.ಪೇಟೆ ಆಗಮಿಸಿದ್ದಾರೆ. ಈ ಬಗ್ಗೆ ಯಾವುದೇ ಮಾಹಿತಿ ನೀಡಲು ಪೊಲೀಸರು ನಿರಾಕರಣೆ ಮಾಡಿದರು.

ಘಟನೆ ವಿವರ:

ಸಾವಿತ್ರಮ್ಮನ ಮಗಳು ಲಕ್ಷ್ಮಿ ಕೆ.ಆರ್.ಪೇಟೆ ಖಾಸಗಿ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತ್ತಿದ್ದರು. ಈಕೆ ಮಂಗಳೂರು ಮೂಲದ ಶ್ರೀನಿವಾಸ್ ಎಂಬ ವ್ಯಕ್ತಿ ಜೊತೆ ಫೇಸ್ ಬುಕ್‌ನಲ್ಲಿ ಸಂಪರ್ಕ ಇಟ್ಟು ಗೆಳೆಯರಾಗಿದ್ದರು. ಈ ಗೆಳೆತನ ಪ್ರೀತಿಗೆ ತಿರುಗಿತು. ವಿಧವೆಯಾಗಿರುವ ಲಕ್ಷ್ಮಿಗೆ ತಾನು ಬಾಳು ಕೊಡುವುದಾಗಿ ಹೇಳಿ ಕಳೆದ 20 ದಿನಗಳ ಹಿಂದೆ ಲಕ್ಷ್ಮಿಯನ್ನು ಶ್ರೀನಿವಾಸ್ ಮಂಗಳೂರಿಗೆ ಕರೆದು
ಕೊಂಡು ಹೋಗಿದ್ದ ಎಂದು ಆಪ್ತ ಮೂಲಗಳು ಹೇಳಿವೆ.

ಅಧಿಕಾರಕ್ಕಾಗಿ JDS ಗೇಮ್ ಪ್ಲಾನ್ ಬದಲು

ಅಜ್ಜಿ ಸಾವಿತ್ರಮ್ಮ ತನ್ನ ಕುಟುಂಬದ ಗೌರವ, ಘಟನೆಗೆ ಮಗಳು ಲಕ್ಷ್ಮಿ ಮಸಿ ಬಳಿದಳು. ಬಡವರಾದರೂ ಸರಿ ಮರ್ಯಾದೆ ಮುಖ್ಯವಾಗಿತ್ತು ಎಂದು ಮಾನಸಿಕವಾಗಿ ವ್ಯಥ್ಯೆಗೆ ಒಳಗಾದ ವಿತ್ರಮ್ಮ ಊಯ್ಗೋನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಪ್ರಜ್ವಲ್‌ನನ್ನು ನೆನ್ನೆ ಸಂಜೆ ಸಿಂಧಘಟ್ಟ ಕೆರೆ ದಂಡೆಗೆ ಕರೆದುಕೊಂಡು ಹೋಗಿ ಕೈ ಕಾಲು ಕಟ್ಟಿ ಕೆರೆಗೆ ಎಸೆದು ನಂತರ ತಾನು ಕೂಡ ಕೆರೆಗೆ ಹಾರಿದ್ದಾಳೆ.

ಅಜ್ಜಿ ಸಾವಿತ್ರಮ್ಮ ಹಾರಿದನ್ನು ನೋಡಿದ ಗ್ರಾಮಸ್ಥರು ಇಬ್ಬರನ್ನು ಬದುಕಿಸಲು ಮುಂದಾದರು. ಆದರೆ, ಬಾಲಕ ಸಾವನ್ನಪ್ಪಿದ್ದ. ಸಾವಿತ್ರಮ್ಮನನ್ನು ರಕ್ಷಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳ ನೆರವಿನಿಂದ ಮಂಗಳವಾರ ಬೆಳಗ್ಗೆ ಪ್ರಜ್ವಲ್ ಶವವನ್ನು ಕೆರೆ ಮೇಲೆತ್ತಲಾಯಿತು.

ಮಂಡ್ಯ: ನಿಖಿಲ್ ಸ್ಪರ್ಧೆ ಸುತರಾಂ ಇಷ್ಟವಿರಲಿಲ್ಲ ಎಂದ ಮಾಜಿ ಶಾಸಕ

ಕೈ ಕಾಲು ಕಟ್ಟಿ ರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಈ ನಡುವೆ ಈ ಘಟನೆಯ ಬಗ್ಗೆ ಅನೇಕ ಸಂಶಯಗಳನ್ನು ವ್ಯಕ್ತಪಡಿಸಿರುವ ಪೊಲೀಸರು ಲಕ್ಷ್ಮಿ ಹಾಗೂ ಫೇಸ್ ಬುಕ್ ಪ್ರಿಯಕರ ಶ್ರೀನಿವಾಸ್ ಇಬ್ಬರು ಶಾಮೀಲಾಗಿ ಮಗನ ಕೈ ಕಾಲು ಕಟ್ಟಿ ಕೆರೆಗೆ ಬಿಸಾಕಿರಬಹುದೇ ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಅಜ್ಜಿ ಸಾವಿತ್ರಮ್ಮರನ್ನು ವಿಚಾರಿಸುತ್ತಿದ್ದಾರೆ. ನಂತರ ಲಕ್ಷ್ಮಿ ಮತ್ತು ಪ್ರಿಯಕರನನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ನಂಬರ್ ಬ್ಲಾಕ್ ಮಾಡಿದ್ದಕ್ಕೆ ನೊಂದು ಯುವತಿ ಆತ್ಮಹತ್ಯೆ

[ಸಮಸ್ಯೆಗಳು ಜೀವನದ ಅವಿಭಾಜ್ಯ ಅಂಗ. ಸಮಸ್ಯೆಯಿಲ್ಲದ ಮನುಷ್ಯನಿಲ್ಲ. ಯಾವುದೇ ಸಮಸ್ಯೆ ಜೀವನದ ಅಂತ್ಯವಲ್ಲ. ಆತ್ಮಹತ್ಯೆ ಆಲೋಚನೆ ಹೊಳೆದರೆ ಸರ್ಕಾರದ ಸಹಾಯವಾಣಿಗೆ ಕರೆ ಮಾಡಿ: 080 25497777 ಅಥವಾ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಿ]

Follow Us:
Download App:
  • android
  • ios