ಶತಾಯುಷಿ ತಾಯಿಯ ನಿಧನದ ಸುದ್ದಿ ಕೇಳಿ ಅಂತ್ಯಕ್ರಿಯೆಗೆ ಬಂದ ಮಗಳು, ತಾಯಿಯ ಶವವನ್ನು ಕಂಡು ಆಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಹೃದಯವಿದ್ರಾವಕ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ನಡೆದಿದೆ.

ಕಾಗವಾಡ (ಮೇ.31): ಅಗಲಿದ ತಾಯಿಯ ಕಂಡು ಆಘಾತಕ್ಕೊಳಗಾದ ಮಗಳು ತಾಯಿಯ ಶವದ ಎದುರೇ ಪ್ರಾಣ ಬಿಟ್ಟ ಘಟನೆ ಸಂಭವಿಸಿದೆ. ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮ(Parthanahalli village)ದ 76 ವರ್ಷದ ಹಣಮವ್ವ ರಾಮು ಮುಜಗೋಣಿ(Hanamvva Ramu Mujagoni) ಸಾವನ್ನಪ್ಪಿದ ಮಗಳು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶತಾಯುಷಿ ತಾಯಿ ಸಾವು ತಂದ ಆಘಾತ

ಬಾಗಲಕೋಟ(Bagalkote) ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮTodalubagi village(ದಲ್ಲಿ ವಾಸವಾಗಿರುವ ಶತಾಯುಷಿ, ತಾಯಿ ಗಂಗವ್ವ ಚನ್ನಬಸಪ್ಪ ಪಾರ್ಥಹನಳ್ಳಿ(101) ಇವರು ಶುಕ್ರವಾರ ವಯೋಸಹಜವಾಗಿ ನಿಧನರಾಗಿದ್ದರು. ತಾಯಿಯ ಸಾವಿನ ಸುದ್ದಿ ತಿಳಿದು ಹಣಮವ್ವ ಶುಕ್ರವಾರ ತನ್ನ ಮಕ್ಕಳೊಂದಿಗೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೊದಲಬಾಗಿಗೆ ತೆರಳಿದ್ದಳು. ಆದರೆ, ಅಲ್ಲಿ ತಾಯಿಯ ಶವ ಕಂಡು ಆಘಾತಕ್ಕೊಳಗಾದ ಹಣಮವ್ವ ಕುಸಿದು ಬಿದ್ದಿದ್ದು, ಆಕೆಯೂ ಸಹ ತಾಯಿಯೊಂದಿಗೆ ಇಹಲೋಕ ತ್ಯಜಿಸಿದ್ದಾರೆ.

ಮೃತ ಹಣುಮವ್ವನನ್ನು ಅಥಣಿ ತಾಲೂಕಿನ ಪಾರ್ಥನಳ್ಳಿ ಗ್ರಾಮಕ್ಕೆ ವಿವಾಹ ಮಾಡಿ ಕೊಟ್ಟಿದ್ದರು. ಅವರಿಗೆ ಮೂರು ಜನ ಗಂಡು ಮಕ್ಕಳು ಅಪಾರ ಬಂಧು ಬಳಗವಿದೆ. ಅವರ ಅಂತ್ಯಕ್ರಿಯೆ ಶನಿವಾರ ನೆರವೇರಿತು.