ಅರಸೀಕೆರೆ(ಜೂ.06): ತಾಲೂಕಿನ ಗಂಡಸಿ ಹೊಬಳಿ ದಾಸೇನಹಳ್ಳಿ ಗ್ರಾಮದ ಪೊಲೀಸ್‌ ಪೇದೆಗೆ ಕೊರೋನಾ ಪಾಸಿಟಿವ್‌ ಪತ್ತೆಯಾಗಿದ್ದು, ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿ ನೀಡಿದ ತಹಸೀಲ್ದಾರ್‌ ಸಂತೋಷ್‌ ಕುಮಾರ್‌, ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಪೊಲೀಸ್‌ ಠಾಣೆಯ ಪೇದೆಯೊಬ್ಬರಿಗೆ ಕೊರೋನಾ ಸೋಂಕು ಧೃಡವಾಗಿದೆ. ಪೇದೆಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಗ್ರಾಮದ 5 ಮಂದಿಯನ್ನು ಕ್ವಾರೆಂಟೈನ್‌ ಮಾಡಲಾಗಿದೆ ಎಂದರು.

ಹಾಸನದಲ್ಲಿ ಕೊರೋನಾ ಗೆದ್ದು ಬಂದ ಪೊಲೀಸರಿಗೆ ಅದ್ಧೂರಿ ಸ್ವಾಗತ

ಜಿಪಂ ಸದಸ್ಯ ಪಟೇಲ್‌ ಶಿವಪ್ಪ ದಾಸೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿ, ಕೊವೀಡ್‌ 19 ಸೋಂಕಿಗೆ ಹೆದರುವ ಅಗತ್ಯವಿಲ್ಲ. ಆದರೆ, ಎಚ್ಚರಿಗೆಯಿಂದ ಇರಬೇಕು ಎಂದು ಧೈರ್ಯ ತುಂಬಿದರು. ಇದೇ ವೇಳೆ ಗ್ರಾಮಸ್ಥರಿಗೆ ಉಚಿತವಾಗಿ ಮುಖಗವಸು ಹಾಗೂ ಸ್ಯಾನಿಟೈಸರ್‌ ವಿತರಿಸಿದರು.

ತಾಪಂ ಇಒ ನಟರಾಜ್‌, ಜಿಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ತಾಲೂಕು ಆರೋಗ್ಯಾಧಿಕಾರಿ ನಾಗಪ್ಪ, ಮುದುಡಿ ಗ್ರಾಪಂ ಅಧ್ಯಕ್ಷ ಕೃಷ್ಣನಾಯ್ಕ, ಸದಸ್ಯ ಬಸವರಾಜ್‌, ವೆಂಕಟೇಶ್‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.