ಹಾಸನ, (ಜೂನ್.03):  ಓರ್ವ ಎಸ್‍ಐ ಸೇರಿದಂತೆ ನಾಲ್ವರು ಪೊಲೀಸರು ಇಂದು (ಬುಧವಾರ) ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.

ಕೊರೋನಾ ಗೆದ್ದು ಬಂದ ಪೊಲೀಸರಿಗೆ ಹಾಸನದ ಹಿಮ್ಸ್ ಆಸ್ಪತ್ರೆಯ ಮುಂಭಾಗ ಹಾರ ಹಾಕಿ, ಹೂ ಬೊಕ್ಕೆ ಕೊಟ್ಟು ಭವ್ಯ ಸ್ವಾಗತ ಕೋರಲಾಯಿತು. ಅಷ್ಟೇ ಅಲ್ಲದೇ ಪೊಲೀಸ್ ಬ್ಯಾಂಡ್ ಮೂಲಕ ಕೊರೋನಾ ನಾ ಗೆದ್ದು ಬಂದ ಕೊರೋನಾ ವಾರಿಯರ್ಸ್‌ಗೆ ಗೌರವ ಸಲ್ಲಿಸಲಾಯ್ತು. 

5 ಪೊಲೀಸರಿಗೆ ಸೋಂಕು: 6 ಠಾಣೆ ಸೀಲ್‌ಡೌನ್‌, 200ಕ್ಕೂ ಅಧಿಕ ಸಿಬ್ಬಂದಿ ಕ್ವಾರಂಟೈನ್‌! .

ನಮ್ಮ ಪೊಲೀಸರು ಗುಣಮುಖರಾಗಿರುವುದು ಹೆಚ್ಚಾಗಿ ಕರ್ತವ್ಯ ನಿರ್ವಹಿಸಲು ಶಕ್ತಿ ಹೆಚ್ಚಿಸಿದೆ ಎಂದು ಪೊಲೀಸ್ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದರು.

ಈ ವೇಳೆ ಸಂತಸ ಹಂಚಿಕೊಂಡ ದಕ್ಷಿಣ ವಲಯ ಐಜಿ ವಿಫುಲ್ ಕುಮಾರ್, ನಮ್ಮ‌ ಪೊಲೀಸರು ಗುಣಮುಖರಾಗಿರುವುದು ಕರ್ತವ್ಯ ನಿರ್ವಹಿಸಲು ಮತ್ತಷ್ಟು ಶಕ್ತಿ ಹೆಚ್ಚಿಸಿದೆ. ಪೊಲೀಸರ ಕೆಲಸ ಮತ್ತು ಶ್ರಮದ ಬಗ್ಗೆ ಹೆಮ್ಮೆ ಇದೆ.  ಅಲ್ಲದೆ, ನಮ್ಮ ಆಸ್ಪತ್ರೆ ಸಿಬ್ಬಂದಿಗೆ ಋಣಿಯಾಗಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಕೊರೋನಾ ಗೆದ್ದು ಬಂದ ಎಸ್‍ಐ ಕುಮಾರ್, ಮೊದಲು ಕೊರೋನಾ ಪಾಸಿಟಿವ್ ಬಂದಾಗ ಭಯ ಆಯ್ತು. ಒಂದೆರೆಡು ದಿನದಲ್ಲಿ ಹಂತ ಹಂತವಾಗಿ ಭಯ ಹೋಯ್ತು. ತಾವು ಗುಣಮುಖರಾಗಲು ಸಹಾಯ ಮಾಡಿ, ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಹಾಸನದಲ್ಲಿ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಪಿಎಸ್‌ಐ ಒಬ್ಬರಿಗೆ ಕೊರೋನಾ ಸೋಂಕು ತಗುಲಿತ್ತು. ಕರೋನಾ ವಾರಿಯರ್ಸ್ ಗಳಿಗೇ ಸೋಂಕು ತಗುಲಿದ್ದು ಬಾರೀ ಆಘಾತ ಉಂಟು ಮಾಡಿತ್ತು. ಪಿಎಸ್ ಐ ಸೇರಿ ಪೇದೆಗಳಿಗೆ ಕರೋನಾ ಸೋಂಕು ತಗುಲಿದ್ದರಿಂದ ಇಡೀ ಜಿಲ್ಲೆಯ ಜನ ಆಂತಕಕ್ಕೀಡಾಗಿದ್ದರು. ಆದರೆ, ಈಗ ಈ ಪಿಎಸ್‌ಐ ಸೇರಿ ಮೂವರು ಪೇದೆಗಳು ಕರೋನಾ ಗೆದ್ದು ಬಂದಿದ್ದಾರೆ.