ಮೈಸೂರು(ಸೆ.27): ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ 2019-20ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಈ ಬಾರಿಯ ಪ್ರಮುಖ ಆಕರ್ಷಣೆಯಾಗಿ ಶ್ರೀ ಜಯಚಾಮರಾಜ ಒಡೆಯರ್‌ ಅವರ 100ನೇ ಜನ್ಮ ಶತಾಬ್ದಿ ಅಂಗವಾಗಿ ಹಾರ್ಡಿಂಜ್‌ ವೃತ್ತದಲ್ಲಿನ ಜಯಚಾಮರಾಜೇಂದ್ರ ಒಡೆಯರ್‌ ಪ್ರತಿಮೆ ಮತ್ತು ಗೋಪುರವನ್ನು ಹೂವಿನಿಂದ ನಿರ್ಮಿಸಲಾಗುತ್ತಿದೆ.

ಇಲ್ಲಿನ ಗ್ಲಾಸ್‌ಹೌಸ್‌ನಲ್ಲಿ ಭೂಮಟ್ಟದಿಂದ 50 ಅಡಿ ಉದ್ದ, 27 ಅಡಿ ಎತ್ತರವಿರುವ ಪ್ರತಿಕೃತಿ ರಚಿಸುತ್ತಿದ್ದು, 12 ಅಡಿ ವ್ಯಾಸದ ವೃತ್ತ ನಿರ್ಮಿಸಲಾಗುತ್ತಿದೆ. ವಿವಿಧ ಬಣ್ಣದ ಗುಲಾಬಿ ಹೂವುಗಳಿಂದ ಈ ಮಾದರಿ ನಿರ್ಮಿಸಲಾಗುವುದು. ಅಂತೆಯೇ ಸಾರ್ವಜನಿಕರು ಮತ್ತು ಮಕ್ಕಳ ಆಕರ್ಷಣೆಯ ಡೊನಾಲ್ಡ್‌ ಡಕ್‌ ನಿರ್ಮಿಸುತ್ತಿದ್ದು, ಇದು 8 ರಿಂದ 9 ಅಡಿ ಎತ್ತರ, 6.5 ಅಡಿ ಎತ್ತರವಿದ್ದು, ಕ್ರಿಕೆಟ್‌ ಬಾಲ್‌ ಮತ್ತು ಬ್ಯಾಟ್‌ ಕೂಡ ಇದರೊಡನೆ ಹೂವಿನಿಂದಲೇ ನಿರ್ಮಿಸಲಾಗುತ್ತಿದೆ. 15 ಅಡಿ ಎತ್ತರ ಮತ್ತು 6 ಅಡಿ ವ್ಯಾಸದಲ್ಲಿ ಚಂದ್ರಯಾನ, ಏರ್‌ ಶೋ ಮಾದರಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ. ರುದ್ರೇಶ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

29ರಂದು ಉದ್ಘಾಟನೆ:

ಸೆ. 29 ರಂದು ಸಂಜೆ 4 ಗಂಟೆಗೆ ಫಲಪುಷ್ಪ ಪ್ರದರ್ಶನ ಉದ್ಘಾಟನೆಗೊಳ್ಳಲಿದ್ದು, ಅ. 9 ರಂದು ಸಂಜೆ 4ಕ್ಕೆ ಮುಕ್ತಾಯ ಸಮಾರಂಭ ಮತ್ತು ಬಹುಮಾನ ವಿತರಣೆ ಇರುತ್ತದೆ. ಇಕೆಬಾನ, ಕಟ್‌ ಫ್ಲವರ್‌, ಡ್ರೈ ಫ್ಲವರ್‌, ಟೆರೋರಿಯಮ್‌ ಗಾರ್ಡನ್‌, ಮಿನಿಯೇಟರ್‌, ಪಾಟರಿ ಗಾರ್ಡನ್‌ ಕಾನ್ಸೆಪ್ಟ್‌ಗಳನ್ನು ನವೀನ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಯೂರೋಪಿಯನ್‌ ಶೈಲಿಯ ಉದ್ಯಾನವನಗಳಾದ ವರ್ಟಿಕಲ್‌ ಗಾರ್ಡನ್‌ ಅಲ್ಲದೆ ತೋಟಗಾರಿಕೆ ಇಲಾಖೆ ವತಿಯಿಂದ ಸುಮಾರು 40 ಸಾವಿರ ವಿವಿಧ ಜಾತಿಯ ಹೂವಿನ ಕುಂಡಗಳಲ್ಲಿ ಗಿಡಗಳನ್ನು ಬೆಳೆದು ಪ್ರದರ್ಶಿಸಲಾಗುತ್ತಿದೆ.

25,000ಕ್ಕೂ ಹೆಚ್ಚು ವಿಧದ ಹೂ, ಹಣ್ಣು:

ವಿವಿಧ ಮಾದರಿಯ ಹಾಡುಗಳಿಗೆ ನೃತ್ಯ ಪ್ರದರ್ಶಿಸುವ ಸಂಗೀತ ಕಾರಂಜಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬಿಇಎಂಎಲ್‌, ಬ್ರೇಕ್ಸ್‌ ಇಂಡಿಯಾ, ಅರಮನೆ ಮಂಡಳಿ, ಟೈಟಾನ್‌ ವಾಲ್ಸ್‌, ಜೆ.ಕೆ. ಟೈರ್ಸ್‌, ಮೈಸೂರು ಮಹಾನಗರ ಪಾಲಿಕೆ, ಭಾರತೀಯ ಆಯುರ್ವೇದ ಕಾಲೇಜು, ಜೆಎಸ್‌ಎಸ್‌ ಆಯುರ್ವೇದ ಕಾಲೇಜು ಮತ್ತು ಸಂಘ ಸಂಸ್ಥೆಗಳ ಸುಮಾರು 25,000ಕ್ಕೂ ಹೆಚ್ಚು ಜಾತಿಯ ಹೂವಿನ, ತರಕಾರಿ ಕುಂಡಗಳ ಪ್ರದರ್ಶನ ನಡೆಯಲಿದೆ ಎಂದು ಅವರು ವಿವರಿಸಿದರು.

ದಸರಾದಲ್ಲಿ ಬಾಡಿವೋರ್ನ್‌, 11 ಸಾವಿರಕ್ಕೂ ಹೆಚ್ಚು CCTV ಕಣ್ಗಾವಲು

ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಅವರ ಮನೋರಂಜನೆಗಾಗಿ ಡೊನಾಲ್ಡ್‌ ಡಕ್‌ ಎಂಬ ಪರಿಕಲ್ಪನೆಯೊಂದಿಗೆ ಹೂವಿನಿಂದ ಅಲಂಕರಿಸಲಾಗುತ್ತಿದ್ದು, ಮಕ್ಕಳನ್ನು ಕೈಬೀಸಿ ಕರೆಯುತ್ತಿದೆ. ಒಟ್ಟಾರೆ ಹೊಸ ಆಯಾಮದೊಂದಿಗೆ ಫಲಪುಷ್ಪ ಪ್ರದರ್ಶನ ರೂಪಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಫಲಪುಷ್ಪ ಪ್ರದರ್ಶನಕ್ಕೆ ಸಿಕೆಸಿ ಜ್ಯುವೆಲರ್ಸ್‌ ವತಿಯಿಂದ ಮೈಸೂರು ಸಿಂಹಾಸನ ಮತ್ತು ಎರಡು ಹೂವಿನ ಅಲಂಕಾರಿಕ ಹೂವಿನ ನಮನ, 1 ಕ್ಲಾಬ್‌ ಬೋರ್ಡ್‌, 1 ಕ್ಯಾಮರಾ ಮತ್ತು 1 ಸ್ಟೇಟ್‌ ಅವಾರ್ಡ್‌, 1 ಸೆಂಟ್ರಲ್‌ ಅವಾರ್ಡ್‌ ಮಾದರಿ ಪ್ರದರ್ಶನಗೊಳಿಸಲಾಗುತ್ತಿದೆ. ಅಲ್ಲದೆ ಪ್ರತಿದಿನವೂ ಫಲಪುಷ್ಪ ಪ್ರದರ್ಶನಕ್ಕೆ ಕನ್ನಡ ಚಲನಚಿತ್ರ ನಟರಾದ ಸೃಜನ್‌ ಲೋಕೇಶ್‌, ಅಜಯ್‌ರಾವ್‌, ಆದಿತ್ಯ, ರಾಜ್‌ ವರ್ಧನ್‌, ಬಾಲು ನಾಗೇಂದ್ರ, ಚೇತನ್‌ ಚಂದ್ರ, ನಟಿ ಹರಿಪ್ರಿಯ ಮತ್ತು ಕಲರ್ಸ್‌ ಕನ್ನಡ ಚಾಲನೆ ಧಾರವಾಯಿ ಕಲಾವಿದರು ಭಾಗವಹಿಸುವರು.

ವಿಶ್ವವಿಖ್ಯಾತ ಮೈಸೂರು ದಸರಾ ಹೊಸ್ತಿಲಲ್ಲಿ KS ಭಗವಾನ್ ಹೊಸ ವಿವಾದ

ತೋಟಗಾರಿಕೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿವಿಧ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಕಾಲೇಜು ವತಿಯಿಂದ ಫಲಪುಷ್ಪ ಪ್ರದರ್ಶನ ಆವರಣದಲ್ಲಿ ವಿವಿಧ ವಸ್ತು ಪ್ರದರ್ಶನ ಇರುತ್ತದೆ. ಜೆ.ಕೆ. ಟೈರ್ಸ್‌ ವತಿಯಿಂದ 2 ವಿಂಟೇಜ್‌ ಕಾರ್‌ ಮಾದರಿ, ಡೈರಿ ಡೇ ವತಿಯಿಂದ ಪಿಯಾನೋ ಮಾದರಿ ಮತ್ತು ಸುದರ್ಶನ್‌ ಸಿಲ್‌್ಕ ವತಿಯಿಂದ ದುಬೈನ ಮಿರಾಕರ್‌ ಗಾರ್ಡನ್‌ನ ಫೆä್ಲೕರಲ್‌ ಮಾದರಿ ಮತ್ತು ಸಿಕೆಸಿ ಜ್ಯುವೆಲ್ಲರ್ಸ್‌ ವತಿಯಿಂದ ಸಿಂಹಾಸನ ಮತ್ತು 2 ಆನೆ ಮಾದರಿ ಇರುತ್ತದೆ.

ಪ್ರವೇಶ ಶಲ್ಕ

ಸೆ. 30 ರಂದು ಫಲಪುಷ್ಪ ಪ್ರದರ್ಶನ, ಅ. 1 ರಂದು ಪುಷ್ಪ ರಂಗೋಲಿ ಸ್ಪರ್ಧೆ, 2 ರಂದು ಫಲಪುಷ್ಪ ಪ್ರದರ್ಶನ, 3 ರಂದು ಭಾರತೀಯ ಪುಷ್ಪಕಲಾ ಸ್ಪರ್ಧೆ, 6 ರಂದು ಚಿತ್ರಕಲಾ ಸ್ಪರ್ಧೆ ಇರುತ್ತದೆ. ಪ್ರವೇಶ ದರವನ್ನು 30 ನಿಗದಿಪಡಿಸಲಾಗಿದೆ.

ದಸರಾ ಆಹಾರ ಮೇಳದಲ್ಲಿ ಏಡಿ ಸಾರು, ಬಿದಿರು ಕಳ್ಳೆ ಪಲ್ಯ..!

ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕಿ ಹಬೀಬಾ ನಿಶಾತ್‌, ತೋಟಗಾರಿಕೆ ಸಂಘದ ಉಪಾಧ್ಯಕ್ಷ ಡಾ.ಡಿ. ಪ್ರಭಾಮಂಡಲ್‌, ಖಜಾಂಚಿ ಎಚ್‌. ಹನುಮಯ್ಯ ಇದ್ದರು.

'ಸಂಸದ ಪ್ರತಾಪ್ ಸಿಂಹ ಹನುಮಂತನಿಗೆ ಹುಟ್ಟಿದವರಾ?'