ಮೈಸೂರು: (ಸೆ.19) ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಏರ್ಪಡಿಸುವ ಚಲನಚಿತ್ರೋತ್ಸವದ ಪ್ರದರ್ಶನಗಳು ಸೆ. 29 ರಿಂದ ಅ. 3 ರವರೆಗೆ ಐದು ದಿನಗಳ ಕಾಲ ನಡೆಯಲಿದ್ದು, 29ರ ಬೆಗ್ಗೆ 11ಕ್ಕೆ ಕಲಾಮಂದಿರದಲ್ಲಿ ನಡೆಯುವ ಚಲನಚಿತ್ರೋತ್ಸವವನ್ನು ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಉದ್ಘಾಟಿಸುವರು ಎಂದು ದಸರಾ ಚಲನಚಿತ್ರೋತ್ಸವ ಉಪ ವಿಶೇಷಾಧಿಕಾರಿ ಬಿ.ಎನ್‌. ಗಿರೀಶ್‌ ಹೇಳಿದರು.


ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಭಾಗವಹಿಸುವರು. ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ನಟ ಗೋಲ್ಡನ್‌ಸ್ಟಾರ್‌ ಗಣೇಶ್‌ ಹಾಗೂ ಚಲನಚಿತ್ರ ನಟಿ ಆಶಿಕಾ ರಂಗನಾಥ್‌ ಭಾಗವಹಿಸುವರು ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಚಲನಚಿತ್ರ ಪ್ರದರ್ಶನ- ಸೆ. 29 ರಿಂದ ಅ. 3ರವರೆಗೆ ಮಾಲ್‌ ಆಫ್‌ ಮೈಸೂರಿನಲ್ಲಿ ಐನಾಕ್ಸ್‌ ಮಲ್ಟಿಫ್ಲೆಕ್ಸ್‌ ಚಿತ್ರಮಂದಿರದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ಕನ್ನಡದ ಸಿನಿಮಾಗಳು ಸೇರಿದಂತೆ ಜನಪ್ರಿಯ ಕನ್ನಡ ಸಿನಿಮಾ, ಕಲಾತ್ಮಕ ಸಿನಿಮಾಗಳು, ರಾಷ್ಟ್ರಮಟ್ಟದಲ್ಲಿ ಜನಪ್ರಿಯಗೊಂಡಿರುವ ಭಾರತೀಯ ಸಿನಿಮಾಗಳು, ಪನೋರಮಾ, ವಿವಿಧ ದೇಶಗಳಲ್ಲಿ ನಿರ್ಮಾಣಗೊಂಡ ವಿಶ್ವದ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ ಎಂದು ತಿಳಿಸಿದರು. 

ಪಾಸ್‌ಗಳ ವ್ಯವಸ್ಥೆ- ಐದು ದಿನಗಳ ನಡೆಯುವ ಚಲನಚಿತ್ರ ಪ್ರದರ್ಶನಕ್ಕೆ ಪಾಸ್‌ಗಳನ್ನು ವ್ಯವಸ್ಥೆ ಮಾಡಿದ್ದು. ಎಲ್ಲ ಐದು ದಿನಗಳ ಪ್ರದರ್ಶನದ 60 ಶೋಗಳಿಗೆ 400 ರು., ಮಕ್ಕಳಿಗೆ 200 ರು. ಹಾಗೂ ದಿನದ ನಾಲ್ಕು ಶೋಗಳಿದೆ 100 ರು. ನ ಪಾಸ್‌ಗಳನ್ನು ದೊರೆಯಲಿದೆ. ಮಾಹಿತಿಗಾಗಿ ಮನು, ಮೊ. 9448092049, ಎಸ್‌.ಜಿ. ಡಾ. ರಾಘವೇಂದ್ರ, ಮೊ. 9964585008 ಸಂಪರ್ಕಿಸಿ ಎಂದು ಮಾಹಿತಿ ನೀಡಿದರು. 
ಈ ವೇಳೆಯಲ್ಲಿ ಕಾರ್ಯಾಧ್ಯಕ್ಷ ಬಿ.ಜಿ. ಗೋವಿಂದರಾಜು, ಕಾರ್ಯದರ್ಶಿ ಆರ್‌. ರಾಜು, ಪ್ರಾಂಶುಪಾಲ ಗೋವಿಂದರಾಜು ಉಪಸ್ಥಿತರಿದ್ದರು .