ಮೈಸೂರು(ಅ.25): ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಪೊಲೀಸ್ ಇಲಾಖೆಯಿಂದ ಫಿರಂಗಿ ಗಾಡಿಗಳಿಗೆ ಪೂಜೆ ಸಲ್ಲಿಸಲಾಗಿದೆ.  
 
ದಸರಾ ಹಿನ್ನೆಲೆಯಲ್ಲಿ ಅರಮನೆಯ ಆನೆಬಾಗಿಲು ದ್ವಾರದಲ್ಲಿ ಫಿರಂಗಿ ಗಾಡಿಗಳಿಗೆ ಪೂಜೆ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಸಾಂಪ್ರದಾಯಿಕವಾದ ಪೂಜೆ ಸಲ್ಲಿಸಿದ್ದಾರೆ.  ಅತ್ಯಂತ ಕಡಿಮೆ ಸಿಬ್ಬಂದಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು. 
 
ಇನ್ನು  ಮೈಸೂರು ರಾಜಮನೆತನದಿಂದ ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಿದ್ದು, ಯದುವಂಶದ ಮಹಾರಾಜ ಯದುವೀರ್ ಒಡೆಯರ್‌  ಆಯುಧ ಪೂಜೆ ಮಾಡಿದ್ದಾರೆ. 

ಮೈಸೂರು ದಸರೆ: ಈ ಸಂಪ್ರದಾಯ ಇಲ್ಲದೇ ‘ನಾಡಹಬ್ಬ’ಕ್ಕೆ ಬೀಳಲಿದೆ ತೆರೆ .

ಅರಮನೆಯ ಕಲ್ಯಾಣ ಮಂಟಪದಲ್ಲಿ ಖಾಸಾ ಆಯುಧಗಳಿಗೆ ಪೂಜೆ ಮಾಡಲಾಗಿದ್ದು, ನಂತರ ಸವಾರಿತೊಟ್ಟಿಯಲ್ಲಿ ಅರಮನೆಯ ವಾಹನಗಳು ಹಾಗೂ ಪ್ರಾಣಿಗಳಿಗೆ ಪೂಜೆ ಮಾಡಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸರಳವಾಗಿ ಆಯುಧಪೂಜೆ ಮಾಡಲಾಗಿದೆ. 

ಆಯುಧ ಪೂಜೆಗಾಗಿ ಆನೆ ಬಾಗಿಲು ಬಳಿ‌  ಪಟ್ಟದ ಆನೆ ಕುದುರೆ ಒಂಟೆಗಳಿಗೂ 10.50ರಿಂದ 11.15 ಶುಭಲಗ್ನದಲ್ಲಿ ಆಯುಧಪೂಜೆ ನೆರವೇರಿಸಲಾಗಿದೆ.

ಅರಮನೆ ಒಳಗೆ ಸಂಪೂರ್ಣ ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದ್ದು 35 ಮಂದಿ ಸಿಬ್ಬಂದಿ ಭಾಗಿಯಾಗುತ್ತಿದ್ದ ಕಾರ್ಯಕ್ರಮದಲ್ಲಿ ಕೇವಲ 7 ರಿಂದ 8 ಮಂದಿ ಭಾಗಿಯಾಗಿದ್ದರು.