ಯಾದಗಿರಿಯಲ್ಲಿ ಅಂತ್ಯ ಸಂಸ್ಕಾರಕ್ಕಾಗಿ ಹೆಣಗಾಟ!
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ತೆಗ್ಗೆಳ್ಳಿ ಗ್ರಾಮದ ಭೀಮರಾಯ ಹಾದಿಮನಿ ಎಂಬ ವ್ಯಕ್ತಿ ಮೃತಪಟ್ಟಾಗ ಅಂತಿಮ ಸಂಸ್ಕಾರಕ್ಕೆ ಹಳ್ಳವನ್ನು ದಾಟಬೇಕಾದ ಅನಿವಾರ್ಯತೆ ಎದುರಾಯ್ತು. ಸ್ಥಳೀಯ ಅಧಿಕಾರಿಗಳ ವಿರುದ್ದ ಮೃತ ಕುಟುಂಬಸ್ಥರ ಆಕ್ರೋಶ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ (ಸೆ.19): ಹುಟ್ಟಿದ ಮನುಷ್ಯ ಸಾಯಲೇಬೇಕು. ಸತ್ತಾಗ ಆ ಮನುಷ್ಯನಿಗ ನೆಮ್ಮದಿಯಾಗಿ ಅಂತ್ಯ ಸಂಸ್ಕಾರ ಮಾಡಿ ಗೌರವಯುತವಾಗಿ ಆತನನ್ನು ಕಳುಹಿಸಿ ಕೊಡಬೇಕು. ಆದ್ರೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ತೆಗ್ಗೆಳ್ಳಿ ಗ್ರಾಮದ ಭೀಮರಾಯ ಹಾದಿಮನಿ ಎಂಬ ವ್ಯಕ್ತಿ ಮೃತಪಟ್ಟಾಗ ಅಂತಿಮ ಸಂಸ್ಕಾರಕ್ಕೆ ಹಳ್ಳವನ್ನು ದಾಟಬೇಕಾದ ಪರದಾಟ ಎದುರಾಗಿದೆ. ಹೆಗಲ ಮೇಲೆ ಶವವನ್ನು ಹೊತೈದು ಎದೆಯ ಭಾಗದವರೆಗಿನ ನೀರಲ್ಲಿ ಹಳ್ಳವನ್ನು ದಾಟಿ ಶವ ಹೊತ್ತೊಯ್ದ ಘಟನೆ ನಡೆದಿದೆ. ಒಂದು ಕುಟುಂಬದಲ್ಲಿ ಒಬ್ಬ ಮನುಷ್ಯ ಸತ್ತಾಗ ಅವರ ನೋವು ಹೇಳ ತಿರಲಾಗದು. ಆದ್ರೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ತೆಗ್ಗೆಳ್ಳಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ತೆಗ್ಗೆಳ್ಳಿ ಗ್ರಾಮದ ದಲಿತ ಕುಟುಂಬಗಳಿಗೆ ಸಾವು ಈಗ ದುಃಖಕರ ಸಂಗತಿಯಾಗಿ ಉಳಿದಿಲ್ಲ, ಆದ್ರೆ ತೆಗ್ಗೆಳ್ಳಿ ಗ್ರಾಮದ ದಲಿತ ಕುಟುಂಬಗಳ ದುಃಖದ ಕಡಲು ಒಡೆದಿದೆ. ಇದರಿಂದಾಗಿ ತಗ್ಗೆಳ್ಳಿ ಗ್ರಾಮದ ದಲಿತ ಕುಟುಂಬಗಳಿಗೆ ಆತಂಕ ಎದುರಾಗಿದೆ. ಇತ್ತೀಚಿಗೆ ತೆಗ್ಗೆಳ್ಳಿ ಗ್ರಾಮದ ಭೀಮರಾಯ ಹಾದಿಮನಿ ಎಂಬ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದರು, ಇವರ ಅಂತಿಮ ಸಂಸ್ಕಾರಗಾಗಿ ದಲಿತರು ಹೆಣಗಾಟ ನಡೆಸಿದ್ದಾರೆ. ಶವ ಸಂಸ್ಕಾರಕ್ಕೆ ತೆಗ್ಗೆಳ್ಳಿ ಗ್ರಾಮದ ಹೊರಭಾಗದಲ್ಲಿರುವ ಹಳ್ಳವನ್ನು ದಾಟಿ ಹೋಗಬೇಕಾಗಿದ್ದು, ಅನಿವಾರ್ಯವಾಗಿ ಮೃತ ವ್ಯಕ್ತಿ ಭೀಮರಾಯ ಹಾದಿಮನಿ ಕುಟುಂಬಸ್ಥರು, ಸಂಬಂಧಿಕರು ಹಾಗೂ ಗ್ರಾಮಸ್ಥರು ಎದೆಯ ಮಟ್ಟದವರೆಗಿನ ಹಳ್ಳದ ನೀರನ್ನು ದಾಟಿ ಶವ ಸಂಸ್ಕಾರ ಮಾಡಿದ್ದಾರೆ.
ದಲಿತ ಕುಟುಂಬಸ್ಥರು ಮೃತ ಪಟ್ಟಾಗ ಸಂಕಷ್ಟ!
ಯಾವುದೇ ಜಾತಿ-ಧರ್ಮವರಿದ್ದರೂ ಅವರಿಗೆ ಅವರದೇಯಾದ ಮರ್ಯಾದೆ, ಗೌರ ಇರುತ್ತದೆ, ಆದ್ರೆ ಯಾದಗಿರಿ ಜಿಲ್ಲೆಯಲ್ಲಿ ಈ ಘಟನೆಯಿಂದ ದಲಿತರು ಸಂಕಷ್ಟ ಎದುರಿಸುತ್ತಿದ್ದಾರೆ ಪ್ರಶ್ನೆ ಹುಟ್ಟಿದೆ, ಯಾಕಂದ್ರೆ ತೆಗ್ಗೆಳ್ಳಿ ಗ್ರಾಮದಲ್ಲಿ 50 ದಲಿತ ಕುಟುಂಬಗಳಿವೆ. ಈ ದಲಿತ ಕುಟುಂಬಸ್ಥರು ಪರಿಸ್ಥತಿ ಹೇಳ ತೀರದಾಗಿದೆ. ದಲಿತರ ಕುಟುಂಬಸ್ಥರಲ್ಲಿ ಯಾರಾದ್ರು ಮೃತ ಪಟ್ರೆ ಭಯ, ಆತಂಕ ಅನುಭವಿಸುವಂತಾಗುತ್ತದೆ.
ಕುಟುಂಬದಲ್ಲಿ ಯಾರಾದ್ರೂ ಮೃತ ಪಟ್ರೆ ಎಲ್ಲಿ ಅಂತ್ಯ ಸಂಸ್ಕಾರ ಮಾಡೋದು ಅಂತ ಮೃತ ಕುಟುಂಬಸ್ಥರಲ್ಲಿ ಸಮಸ್ಯೆ ಕಾಡುತ್ತದೆ. ಒಂದು ಕಡೆ ವ್ಯಕ್ತಿ ಮೃತಪಟ್ರೆ, ಇನ್ನೊಂದು ಕಡೆ ತೆಗ್ಗೆಳ್ಳಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರಕ್ಕೆ ಸ್ಮಶಾನಕ್ಕೆ ತೆರಳಲು ಜಮೀನು ಮಾಲೀಕರು ದಾರಿ ಇಲ್ಲ ಬೇರೆ ಕಡೆ ತೆಗೆದುಕೊಂಡು ಹೋಗಿ ಮಣ್ಣು ಮಾಡಿ ಎಂದು ಹೇಳುತ್ತಿರುವುದು ದಲಿತ ಕುಟುಂಬಗಳಿಗೆ ದುಃಖದ ಮೇಲೆ ದುಃಖ ಬಂದಾಗುತ್ತದೆ. ಮನುಷ್ಯ ಸತ್ತ ಮೇಲು ಆತನಿಗೆ ಗೌರವ ಇಲ್ಲವಲ್ಲ ಎಂಬ ನೋವು ಕಾಡ ತೊಡಗಿದೆ.
ಬೆಳಗಾವಿ: ಬೆಕ್ಕೇರಿಯಲ್ಲಿ ಸ್ಮಶಾನಭೂಮಿಯೇ ಕಾಣೆ..!
ಮಳೆಯಿಂದ ತುಂಬಿದ ಹಳ್ಳ, ಅಂತ್ಯ ಸಂಸ್ಕಾರಕ್ಕೆ ಅಡ್ಡಿ: ಯಾದಗಿರಿ ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ, ಹಾಗಾಗಿ ಜಿಲ್ಲೆಯ ಹಲವು ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಜೊತೆಗೆ ಹುಣಸಗಿ ತಾಲೂಕಿನ ತೆಗ್ಗೆಳ್ಳಿ ಗ್ರಾಮದ ಹಳ್ಳ ಕೂಡ ತುಂಬಿ ಹರಿಯುತ್ತಿತ್ತು, ಈ ಸಂದರ್ಭದಲ್ಲಿ ಭೀಮರಾಯ ಹಾದಿಮನಿ ಎಂಬ ವ್ಯಕ್ತಿ ಮೃತಪಟ್ಟಿರುವುದರಿಂದ ಹಳ್ಳ ದಾಟಿ ಹೋಗಿ ಶವ ಸಂಸ್ಕಾರ ಮಾಡಲು ಹೆಣಗಾಟ ಮಾಡಬೇಕಾಯಿತು. ದಲಿತರಿಗಾಗಿ ಹಳ್ಳದ ಪಕ್ಕದಲ್ಲಿ ಜಾಗ ಒದಗಿಸಲಾಗಿದೆ.
ಬೆಳಗಾವಿ: 1,146 ಗ್ರಾಪಂಗೆ ಸ್ಮಶಾನ ಭೂಮಿ ಮಂಜೂರು..!
ಹಳ್ಳ ತುಂಬಿರುವುದರಿಂದ ಈ ರೀತಿಯಾಗಿ ಅನಾನುಕೂಲ ಅನುಭವಿಸುವಂತಾಗಿದೆ. ಮೃತ ವ್ಯಕ್ತಿ ಭೀಮರಾಯ ಹಾದಿಮನಿ ಪುತ್ರ ಸಿದ್ದು ಮಾತನಾಡಿ, ದಲಿತರಲ್ಲಿ ಯಾರಾದ್ರು ಸತ್ರೆ ಸಾಕಷ್ಟು ತೊಂದ್ರೆ ಆಗುತ್ತದೆ, ಸ್ಮಶಾನಕ್ಕೆ ಹೋಗಲು ಮುಳ್ಳು-ಕಂಟೆಗಳಿದ್ದು, ಹಳ್ಲಕ್ಕೆ ಸೇತುವೆ ಇಲ್ಲದ ಕಾರಣ ಹಳ್ಳ ದಾಟಿ ಹೋಗಬೇಕಾಗಿದೆ. ಇದರ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿಕೊಂಡ್ರು ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.