ದುಬೈಯಿಂದ ಮಂಗಳೂರಿಗೆ 31 ಡ್ಯೂರೂ ಆಕ್ಸಿಜನ್ ಸಿಲಿಂಡರ್
- ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಬರಲಿದೆ ದುಬೈನಿಂದ ಸುಮಾರು 1 ಕೋಟಿ ರು. ವೆಚ್ಚದ 31 ಡ್ಯೂರೂ ಆಕ್ಸಿಜನ್ ಸಿಲಿಂಡರ್
- ಕೊರೋನಾ ಸೋಂಕು ಉಲ್ಬಣಿಸಿದ ಕಾರಣ ಹೆಚ್ಚಾದ ಆಕ್ಸಿಜನ್ ಬೇಡಿಕೆ
- ಡ್ಯೂರೂ ಸಿಲೆಂಡರ್‌ಗಳಲ್ಲಿ ಹೆಚ್ಚಿನ ಆಕ್ಸಿಜನ್ ಶೇಖರಣೆ ಮಾಡಬಹುದಾದ ಸಾಮರ್ಥ್ಯ
ಮಂಗಳೂರು (ಮೇ.10): ಬಹರೇನ್‌ನಿಂದ ಕರಾವಳಿಗೆ 40 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆಗೊಂಡ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲಾಡಳಿತ ದುಬೈನಿಂದ ಸುಮಾರು 1 ಕೋಟಿ ರು. ವೆಚ್ಚದಲ್ಲಿ 31 ಡ್ಯೂರೂ ಆಕ್ಸಿಜನ್ ಸಿಲಿಂಡರ್‌ನ್ನು ತರಿಸಿಕೊಳ್ಳುತ್ತಿದೆ.
ಈ 31 ಸಿಲಿಂಡರ್‌ಗಳ ಪೈಕಿ ತಲಾ 8 ಸಿಲಿಂಡರ್‌ಗಳನ್ನು ತಾಲೂಕು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಿದ್ದು, ಉಳಿದ ಸಿಲಿಂಡರ್‌ಗಳನ್ನು ರೀ ಫಿಲ್ಲಿಂಗ್‌ಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಕೇಂದ್ರದ ಮನವಿಗೆ ಸುಪ್ರೀಂ ಅಸ್ತು, ಆಕ್ಸಿಜನ್ ಪೂರೈಕೆಗಾಗಿ ಟಾಸ್ಕ್ಫೋರ್ಸ್ ರಚನೆ ...
ಡ್ಯೂರೂ ಸಿಲೆಂಡರ್‌ಗಳಲ್ಲಿ ಹೆಚ್ಚಿನ ಆಕ್ಸಿಜನ್ ಶೇಖರಣೆ ಮಾಡಬಹುದಾಗಿದ್ದು ಅವುಗಳನ್ನು ತಾಲೂಕು ಆಸ್ಪತ್ರೆಗಳ ವೆಂಟಿಲೇಟರ್‌ಗಳ ಬಳಕೆಗೆ ನೀಡಬಹುದಾಗಿದೆ.
ಅವುಗಳು ಎರಡು ದಿನ ಬಳಕೆಗೆ ಬರುತ್ತವೆ. ಆಕ್ಸಿಜನ್ ಘಟಕಗಳ ಮೇಲುಸ್ತುವಾರಿಗೆ ಅಧಿಕಾರಿಗಳನ್ನು ದಿನದ 24 ಗಂಟೆ ಪಾಳಿಯ ಮೇಲೆ ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona