Asianet Suvarna News Asianet Suvarna News

ಬಂಟ್ವಾಳದಲ್ಲಿ ಕೆಸರುಗದ್ದೆ ಕ್ರೀಡಾಕೂಟ: ಕೆಸರಲ್ಲಿ ಮಕ್ಕಳಂತೆ ಆಡಿ ಸಂಭ್ರಮಿಸಿದ ದ.ಕ. ಜಿಲ್ಲಾಧಿಕಾರಿ..!

ರೈತ ದೇಶದ ಬೆನ್ನೆಲುಬು ಸಂತೋಷದಿಂದಿದ್ದರೆ ಇಡೀ ಜಗತ್ತೇ ಸಂತಸ ಪಡುವುದು, ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವುನೀಗಿಸುವರೈತಯಾವಾಗಲೂ ಸಂತೋಷವಾಗಿರಬೇಕು. ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ರೈತ ಬದುಕಬೇಕಾಗುತ್ತದೆ.ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ ಎಂದ ಜಿಲ್ಲಾಧಿಕಾರಿ ಮುಲೈಮುಗಿಲನ್ 

Dakshina Kannada District Collector played like children Kesarugadde Sports at Bantwal grg
Author
First Published Sep 25, 2024, 11:03 AM IST | Last Updated Sep 25, 2024, 11:03 AM IST

ಬಂಟ್ವಾಳ(ಸೆ.25):  'ಹಾಡು ಸಂತೋಷಕ್ಕೆ..ಕುಣಿದೂ.. ತಾಳಕ್ಕೆ .. ನಲಿದು....' ಎನ್ನುವ ಹಾಡು ತಾಸೆ ಸ್ವರದಲ್ಲಿ ಮೊಳಗುತ್ತಿದ್ದರೆ, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಮಕ್ಕಳ ಜೊತೆ ಮಕ್ಕಳಾಗಿ ಕೆಸರಿನಲ್ಲಿ ಕುಣಿಯುತ್ತಿದ್ದರು. ಇಡೀ ಗ್ರಾಮದ ಜನತೆ ಈ ಅಚ್ಚರಿಯ ದೃಶ್ಯವನ್ನು ಕಂಡು ಬೆರಗಾಗಿ, ತಾವೂ ಸಂಭ್ರಮಿಸಿದರು. "ಈ ಅಪೂರ್ವ ದೃಶ್ಯ ಕಂಡುಬಂದದ್ದು ಅನಂತಾಡಿ ಗ್ರಾಮದಲ್ಲಿ. 

ಇಲ್ಲಿನ ನವ ಭಾರತ್ ಯುವಕ ಸಂಘದ ವತಿಯಿಂದ ಪಡಿಪಿರೆ ಗದ್ದೆಯಲ್ಲಿ ಭಾನುವಾರ ಜರಗಿದ 6 ನೇ ವರ್ಷದ 'ಕೆಸರ್ದ ಕಂಡೊಡು ಕುಸಲ್ಪ ಗೊಬ್ಬುಲು' ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿ ಮುಲೈಮುಗಿಲನ್ ಅವರು, ಮಕ್ಕಳ ಜೊತೆ ಮಗುವಾಗಿ ಬೆರೆತರು. 

ಮಂಗ್ಳೂರು ಸರ್ಕಾರಿ ಉರ್ದು ಶಾಲೆಯಲ್ಲಿ ಬಿಹಾರಿ ಮಕ್ಕಳ ಕನ್ನಡ ಕಲಿಕೆ: ಅಕ್ಷರ ಕ್ರಾಂತಿಗೆ ಮುಂದಾದ ಶಿಕ್ಷಕಿ..!

ಇದೇ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ, ರೈತ ದೇಶದ ಬೆನ್ನೆಲುಬು ಸಂತೋಷದಿಂದಿದ್ದರೆ ಇಡೀ ಜಗತ್ತೇ ಸಂತಸ ಪಡುವುದು, ಪ್ರತಿಯೊಬ್ಬರ ಆಹಾರವನ್ನು ಪೂರೈಸಿ ಎಲ್ಲರ ಹಸಿವುನೀಗಿಸುವರೈತಯಾವಾಗಲೂ ಸಂತೋಷವಾಗಿರಬೇಕು. ಜಿಲ್ಲೆಯ ಹವಾಮಾನದ ಎಡರು ತೊಡರುಗಳನ್ನು ದಾಟಿ ರೈತ ಬದುಕಬೇಕಾಗುತ್ತದೆ.ಈ ನೆಲದ ಸಂಸ್ಕೃತಿಯು ಬೆಳೆದು ಬಂದಿರುವುದು ಗದ್ದೆಗಳಿಂದ ಎಂದರು. 

ಜಿಲ್ಲಾಧಿಕಾರಿ ಜೊತೆಗೆ ಅವರಪತ್ನಿ, ಮಗು ಕೂಡ ಕೆಸರಿನಲ್ಲೂ ಗ್ರಾಮದ ಮಕ್ಕಳ ಜೊತೆಗೂಡಿ ಸಂತಸಪಟ್ಟ ರೀತಿ ಕಂಡು ಊರೇ ಸಂಭ್ರಮಿಸಿತು. 

ಸಂಘದ ಅಧ್ಯಕ್ಷ ಅನೀಶ್ ಅಶ್ವತ್ತಾಡಿ ಅಧ್ಯಕ್ಷತೆ ವಹಿಸಿದ್ದರು. ಡಾ. ರೂಪಲತಾ ಕೊಂಗಲಾಯಿ ಧ್ವಜಾರೋಹಣ ನೆರವೇರಿಸಿ, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಲಯನ್ಸ್ ಕ್ಲಬ್ ಮಾಣಿ ವಲಯ ಅಧ್ಯಕ್ಷ ರಾಮ್ ಕಿಶಾನ್ ರೈ ಮಾಡಿದರು.ಕ್ರೀಡಾಕೂಟದಕೆಸರುಗದ್ದೆಯ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷರಾದ ಸಂಜೀವ ಪೂಜಾರಿ ಹಾಗೂ ವಿಠಲ ಕೋಟ್ಯಾನ್ ಪೊಯ್ಕೆ ನೆರವೇರಿಸಿದರು.

ಕುಟುಂಬ ಸಮೇತರಾಗಿ ಧರ್ಮಸ್ಥಳ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ ದರ್ಶನ ಪಡೆದ ನಿಖಿಲ್ ಕುಮಾರಸ್ವಾಮಿ

ಮಾಣಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕಿರಣ್ ಹೆಗ್ಡೆ, ನಿವೃತ್ತ ಶಿಕ್ಷಕ ರಾಮಣ್ಣ ಗೌಡ ಕೋಂಗಲಾಯಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ನಾರ್ಶ ಮುಖ್ಯ ಶಿಕ್ಷಕ ಗೋಪಾಲಕೃಷ್ಣ ನೆರಳಕಟ್ಟೆ, ಸರಕಾರಿ ಪದವಿ ಪೂರ್ವ ಕಾಲೇಜು ವಾಮದಪದವಿನ ರಾಧಾಕೃಷ್ಣಮೂಲ್ಯ, ಮಲ್ಲರಾಯ ದೈವ ಪರಿಚಾರಕರಾದ ರಾಮಣ್ಣ ಗೌಡ, ಬಾಲಪ್ಪ ಮಡಿವಾಳ, ಲಕ್ಷ್ಮಣಪೂಜಾರಿಬಾಕಿಲ,ಪದ್ಮನಾಭ ಪೂಜಾರಿ ಈಡೆಮುಂಡೆವು ಮತ್ತಿತರರಿದರು.

ಕೆಸರು ಗದ್ದೆಯಲ್ಲಿ ಮಕ್ಕಳಿಗೆ,ಮಹಿಳೆಯರಿಗೆ, ಪುರುಷರಿಗೆ, ವಿವಿಧ ಕ್ರೀಡಾಕೂಟಗಳನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ತುಳುವ ಸಂಸ್ಕೃತಿಯ ಚಾಪೆನೆಯುದು, ಬುಟ್ಟಿ ನೆಯ್ಯುವುದು, ಮುಟ್ಟಾಲೆ ಕಟ್ಟುವುದು, ತೆಂಗಿನಗರಿ ನೆಯ್ಯುವುದು, ಅಕ್ಕಿಮುಡಿ ಕಟ್ಟುವ ಪ್ರಾತ್ಯಕ್ಷತೆ ನಡೆಸಲಾಯಿತು. ಯತೀಶ್ ಪೂಂಜಾವ್ ಸ್ವಾಗತಿಸಿ, ವೆಂಕಟೇಶ್ ಮಾಸ್ಟರ್ ನಿರೂಪಿಸಿದರು.

Latest Videos
Follow Us:
Download App:
  • android
  • ios