ಏರ್‌ಲಿಫ್ಟ್ ಆಗಿರೋ 123 ಮಂಗಳೂರಿಗರ ವರದಿಗೆ ಕಾಯುತ್ತಿದೆ ಜಿಲ್ಲಾಡಳಿತ| ಸದ್ಯ ನಗರದ ಎಂಟು ಹೊಟೇಲ್ ಮತ್ತು ಒಂದು ಖಾಸಗಿ ಹಾಸ್ಟೆಲ್‌ನಲ್ಲಿ ಕ್ವಾರೆಂಟೈನ್| ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ 178 ಪ್ರಯಾಣಿಕರ ಪೈಕಿ 123 ಮಂದಿ ಮಂಗಳೂರಿಗರು, ಉಳಿದವರು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರು

ಮಂಗಳೂರು(ಮೇ.15): ದುಬೈನಿಂದ ಮಂಗಳೂರಿಗೆ ಏರ್‌ಲಿಫ್ಟ್ ಆಗಿರುವ 123 ಮಂದಿ ಸೇರಿ ಒಟ್ಟು 252 ಜನರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಇವರಲ್ಲಿ 25 ಮಂದಿ ಗರ್ಭಿಣಿಯರೂ ಕೂಡ ಇದ್ದಾರೆ. ಸದ್ಯ ಇವರೆಲ್ಲರಿಗೆ ನಗರದ ಎಂಟು ಹೊಟೇಲ್ ಮತ್ತು ಒಂದು ಖಾಸಗಿ ಹಾಸ್ಟೆಲ್‌‌ನಲ್ಲಿ ಕ್ವಾರೆಂಟೈನ್ ಮಾಡಲಾಗಿದೆ.

ದುಬೈನಿಂದ ಏರ್‌ಇಂಡಿಯಾ ವಿಮಾನದಲ್ಲಿ 178 ಪ್ರಯಾಣಿಕರು ಬಂದಿಳಿದಿದ್ದರು. ಇವರ ಪೈಕಿ 123 ಮಂದಿ ಮಂಗಳೂರಿನವರಾಗಿದ್ದರೆ, ಉಳಿದವರು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರಯಾಣಿಕರಾಗಿದ್ದಾರೆ. 178 ಮಂದಿಯಲ್ಲಿ 90 ಗಂಡಸರು ಮತ್ತು 88 ಮಹಿಳೆಯರು ಇದ್ದರು. 

ಊಟ, ಹಣ ಕೊಟ್ಟು ವಲಸೆ ಕಾರ್ಮಿಕರ ಬೀಳ್ಕೊಟ್ಟ ಮಂಗ್ಳೂರ ಮಹಾನುಭಾವ!

ಏರ್‌ಇಂಡಿಯಾ ವಿಮಾನದಲ್ಲಿ ಗರ್ಭಿಣಿಯರು ಸಹಿತ 11 ಮಂದಿ 18 ವರ್ಷ ವಯಸ್ಸಿನ ಕೆಳಗಿನವರೂ ಕೂಡ ಪ್ರಯಾಣ ಮಾಡಿದ್ದರು. ಹೀಗಾಗಿ ದುಬೈ ರಿಟರ್ನ್ಸ್ 123 ಮಂದಿ ಸೇರಿ ಒಟ್ಟು 252 ಜನರ ಪರೀಕ್ಷಾ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ.