ಊಟ, ಹಣ ಕೊಟ್ಟು ವಲಸೆ ಕಾರ್ಮಿಕರ ಬೀಳ್ಕೊಟ್ಟ ಮಂಗ್ಳೂರ ಮಹಾನುಭಾವ!

First Published 14, May 2020, 10:43 PM

ಮಂಗಳೂರು(ಮೇ. 14)  ಹೊರ ರಾಜ್ಯಗಳ ವಲಸೆ ಕಾರ್ಮಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವ ವಿಚಾರ ಗೊಂದಲದ ಗೂಡಾಗಿದೆ. ಕೆಲಸವೇ ಇಲ್ಲದ ಹೊತ್ತಲ್ಲಿ ತುತ್ತು ಅನ್ನಕ್ಕೂ ಪರದಾಡುವ ಕಾರ್ಮಿಕರು ರೈಲಿನ ಟಿಕೆಟ್ ದರವನ್ನೂ ಭರಿಸಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಆದರೆ ಮಂಗಳೂರಿನ ಜೋಕಟ್ಟೆ ಎಂಬಲ್ಲಿನ ಮಹಾನುಭಾವರೊಬ್ಬರು ಉತ್ತರ ಭಾರತದ ಕಾರ್ಮಿಕರಿಗೆ ತಿನ್ನಲು ಅನ್ನ ಕೊಟ್ಟು, ಕೈಯ್ಯಲ್ಲಿದ್ದ ಹಣವನ್ನು ಹೊಂದಿಸಿ ರೈಲು ಟಿಕೆಟ್ ಮಾಡಿಕೊಟ್ಟು ಗೌರವಯುತವಾಗಿ ಕಾರ್ಮಿಕರನ್ನು ಬೀಳ್ಕೊಟ್ಟಿದ್ದಾರೆ.

ಅದರಲ್ಲೂ ವಿಶೇಷ ಏನಂದರೆ, ಇಂದು ತೆರಳಿದ ಬಿಹಾರದ ಕಾರ್ಮಿಕರಲ್ಲಿ 14 ಜನರ ಜೇಬು ಪೂರ್ಣ ಬರಿದಾಗಿತ್ತು. ರೈಲು ಪ್ರಯಾಣ ಖಾತರಿಯಾಗಿದ್ದರೂ ಹಣ ಇಲ್ಲದೆ ಪ್ರಯಾಣ ರದ್ದುಗೊಳ್ಳುವ ಸ್ಥಿತಿನಿರ್ಮಾಣಗೊಂಡಿತ್ತು. ಸರಕಾರ ಉಚಿತ ಯಾನಕ್ಕೆ ಸಿದ್ದ ಇರಲಿಲ್ಲ. ಆಗ ಮತ್ತೆ ಅಸಹಾಯಕರ ನೆರವಿಗೆ ಬಂದದ್ದು ಅಬೂಬಕ್ಕರ್ ಬಾವ

ಜೋಕಟ್ಟೆಯಲ್ಲಿ ಬೀಡು ಬಿಟ್ಟಿದ್ದ ವಲಸೆ ಕಾರ್ಮಿಕರಲ್ಲಿ ಬಿಹಾರ ರಾಜ್ಯಕ್ಕೆ ಸೇರಿದವರು ಇಂದು ರೈಲಿನ ಮೂಲಕ ತಮ್ಮ ಊರುಗಳಿಗೆ ತೆರಳಿದರು.

ಜೋಕಟ್ಟೆ ಪಂಚಾಯತ್ ಸದಸ್ಯ ಅಬೂಬಕ್ಕರ್ ಬಾವ ನೇತೃತ್ವದಲ್ಲಿ ಕಾರ್ಮಿಕರಿಗೆ ಹೊಟ್ಟೆ ತುಂಬಾ ಉಣ ಬಡಿಸಿ, ಪ್ರಯಾಣದಲ್ಲಿ ಹಸಿವು ನೀಗಿಸಲು ಊಟದ ಪೊಟ್ಟಣ ಕಟ್ಟಿಕೊಟ್ಟು ಗೌರವ ಪೂರ್ವಕವಾಗಿ ಬೀಳ್ಕೊಡಲಾಯ್ತು.

ಹದಿನಾಲ್ಕು ವಲಸೆ ಕಾರ್ಮಿಕರಿಗೂ ಧೈರ್ಯ ತುಂಬಿ ಸುಮಾರು ಹದಿನೈದು ಸಾವಿರ ರೂಪಾಯಿಗಳನ್ನು ತನ್ನ ಜೇಬಿನಿಂದ ತುಂಬಿ ಕಾರ್ಮಿಕರನ್ಬು ಆತ್ಮೀಯವಾಗಿ ಬೀಳ್ಕೊಟ್ಟರು.

ಮೊನ್ನೆಯೂ ಉತ್ತರ ಭಾರತದ ಮೂಲದ ಕಾರ್ಮಿಕರು ಟಿಕೇಟಿಗೆ ದುಡ್ಡಿಲ್ಲದೆ ಹೊರದಬ್ಬಲ್ಪಟ್ಟಾಗ ಟಿಕೇಟು ಖರೀದಿಸಿ ಕೊಟ್ಟಿದ್ದರು. ವ್ಯವಸ್ಥೆ, ಸಮಾಜ ಅಮಾನವೀಯಗೊಳ್ಳುತ್ತಿರುವ ಪ್ರಸಕ್ತ ದಿನಮಾನದಲ್ಲಿ ಅಬೂಬಕ್ಕರ್ ಬಾವ ಅವರಂತವರು ಹೊಸ ವಿಶ್ವಾಸ ಮೂಡಿಸುತ್ತಿದ್ದಾರೆ.

loader