Asianet Suvarna News Asianet Suvarna News

ನಿಲ್ಲದ ಮರಣಮೃದಂಗ, ದಕ್ಷಿಣ ಕನ್ನಡದಲ್ಲಿ ಮಹಾಮಾರಿಗೆ ಮತ್ತೆ ಇಬ್ಬರು ಬಲಿ

ಭಾನುವಾರ ಬರೋಬ್ಬರಿ 147 ಕೋರೋನಾ ಪ್ರಕರಣಗಳು ಕಂಡುಬಂದು ತೀವ್ರ ಆತಂಕ ಮೂಡಿದ್ದ ದ.ಕ. ಜಿಲ್ಲೆಯಲ್ಲಿ ಸೋಮವಾರ ಕೊರೋನಾ ಸೋಂಕಿತರ ಸಂಖ್ಯೆ ತಗ್ಗಿದೆ. ಹೊಸದಾಗಿ 34 ಪಾಸಿಟಿವ್‌ ಪ್ರಕರಣಗಳಷ್ಟೇ ದೃಢಪಟ್ಟಿವೆ.

2 covid19 death in Mangalore on July 6th
Author
Bangalore, First Published Jul 7, 2020, 8:21 AM IST

ಮಂಗಳೂರು(ಜು.07): ಭಾನುವಾರ ಬರೋಬ್ಬರಿ 147 ಕೋರೋನಾ ಪ್ರಕರಣಗಳು ಕಂಡುಬಂದು ತೀವ್ರ ಆತಂಕ ಮೂಡಿದ್ದ ದ.ಕ. ಜಿಲ್ಲೆಯಲ್ಲಿ ಸೋಮವಾರ ಕೊರೋನಾ ಸೋಂಕಿತರ ಸಂಖ್ಯೆ ತಗ್ಗಿದೆ. ಹೊಸದಾಗಿ 34 ಪಾಸಿಟಿವ್‌ ಪ್ರಕರಣಗಳಷ್ಟೇ ದೃಢಪಟ್ಟಿವೆ. ಆದರೆ ಚಿಕಿತ್ಸೆ ಫಲಿಸದೆ ಇಬ್ಬರು ಅಸುನೀಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ಮಂದಿ ಗುಣಮುಖರಾಗಿ ಡಿಸ್ಚಾಜ್‌ರ್‍ ಆಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೂಲ ಪತ್ತೆಯಾಗದ ಪ್ರಕರಣಗಳು ಹೆಚ್ಚಿರುವುದು ಕಂಡುಬಂದಿದ್ದರೆ, ಸೋಮವಾರ ಇಂಥ ಒಂದು ಪ್ರಕರಣ ಮಾತ್ರ ದಾಖಲಾಗಿದೆ. ಉಳಿದಂತೆ ತೀವ್ರ ಉಸಿರಾಟ ಸಮಸ್ಯೆಯ ಐಎಲ್‌ಐ- 9 ಪ್ರಕರಣ, ಸಾರಿ- 1 ಪ್ರಕರಣವಿದೆ. ಆಸ್ಪತ್ರೆಗೆ ದಾಖಲಾದ 6 ಮಂದಿಯಲ್ಲಿ ಸೋಂಕು ಕಂಡುಬಂದಿದೆ. 17 ಮಂದಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಹರಡಿದೆ.

ಇಬ್ಬರು ಬಲಿ: ಚಿಕಿತ್ಸೆಗೆ ಸ್ಪಂದಿಸದೆ ಒಬ್ಬರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಹಾಗೂ ಮತ್ತೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 52 ವರ್ಷ ವಯಸ್ಸಿನ ವ್ಯಕ್ತಿ ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ರೋಗ, ನ್ಯುಮೋನಿಯಾದಿಂದ ಬಳಲುತ್ತಿದ್ದು ಜು.2ರಂದು ವೆನ್ಲಾಕ್‌ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಸಾವಿಗೀಡಾಗಿದ್ದಾರೆ. ಇನ್ನೊಬ್ಬರು 62 ವರ್ಷದ ವ್ಯಕ್ತಿಯಾಗಿದ್ದು, ಜೂ.27ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರೂ ಕೂಡ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದು ಸೋಮವಾರ ಮೃತಪಟ್ಟಿದ್ದಾರೆ.

ಹೊಟೇಲ್‌, ಅಂಗಡಿಯಿಂದ ಸ್ಥಳೀಯರಿಗೆ ಸೋಂಕು ಪ್ರಸಾರ!

30 ಮಂದಿ ಡಿಸ್ಚಾಜ್‌ರ್‍: ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಿಂದ ಸೋಮವಾರ ಒಟ್ಟು 30 ಮಂದಿ ಬಿಡುಗಡೆಯಾಗಿದ್ದಾರೆ. ಇವರಲ್ಲಿ ಬಹುತೇಕರು 50 ವರ್ಷದೊಳಗಿನವರೇ ಆಗಿದ್ದರೆ, 60 ವರ್ಷ ದಾಟಿದ ನಾಲ್ವರು ಕೂಡ ಸೇರಿದ್ದಾರೆ. ಗರಿಷ್ಠ 70 ವರ್ಷದ ವ್ಯಕ್ತಿ ಕೂಡ ಡಿಸ್ಚಾಜ್‌ರ್‍ ಆಗಿ ಮನೆಗೆ ಮರಳಿದ್ದಾರೆ.

6 ಮಂದಿ ವಾರ್ಡ್‌ಗೆ ಶಿಫ್ಟ್‌: ಭಾನುವಾರ 10 ಮಂದಿಯನ್ನು ಐಸಿಯುಗೆ ಸ್ಥಳಾಂತರಿಸಲಾಗಿದ್ದರೆ, ಸೋಮವಾರ ಅವರಲ್ಲಿ ಆರು ಮಂದಿ ಚೇತರಿಸಿಕೊಂಡಿದ್ದು, ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ಇನ್ನೂ ಮೂವರಿಗೆ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷದ ಮಹಿಳೆಗೆ ವೆಂಟಿಲೇಟರ್‌ ಅಳವಡಿಸಲಾಗಿದೆ.

ಒಟ್ಟು ಸೋಂಕಿತರು- 1276

ಗುಣಮುಖರು- 584

ಮೃತರು- 24

ಚಿಕಿತ್ಸೆ ಪಡೆಯುತ್ತಿರುವವರು- 668

Follow Us:
Download App:
  • android
  • ios