ಬೀದರ್‌(ಮೇ.25): ವಸತಿ ಹಗರಣಕ್ಕೆ ಸಂಬಂಧಿಸಿ ಬೀದರ್‌ ಜಿಲ್ಲಾಧಿಕಾರಿಗಳ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ, ಭಾಲ್ಕಿ ಶಾಸಕ ಈಶ್ವರ್‌ ಖಂಡ್ರೆ ಅವರ ಹೇಳಿಗೆ ಬಿಜೆಪಿ ಕಬ್ಬು ಬೆಳೆಗಾರರ ಪ್ರಕೋಷ್ಠದ ಸಂಚಾಲಕ ಡಿ.ಕೆ.ಸಿದ್ರಾಮ ತೀವ್ರ ಕಿಡಿಕಾರಿದ್ದಾರೆ. 

ದಕ್ಷ ಅಧಿಕಾರಿಗಳ ವಿರುದ್ಧ ಧಮಕಿ ಹಾಕಿ ಮಾನಸಿಕ ಒತ್ತಡ ಹೇರಿದಲ್ಲಿ ಪೊಲೀಸರಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಒಂದೇ ಕಟ್ಟಡದಲ್ಲಿ ವಾಸವಿದ್ದ 11 ಮಂದಿಗೆ ಕೊರೋನಾ ಶಾಕ್..!

ಈ ಬಗ್ಗೆ ಪ್ರತಿ ಹೇಳಿಕೆ ನೀಡಿದ ಸಿದ್ರಾಮ ಅವರು, ಆರೋಪಿ ಸ್ಥಾನದಲ್ಲಿದ್ದು ಅಧಿಕಾರಿಗಳಿಗೆ ನಿಯಮಗಳ ಪಾಠ ಹೇಳುತ್ತಿರುವ ತಮಗೆ ಜಿಲ್ಲಾಧಿಕಾರಿ ಎಚ್‌.ಆರ್‌. ಮಹಾದೇವ ಅವರಿಗೆ ಕ್ಷಮೆ ಕೇಳುವಂತೆ ಸೂಚಿಸಲು ಯಾವ ನೈತಿಕತೆ ಇದೆ? ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರದಲ್ಲಿ ಸಹಿ ಮಾಡಿ, ಫೋಟೊ ಹಾಕಿಕೊಂಡು ತಮ್ಮ ಮನೆಯಲ್ಲಿ ಹಂಚಿರುವುದು ಜಗಜ್ಜಾಹೀರಾಗಿದ್ದರೂ ಇದನ್ನು ತಿಳಿವಳಿಕೆ ಪತ್ರ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ತಿಳಿಸಿದ್ದಾರೆ.